ಸುಮಲತಾ ಅಂಬರೀಶ್ ಗೆ ಇಂದು 29ನೇ ವರ್ಷದ ವಿವಾಹ ವಾರ್ಷಿಕೊತ್ಸವ..!

ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ ಅವರ ವಿವಾಹವಾಗಿ ಇಂದಿಗೆ 29 ವರ್ಷ. ಈ ಹಿನ್ನೆಲೆಯಲ್ಲಿ ನಟಿ, ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ತಮ್ಮ ದಿವಂಗತ ಪತಿಯನ್ನು ಸ್ಮರಿಸಿ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇವರಿಬ್ಬರ ಅಪರೂಪದ ಫೋಟೋಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇನ್ನೂ ಸುಮಲತಾ ತನ್ನ ಟ್ವೀಟ್ಟರ್ ಖಾತೆಯಲ್ಲಿ “ಇಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು 29 ವರ್ಷ ನನ್ನ ನಿಮ್ಮ ಪ್ರೇಮದ ಪಯಣ ನಿರಂತರ ಸುಂದರ ಕ್ಷಣಗಳನ್ನು ನಮ್ಮ ವಿವಾಹ ವಾರ್ಷಿಕೊತ್ಸವಕ್ಕೆ ಒಲವಿನ ಊಡುಗೊರೆಯಾಗಿ ಈ ವಿಡೀಯೋ ಮಾಡಿರುವ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. 1991ರ ಡಿಸೆಂಬರ್ 8 ರಂದು ಅಂಬರೀಶ್-ಸುಮಲತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ 29 ವರ್ಷಗಳು ತುಂಬಿವೆ. ಈ ಇಷ್ಟು ವರ್ಷಗಳಲ್ಲಿ ಹಂಚಿಕೆ, ಕಾಳಜಿ, ನಗು, ಅಳು, ಕಣ್ಮರೆಯಾಗುವ, ಶೋಧಿಸುವ, ಕತ್ತಲು, ಬೆಳಕು, ಹತಾಶೆ, ಸಂತೋಷ, ಪ್ರೀತಿ ಎಲ್ಲಾ ಜೊತೆಯಾಗಿ ಇದ್ದವು. ಮತ್ತು ಅದ್ಯಾವಾಗಲೂ ಅವು ಜೊತೆಯಾಗಿರಲಿದೆ. ಸದಾ ನಿಮ್ಮನ್ನು ಪ್ರೀತಿಸುವೆ” ಸುಮಲತಾ ಟ್ವೀಟ್ ಮಾಡಿಕೊಂಡಿದ್ದಾರೆ. ಅಂಬಿ ನಮ್ಮನ್ನೆಲ್ಲಾ ಆಗಲಿ ಎರಡು ವರ್ಷಗಳಾಗಿದ್ದು, ಅಂಬಿಯಿಲ್ಲದ ತನ್ನ ಎರಡನೇ ವರ್ಷದ ವಿವಾಹ ವಾರ್ಷಿಕೊತ್ಸವವನ್ನು ಸುಮಲತಾ ಅಂಬರೀಶ್ ಆಚರಿಸಿಕೊಳ್ಳುತ್ತಿದ್ದು, ಪತಿಯನ್ನು ನೆನೆದು ಸಾಕಷ್ಟು ಅಂಬಿ ಜೊತೆಗಿನ ಫೋಟೊ ವಿಡೀಯೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment