ಪೈಪ್ ಲೈನ್ ಹೊಡೆದು ಕುಡಿಯುವ ನೀರು ಚರಂಡಿ ಪಾಲು, ಎಚ್ಚೆತ್ತುಕೊಳ್ಳದ ನಗರಸಭೆ ಸಿಬ್ಬಂದಿ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸತತವಾಗಿ ನೀರಿಗೆ ಅಭಾವವಿದ್ದು, ಸರಿಯಾದ ಕುಡಿಯುವ ನೀರಿಗೆ ವ್ಯವಸ್ಥೆಯಿಲ್ಲದೆ ಜಿಲ್ಲೆಯ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರದಲ್ಲಿ 28ನೇ ವಾರ್ಡಿನ ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದ್ದು. ಸರಿಸುಮಾರು 2ತಿಂಗಳಿಂದ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದು ಹೋಗಿ ಅರ್ಧದಷ್ಟು ಕುಡಿಯುವ ನೀರು ಚರಂಡಿ ಪಾಲಾಗಿರುವ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದ್ದರೂ ಸಹ 28ನೇ ವಾರ್ಡಿನ ನಗರಸಭಾ ಸದಸ್ಯರಾಗಿರುವ ಚಂದ್ರಶೇಖರ್ ಹಾಗೂ ನಗರ ಸಭಾ ಸಿಬ್ಬಂದಿಗಳು ಗಮನಹರಿಸುತ್ತಿಲ್ಲ.ಅದೇ ರೀತಿಯಲ್ಲಿ ಚರಂಡಿಯ ಕಾಮಗಾರಿ ನಡೆಯುತ್ತಿದ್ದು, ಪ್ರತಿನಿತ್ಯವೂ ಬೈಕ್ ಸವಾರರು ಓಡಾಡುತ್ತಿದ್ದು. ಅರ್ಧಂಬರ್ಧ ಕಾಮಗಾರಿಕೆ ಸ್ಥಗಿತಗೊಂಡಿದ್ದು, ಬೈಕ್ ಸವಾರರು ಪ್ರತಿನಿತ್ಯವೂ ಯಾರೋ ಒಬ್ಬರು ಬೀಳುತ್ತಿದ್ದಾರೆ ಅದರಲ್ಲೂ ಹೆಚ್ಚಿನದಾಗಿ ಬೈಕ್ ಸವಾರರು ಕಾಮಗಾರಿಕೆ ಪೂರ್ಣಗೊಳಿಸದೆ ಸಂಚಾರಿ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು. ಆದಷ್ಟು ಬೇಗನೆ ಇದರ ಬಗ್ಗೆ ನೂತನ ನಗರಸಭೆ ಅಧ್ಯಕ್ಷರು ಆನಂದರೆಡ್ಡಿ ಹಾಗೂ ಸಿಬ್ಬಂದಿಯವರು ಗಮನಹರಿಸಬೇಕು. ಇಲ್ಲವಾದರೆ ಇನ್ನೂ ಹೆಚ್ಚಿನದಾಗಿ ಅವಗಡ ಸಂಭವಿಸುವ ಪರಿಸ್ಥಿತಿ ಎದುರಾಗುತ್ತದೆ.

ವರದಿ: ಶ್ರೀನಿವಾಸ್ ಎನ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Please follow and like us:

Related posts

Leave a Comment