ಮನೆಯನ್ನೇ ವನವಾಗಿಸಿದ ಪರಿಸರ ಪ್ರೇಮಿ ಡಾ.ಅಮರಗುಂಡಪ್ಪ..!

ರಾಯಾಚೂರು: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದ ಡಾ. ಅಮರಗುಂಡಪ್ಪ ಹುಟ್ಟು ಅಂಗವಿಕಲ. ಅವರಿಗೆ ಪರಿಸರದ ಬಗ್ಗೆ ಎಲ್ಲಿಲ್ಲದ ಕಾಳಜಿ.ಅವರ ಮನೆ ತುಂಬ ಹಸಿರ ವನ. ಮನೆಗೆ ಹೋದರೆ ಎಲ್ಲೆಲ್ಲೂ ಹಸಿರೇ ಹಸಿರು.ಸುತ್ತ ಮುತ್ತ ಹಸಿರು ತುಂಬಿರೋದು ಇವರಿಗೆ ಪರಿಸರದ ಮೇಲೆ ಇನ್ನಿಲ್ಲದ ಕಾಳಜಿ ಪ್ರೀತಿ. ತಮ್ಮ ಮನೆಯನ್ನೇ ಈಗ ವನವನ್ನಾಗಿ ಪರಿವರ್ತಿಸಿದ್ದಾರೆ.ಇವರು ಅಂಗವಿಕಲರಾದರು ಪರಿಸರ ಸೇವೆಗೆ ತಾವು ಮುಂದೆ ನಿಂತು ದಿನ ವನದ ಸ್ವಚ್ಛತೆ ಕಾರ್ಯ ಮಾಡುತ್ತಾರೆ. ಸುತ್ತಮುತ್ತಲಿನ ಜನರಿಗೆ ಇದು ಮಾದರಿಯಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟದಿದ್ದರೆ ಮನುಕುಲಕ್ಕೆ ಕಂಟಕವಾಗುತ್ತದೆ. ಮಾಲಿನ್ಯವನ್ನು ನಾನೊಬ್ಬನೇ ತಡೆಗಟ್ಟಲು ಸಾಧ್ಯವಿಲ್ಲ. ಎಲ್ಲರ ಸಹಕಾರವಿಲ್ಲದೇ ಏನನ್ನೂ ಸಾಧಿಸಲಾಗದು. ನನ್ನಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಪರಿಸರ ಸೇವೆ ಮಾಡಲು ಸದಾ ಸಿದ್ಧ ಎನ್ನುತ್ತಾರೆ ಡಾ. ಅಮರಗುಂಡಪ್ಪ.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment