ಭ್ರಷ್ಟಾಚಾರದಿಂದ ಸರ್ಕಾರಿ ಇಲಾಖೆಗಳು ಹಿಡಿತವನ್ನು ಕಳೆದು ಕೊಳ್ಳುತ್ತಿದೆ- ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ ರಾಧಕೃಷ್ಣ..!

ಮಳವಳ್ಳಿ: ಭ್ರಷ್ಟಾಚಾರದಿಂದಾಗಿ ಸರ್ಕಾರಿ ಇಲಾಖೆಗಳು ತನ್ನ ಚುರುಕುತನ ಹಾಗೂ ಹಿಡಿತವನ್ನು ಕಳೆದು ಕೊಳ್ಳುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ ರಾಧಕೃಷ್ಣ ವಿಷಾದ ವ್ಯಕ್ತಿಪಡಿಸಿದರು. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ,ವಕೀಲರಸಂಘ, ಪೊಲೀಸ್ ಇಲಾಖೆ, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸಹಯೋಗದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು. ಎಲ್ಲಾ ಇಲಾಖೆ ಸ್ವಾರ್ಥಕ್ಕಾಗಿ ದುಡಿಯುವ ಪರಿವರ್ತನೆಯಾಗಿದೆ. ಎಲ್ಲಾ ಇಲಾಖೆಗಳು ಮೌನ ಆಚರಣೆ ಮಾಡುತ್ತಿದೆ ಇಂತಹ ವಾತಾಹರಣ ಜನಸಾಮಾನ್ಯರು ಅಸಹಾಯಕರಾಗಿ ದುಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಪಂಚದಾದ್ಯಂತ ಹಕ್ಕುಗಳ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯಿತ್ತಿದೆ. ಕಾನೂನು ಇದ್ದರೂ ಯಥಾವತ್ತಾಗಿ ಜಾರಿಯಾಗುತ್ತಿಲ್ಲ, ಮುಖ್ಯವಾಗಿ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳುಗಳ ಮೇಲೆ ಆಗುತ್ತಿದೆ.ಇವತ್ತು ಪ್ರಪಂಚದಾದ್ಯಂತ 11ಕೋಟಿ 40 ಮಂದಿ ಮಹಿಳೆಯರು ಹಾಗೂ ಮಕ್ಕಳು ಶೋಷಣೆಗೆ ಒಳಾಗುತ್ತಿದ್ದಾರೆ ದುರಂತ ಏನೆಂದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುವವರೇ ಹಿಂದೆ ದ್ವನಿ ಎತ್ತಿದವವರೇ ದೊಡ್ಡ ಭ್ರಷ್ಟಾಚಾರಿಗಳು, ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡುವವವರ ಹಿಂದೆ ದ್ವನಿ ಎತ್ತಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿವವರು ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾದೀಶೆ ಕೆ.ಶೆಮೀದಾ, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾದೀಶೆ ಐಶ್ವರ್ಯ ಚಿದಾನಂದ ಪಟ್ಟಣಶೆಟ್ಟಿ, ಡಿವೈಎಸ್ ಪಿ ಪೃಥ್ವಿ,ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಯೋಜನಾಧಿಕಾರಿ ಲೀಲಾವತಿ, ಟೌನ್ ಇನ್ಸ್ ಪೆಕ್ಟರ್ ಎ.ಕೆ ರಾಜೇಶ್, ಪತ್ರಕರ್ತಮಾಗನೂರು ಶಿವಕುಮಾರ್, ಎಲ್ಲಾ ಪ್ಯಾನಲ್ ವಕೀಲರುಗಳು ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment