ಡಿಸೆಂಬರ್ 6 ರಂದು ಮಾತೋಶ್ರೀ ಬಸಮ್ಮ ಶರಬಣ್ಣ ಮಹಾಮನಿ ಟ್ರಸ್ಟ್ ಉದ್ಘಾಟನೆ..!

ಶಹಾಪುರ : ನಗರದ ದೇಶಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಾತೋಶ್ರೀ ಬಸಮ್ಮ ಶರಬಣ್ಣ ಮಹಾಮನಿ ಸೇವಾ ಟ್ರಸ್ಟ್ ರವಿವಾರದಂದು ಬೆಳಿಗ್ಗೆ 10:30 ಗಂಟೆಗೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಬಸವರಾಜ ಮಹಾಮನಿ ಪ್ರಕಟಣೆಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಾಸ್ಯ ಚುಟುಕು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಯಾದಗಿರಿ ಜಿಲ್ಲೆಯ ಶಹಾಪುರ ಸುರಪುರ ಹುಣಸಗಿ ವಡಗೇರಿ ಗುರುಮಿಠಕಲ್ ನಿಂದ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಚುಟುಕು ಕವಿಗಳು ಬಾಗವಹಿಸಿ ತಮ್ಮ ಸ್ವರಚಿತ ಚುಟುಕುಗಳು ವಾಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.ಈ ಸಮಾರಂಭವನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಯುವ ಮುಖಂಡರಾದ ಸಿದ್ದಲಿಂಗರೆಡ್ಡಿ ಸಾಹು ಹತ್ತಿಗುಡೂರು ಉದ್ಘಾಟಿಸಲಿದ್ದು,ಚುಟುಕು ಕವಿಗೋಷ್ಠಿ ಅಧ್ಯಕ್ಷತೆಯನ್ನು ಖ್ಯಾತ ಕಥೆಗಾರರಾದ ಸಿದ್ಧರಾಮ ಹೊನಕಲ್ ವಹಿಸಿಕೊಳ್ಳಲಿದ್ದು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ,ಹಿರಿಯ ಸಾಹಿತಿಗಳಾದ ಹಾಗೂ ಕನ್ನಡ ಪಂಡಿತರಾದ ಡಾ:ಅಬ್ದುಲ್ ಕರೀಂ ಕನ್ಯಾಕೋಳೂರ, ಶರಣ ಸಾಹಿತಿಗಳಾದ ಶಿವಣ್ಣ ಇಜೇರಿ, ಸಿದ್ದಲಿಂಗಪ್ಪ ಮಹಾಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ.

Please follow and like us:

Related posts

Leave a Comment