ಮೇಕಪ್ ಇಲ್ಲದ ಫೋಟೊ ಹಂಚಿಕೊಂಡ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯ..

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆಯೆಂದೆ ಗುರುತಿಸಿಕೊಳ್ಳುವ ನಟಿ ರಮ್ಯ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಚಿತ್ರರಂಗವಷ್ಟೇ ಅಲ್ಲದೇ ಸೋಶಿಯಾಲ್ ಮೀಡಿಯಾಗಳಲ್ಲೂ ಕೆಲ ಕಾಲ ಕಾಣೆಯಾಗಿದ್ದರು. ಆಗೋ ಈಗೋ ಒಂದೊಂದು ಬಾರಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ನಟಿ ರಮ್ಯ ನಟನೆಯಷ್ಟೇ ಅಲ್ಲದೇ ರಾಜಕೀಯ ರಂಗದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಜೆಡಿಎಸ್ ನಿಂದ ಮಂಡ್ಯದಲ್ಲಿ ಸಂಸದೆಯಾಗಿದ್ದರು. ಇದೀಗ ಮಾಜಿ ಸಂಸದೆ, ನಟಿ ರಮ್ಯ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಮೇಕಪ್ ಇಲ್ಲದ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ರೀಲ್ ಲೈಫ್ ಸಖ್ಖತ್ ಸುಂದ್ರಿಯಾಗಿ ಕೆಲ ನಟಿಯರು ರಿಯಲ್ ಲೈಫ್ ನಲ್ಲಿ ಕೊಂಚ ಡಿಫರೆಂಟ್ ಆಗೆ ಇರ್ತಾರೆ. ಆದ್ರೆ ನಟಿ ರಮ್ಯ ಮಾತ್ರ ಆಗಲ್ಲ ರೀಲ್ ಅಲ್ಲೂ ಸಖ್ಖತ್ ಬ್ಯೂಟಿ, ರಿಯಲ್ ಅಲ್ಲೂ ಅದಕ್ಕಿಂತ ಬ್ಯೂಟಿ ನೊಡುಗರ ಕಣ್ಣು ಕುಕ್ಕುವಂತಿರುವ ನಟಿ ಅದೇಷ್ಟೊ ಹುಡಗರ ಹೃದಯ ಕದ್ದಿರುವ ಚೋರಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಇನ್ ಸ್ಟಾಗ್ರಾಮ್ ನಲ್ಲಿ ತನ್ನ ಮೇಕಪ್ ಇಲ್ಲದಿರುವ ಒಂದು ಫೋಟೊ ಶೇರ್ ಮಾಡಿಕೊಂಡು ಒಂದು ಕ್ಯಾಪ್ಚನ್ ಕೂಡ ಕೊಟ್ಟಿದ್ದಾರೆ. ‘ಕೀಪಿಂಗ್ ಹಿಟ್ ರಿಯಲ್’ ಎಂದು ಕ್ಯಾಫ್ಚನ್ ಕೊಟ್ಟಿದ್ದು, ಅಭಿಮಾನಿಗಳು ರಮ್ಯ ಅವರ ಫೋಟೊ ನೋಡಿ ಫುಲ್ ಫೀದಾ ಆಗಿದ್ದಾರೆ. ಇನ್ನೂ ಇವರ ೀ ಫೋಟೊಗೆ ಅಭಿಮಾನಿಗಳಿಂದ ಸಾಕಷ್ಟು ಕಮೆಂಟ್ಸ್ ಗಳ ಸುರಿಮಳೆಯೇ ಹರಿದುಬಂದಿದ್ದು, ಮತ್ತೇ ಯಾವಾಗ ಚಿತ್ರದಲ್ಲಿ ನಟಿಸುತ್ತೀರ, ನಿಮ್ಮನ್ನು ಮತ್ತೇ ತೆರೆಮೇಲೆ ನೊಡಲು ನಾವೆಲ್ಲಾ ಕಾತುರರಾಗಿದ್ದೇವೆಂದೆಲ್ಲಾ ರಮ್ಯ ಅವರ ಅಭಿಮಾನಿಗಳು ತನ್ನ ನೆಚ್ಚಿನ ತಾರೆಗೆ ಕಮೆಂಟ್ಸ್ ಮಾಡಿದ್ದಾರೆ.

Please follow and like us:

Related posts

Leave a Comment