ಲಿಂಗಸಗೂರಿನಲ್ಲಿ ಬಸ್ ಇಲ್ಲದೆ ಜನರ ಪರದಾಟ..!

ಲಿಂಗಸೂಗೂರು: ಕೆಎಸ್ಆರ್ ಟಿಸಿ ನೌಕರರು ಕರೆ ನೀಡಿರುವ ಬಂದ್ಗೆ ರಾಯಚೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಇನ್ನೂ ಲಿಂಗಸುಗೂರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿತ್ತು. ಬಂದ್ ಮಾಹಿತಿ ಇಲ್ಲದೇ ಗ್ರಾಮಗಳಿಂದ ನಗರಕ್ಕೆ ಬಂದ ಪ್ರಯಾಣಿಕರು ಪರದಾಡುತ್ತಿದ್ದರೆ ಇನ್ನೊಂದೆಡೆ ಸರ್ಕಾರಿ ನೌಕರರು ತಮ್ಮ ಕಾರ್ಯ ಸ್ಥಳಕ್ಕೆ ಹೋಗಲು ಪರದಾಡುತ್ತಿದ್ದರು.ಬೆಳಿಗ್ಗೆಯಿಂದ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು ಕೂಡ ಯಾವ ಬಸ್ ಬರಲಿಲ್ಲ. ಬೇರೆ ಜಿಲ್ಲೆಗಳಿಂದ ಬಂದ ಬಸ್ಸುಗಳನ್ನು ಇಲ್ಲೇ ತಡೆಯಲಾಗಿತ್ತು.ಇದರಿಂದ ಇಂದು ನಾವು ಕೆಲಸಕ್ಕೆ ಹೋಗಲು ಆಗುತ್ತಿಲ್ಲ ವಾಪಸ್ ಗ್ರಾಮಗಳಿಗೆ ಮರಳಲು ಆಗುತ್ತಿಲ್ಲ ಎಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಂಡರು.

ವರದಿ-ವಿರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment