70 ಲಕ್ಷ ಭಾರತೀಯರ ಡೆಬಿಟ್, ಕ್ರೆಡಿಟ್ ಕಾರ್ಡ್ ವಿವರ ಸೋರಿಕೆ..!

ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಫೋನ್ ನಂಬರ್, ಇ-ಮೇಲ್ ಸೇರಿದಂತೆ ಭಾರತದ 70 ಲಕ್ಷ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ದಾರರ ವೈಯಕ್ತಿಕ ವಿವರಗಳು ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ.ಅಂತರ್ಜಾಲ ಭದ್ರತಾ ಸಂಶೋಧಕರೊಬ್ಬರು ಈ ಬಗ್ಗೆ ಎಚ್ಚರಿಸಿದ್ದು, ವ್ಯಕ್ತಿಗಳ ಹೆಸರು,ಉದ್ಯೋಗ ಮಾಡುತ್ತಿರುವ ಸಂಸ್ಥೆ, ವಾರ್ಷಿಕ ಆದಾಯದ ವಿವರಗಳೂ ಸೋರಿಕೆಯಾಗುತ್ತಿವೆ ಎಂದು ಸಂಶೋಧಕ ರಾಜಶೇಖರ್ ರಾಜಹರಿಯಾ ಹೇಳಿದ್ದಾರೆ.ಅಂದಾಜು 2 ಜಿಬಿಯಷ್ಟು ಡಾಟಾ ಬೇಸ್ ಸೋರಿಕೆಯಾಗಿದ್ದು, ಬಳಕೆದಾರರ ಖಾತೆಯ ಮಾದರಿ, ಮೊಬೈಲ್ ಅಲರ್ಟ್ ಹೊಂದಿದ್ದಾರೆಯೋ ಇಲ್ಲವೋ ಎಂಬಂತಹ ಸೂಕ್ಷ್ಮ ಮಾಹಿತಿಗಳೂ ಬಹಿರಂಗಗೊಂಡಿದೆ. 2010-2019 ರ ನಡುವಿನ ವಿವರಗಳು ಇದಾಗಿದ್ದು ಹ್ಯಾಕರ್ ಗಳು ಹಾಗೂ ಸ್ಕ್ಯಾಮರ್ ಗಳ ಕೈಸೇರಿದೆ ಎಂಬ ಆತಂಕಕಾರಿ ಮಾಹಿತಿ ನೀಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment