533 ನೇ ಕನಕ ಜಯಂತಿ ಕಾರ್ಯಕ್ರಮ..!

ತಿಪಟೂರು:ನಗರದ ಎಸ್ ವಿ ಪಿ ವಿದ್ಯಾಸಂಸ್ಥೆ ಆವರಣದಲ್ಲಿ ಕನಕದಾಸರ 533 ನೇ ಜಯಂತಿ ಕಾರ್ಯಕ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕ ಶ್ರೀ ಕೆ ಎನ್ ರೇಣುಕಯ್ಯ ಕನ್ನಡ ಸಾಹಿತ್ಯದ ದಾಸ ಪರಂಪರೆಯಲ್ಲಿ ಅದ್ವಿತೀಯ ದಾರ್ಮಿಕ ಕ್ರಾಂತಿ ಮಾಡಿದ ಶ್ರೇಷ್ಠ ಕೀರ್ತನ ಕಾರರು ಕನಕ ದಾಸರು . ಅಂದಿನ ಸಮಾಜ ವ್ಯವಸ್ಥೆಯಲ್ಲಿ ನೆಲೆಯೂರಿದ್ದ ಜಾತಿ ವರ್ಗ ವರ್ಣಗಳ ವಿರುದ್ದ ಅಮೂಲ್ಯವಾದ ಕೀರ್ಥನೆಗಳ ಮೂಲಕ ಜಾಗೃತಿ ಮೂಡಿಸಿದರು, ಜಗತ್ತಿನಲ್ಲಿಯೇ ಯಾರು ಬರೆಯದ ದವಸ ದಾನ್ಯಗಳನ್ನು ಕುರಿತು ರಾಮಾಧಾನ್ಯ ಚರಿತೆ ಕೃತಿ ರಚನೆಯ ಮೂಲಕ ವೈಚಾರಿಕ ಸತ್ಯ ಸಂದೇಶಗಳನ್ನು ಮುಟ್ಟಿಸಿದರು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ಸ್ ಟಿವಿ ತಿಪಟೂರು.

Please follow and like us:

Related posts

Leave a Comment