ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಸರ್ಕಲ್ ಇನ್ಸ್ಪೆಕ್ಟರ್ ಜಿಬಿ ಉಮೇಶ್..!

ಮೊಳಕಾಲ್ಮುರು: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಸರ್ಕಲ್ ಇನ್ಸ್ಪೆಕ್ಟರ್ ಜಿಬಿ ಉಮೇಶ್ ಮೊಳಕಾಲ್ಮುರು ಪೊಲೀಸ್ ಠಾಣೆ ಆವರಣದಲ್ಲಿ ಬೆಳ್ಳಂ ಬೆಳಿಗ್ಗೆ ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಮಾಡವುಂತಿಲ್ಲ.ನೀವೀಗ icu ನಲ್ಲಿ ಇದೀರಾ ವೆಂಟಿಲೇಟರ್ ತೆಗೆಯುವುದು ನಮ್ಮ ಕೈಯಲ್ಲೇ ಇದೆ ನಿಮ್ಮಿಂದ ಯಾವುದೇ ದುಷ್ಕ್ರುತ್ಯಗಳು ನಡೆದರೂ ಇಲ್ಲಿಂದ ಗಡಿಪಾರು ಮಾಡುತ್ತೇನೆ ನಿಮ್ಮ ಮೇಲೆ ಪೊಲೀಸ್ ಇಲಾಖೆಯು ಕಟ್ಟು ನಿಟ್ಟಿನ ಕ್ರಮ ಕೈಗೊಳಲಾಗುವುದು.ನೀವು ಕೂಡ ಮನುಷ್ಯರೇ ನಿಮ್ಮ ಬಗ್ಗೆ ನಮಗೆ ಅನುಕಂಪ ಇದೆ ಆದ್ರೆ ಯಾವುದೇ ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ ಇಲ್ಲವಾದರೆ ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತೇವೆ ಎಚ್ಚರಿಕೆಯಿಂದ ಇರಬೇಕು ಮಟ್ಕಾ ಜೂಜು ಇಸ್ಪೀಟ್ ಇಂತಹ ದಂದೆಗಳಿಂದ ಅಂತರ ಕಾಪಾಡಿಕೊಳ್ಳಿ. ಸಮಾಜದ ಸ್ವಾಸ್ಥವನ್ನು ಹಾಳು ಮಾಡಲು ಹೊರಟರೇ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಸ್ಥಳದಲ್ಲಿ ರಾಂಪುರ ಪಿಎಸ್ಐ ಗುಡ್ಡಪ್ಪ ಮತ್ತು ಮೊಳಕಾಲ್ಮುರು ಪಿಎಸ್ಐ ಬಸವರಾಜ್ ಇದ್ದರು.

ವರದಿ- ಪಿ ಎಂ ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Please follow and like us:

Related posts

Leave a Comment