ನನ್ನ ತಾಯಿ ಸನ್ನಿ ಲಿಯೋನ್ ,ತಂದೆ ಇಮ್ರಾನ್ ಹಷ್ಮಿ ಅಂದ ಬಾಲಕ.. ಆತ ಯಾರು ಗೊತ್ತ?

ಬಾಲಿವುಡ್ ನ ಮೋಸ್ಟ್ ರೋಮ್ಯಾಂಟಿಕ್ ಹೀರೋ ಅಂದ್ರೆ ಅವರೇ ಇಮ್ರಾನ್ ಹಷ್ಮಿ,, ಇವರ ಚಿತ್ರದಲ್ಲಿ ರೋಮ್ಯಾಂನ್ಸ್ ಇಲ್ಲದ ದೃಷ್ಯಗಳೇ ಇರುವುದಿಲ್ಲ. ಇವರ ರೀತಿಯೇ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಹಾಟ್ ಬೆಡಗಿ ಸನ್ನಿ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಪ್ರೀತಿ ತನ್ನ ರೋಮ್ಯಾಂಟಿಕ್ ನಟನೆಯಿಂದ ಜನರ ಮನಸ್ಸು ಗೆಲುವಲ್ಲಿ ಸನ್ನಿ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಆದ್ರೆ ಇದೀಗ ಇವರಿಬ್ಬರ ಮಧ್ಯೆ ಒಂದು ಗಾಸಿಪ್ ಸುದ್ದಿ ಎಲ್ಲೇಡೆ ಹರಿದಾಡ್ತಾಯಿದ್ದು ಎಲ್ಲರೂ ಬಾಯಿ ಮೇಲೆ ಕೈಹಿಟ್ಟು ಹೊಂಡಿದ್ದಾರೆ.

ಹೌದು..ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಷ್ಮಿ ಹಾಗೂ ಸನ್ನಿಲಿಯೋನ್ ಗೆ 20 ವರ್ಷದ ಮಗನಿದ್ದಾನೆ ಎಂಬಾ ಸುದ್ದಿ ಎಲ್ಲೇಡೆ ಹರಿದಾಡ್ತಾಯಿದೆ. ಬಾಲಿವುಡ್ ನ ಖ್ಯಾತ ಸೆಲೆಬ್ರೇಟಿಗಳಾದ ಇವರಿಬ್ಬರು ಪರಸ್ಪರ ಮದುವೆ ಆಗಿಲ್ಲ ಆದರೂ ಇವರಿಬ್ಬರಿಗೆ 20 ವರ್ಷದ ಒಬ್ಬ ಮಗನಿದ್ದಾನೆಂದು ಎಲ್ಲೇಡೆ ಸುದ್ದಿ ಆಗಿದ್ದು, ಇಂಥದ್ದೊಂದು ಮಾಹಿತಿ ವೈರಲ್ ಆಗಲು ಕಾರಣ ಆಗಿರುವುದು ಆ ಹುಡುಗನ ಪರೀಕ್ಷೆ ಹಾಲ್ ಟಿಕೇಟ್. ಬಿಹಾರದ ಕಾಲೇಜ್ವೊಂದರಲ್ಲಿ ಓದುತ್ತಿರುವ ಕುಂದನ್ ಕುಮಾರ್ ಎಂಬ ಯುವಕನ ಹಾಲ್ ಟಿಕೆಟ್ ಫೋಟೋ ಎಲ್ಲ ಕಡೆ ವೈರಲ್ ಆಗಿದೆ. ಅದರಲ್ಲಿ ಆತನ ತಂದೆ ಹೆಸರು ಇಮ್ರಾನ್ ಹಷ್ಮಿ ಎಂದು ಬರೆಯಲಾಗಿದ್ದರೆ, ತಾಯಿ ಹೆಸರು ಸನ್ನಿ ಲಿಯೋನ್ ಎಂದಾಗಿದೆ. ಅಲ್ಲದೆ, ವಿಳಾಸದ ಜಾಗದಲ್ಲಿ ಒಂದು ರೆಡ್ ಲೈಟ್ ಏರಿಯಾದ ಹೆಸರನ್ನು ಕೂಡ ನಮೂದಿಸಲಾಗಿದೆಯಂತೆ. ಈ ಸುದ್ದಿ ಎಲ್ಲ ಕಡೆ ಹರಿದಾಡುತ್ತಿದ್ದಂತೆಯೇ ಅದು ಇಮ್ರಾನ್ ಹಷ್ಮಿ ಅವರನ್ನೂ ತಲುಪಿದೆ. ಅದಕ್ಕೆ ಅವರು ಕೂಡಲೇ ಉತ್ತರ ನೀಡಿದ್ದಾರೆ. ‘ಆತ ನನ್ನ ಮಗ ಅಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕಂತೂ ಈ ಬಗ್ಗೆ ಸನ್ನಿ ಲಿಯೋನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ಸನ್ನಿ ಹೆಸರಿನಲ್ಲಿ ಆಗಾಗ ಇಂಥ ಘಟನೆ ನಡೆಯುತ್ತಿರುತ್ತವೆ. ಕೊಲ್ಕತ್ತಾದ ಒಂದು ಕಾಲೇಜಿನ ಮೆರಿಟ್ ಪಟ್ಟಿಯ ನಂ.1 ಸ್ಥಾನದಲ್ಲಿ ಸನ್ನಿ ಹೆಸರು ಇತ್ತೀಚೆಗೆ ಕಾಣಿಸಿಕೊಂಡಿತ್ತು. ಅಷ್ಟಕ್ಕೂ ಹಾಲ್ ಟಿಕೆಟ್ನಲ್ಲಿ ಇಂಥ ಅಚಾತುರ್ಯ ಯಾಕೆ ಆಯಿತು. ಆ ವಿದ್ಯಾರ್ಥಿ ನೀಡಿದ ತಪ್ಪು ಮಾಹಿತಿಯ ಕಾರಣದಿಂದ ಈ ರೀತಿ ಆಗಿದೆಯಾ ಎಂದು ಪತ್ತೆಹಚ್ಚಲಾಗುತ್ತಿದೆ. ಇನ್ನೂ ಪೋಲಿಸರು ಆತನ ಆಧಾರ್ ಕಾರ್ಡ್ ಸಂಖ್ಯೆ ಮತ್ತಿತ್ತರ ಮಾಹಿತಿ ಮೂಲಕ ಆ ವಿದ್ಯಾರ್ಥಿ ಯಾರು ಎಂದು ಪತ್ತೆ ಹಚ್ಚಲಾಗುತ್ತಿದೆ.ಇನ್ನೂ ಆ ವಿದ್ಯಾರ್ಥಿ ಚೇಷ್ಟೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎಂದು ಕಾಲೇಜು ಆಡಳಿತ ವರ್ಗದವರು ಪ್ರತಿಕ್ರಿಯೆ ನೀಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment