ಖೋಖೋ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾಗಿ ಎಸ್ ಆರ್ ಎಸ್ ದೇವರಾಜ್ ಅವಿರೋಧ ಆಯ್ಕೆ..!

ಚಿಕ್ಕಬಳ್ಳಾಪುರ: ಗುರುವಾರ ನಡೆದ ಚುನಾವಣೆಯಲ್ಲಿ ಖೋಖೋ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾಗಿ ಎಸ್ ಆರ್ ಎಸ್ ದೇವರಾಜ್ ಹಾಗೂ ಉಪಾಧ್ಯಕ್ಷರಾಗಿ ಡಿ.ವಿ ಮುನಿರಾಜು ಅವಿರೋಧವಾಗಿ ಆಯ್ಕೆಯಾಗಿದ್ದು ಬಂದಿರುವಂತಹ ಪದಾಧಿಕಾರಿಗಳಿಗೆ, ಅಧ್ಯಕ್ಷರು ಉಪಾಧ್ಯಕ್ಷರಿಗೆ ಸನ್ಮಾನವನ್ನು ಮಾಡಲಾಯಿತು. ತದನಂತರ ಖೋಖೋ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಎಸ್,ಆರ್,ಎಸ್ ದೇವರಾಜ್ ಅವರು ಮಾತನಾಡಿ ಖೋಖೋ ಅಸೋಸಿಯೇಷನ್ ಗೆ ನನ್ನನ್ನು ಜಿಲ್ಲಾಧ್ಯಕ್ಷರಾಗಿ ಪ್ರೋತ್ಸಾಹಿಸಿರುವ ಎಲ್ಲರಿಗೂ ಕೃತಜ್ಞತೆ ತಿಳಿಸುತ್ತೇನೆ.ಇದೇ ರೀತಿಯಲ್ಲಿ ಇವತ್ತು ಜಿಲ್ಲಾಧ್ಯಕ್ಷರಾದ ಚಾಲನೆ ತೆಗೆದುಕೊಳ್ಳುವ ಮುಖಾಂತರ ಉತ್ತಮವಾದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಖೋಖೋ ಪಂದ್ಯಾವಳಿಯನ್ನು ಮರೆತು ಹೋಗಿದ್ದಾರೆ.ಆದರೆ ಈ ಪಂದ್ಯಾವಳಿಯನ್ನು ಜಿಲ್ಲಾಮಟ್ಟಕ್ಕೆ, ರಾಜ್ಯಮಟ್ಟಕ್ಕೆ ಹಾಗೂ ರಾಷ್ಟ್ರಮಟ್ಟಕ್ಕೆ ಸಹ ತೆಗೆದುಕೊಂಡು ಹೋಗಬೇಕೆಂದು ನನ್ನ ಪ್ರಯತ್ನವಿದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಶಾಲೆ-ಕಾಲೇಜು ಹಂತದಲ್ಲಿ ಖೋಖೋ ಪಂದ್ಯಾವಳಿಯಲ್ಲಿ ಹೆಚ್ಚಿನ ರೀತಿಯಲ್ಲಿ ಹೆಚ್ಚಿನ ತರಬೇತಿ ಹಾಗೂ ಆದ್ಯತೆ ನೀಡಲಾಗುವುದು ಎಂದು ಎಸ್,ಆರ್, ಎಸ್ ದೇವರಾಜ್ ತಿಳಿಸಿದ್ದಾರೆ.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Please follow and like us:

Related posts

Leave a Comment