ರಾಯಚೂರಲ್ಲಿ ಸಾರಿಗೆ ಸೇವೆ ಬಂದ್: ಖಾಸಗಿ ವಾಹನಗಳಿಂದ ಡಬಲ್ ಹಣ ವಸೂಲಿ

ರಾಯಚೂರು: ಸಾರಿಗೆ ನೌಕರರ ಪ್ರತಿಭಟನೆಯಿಂದ ಜಿಲ್ಲೆಯಾದ್ಯಂತ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಎಲ್ಲಾ ಕಡೆಯಲ್ಲೂ ತಟ್ಟಿದೆ. ಇದರಿಂದ ಪ್ರಯಾಣಿಕರು ಖಾಸಗಿ ವಾಹನಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಲಾಭವನ್ನಾಗಿಸಿಕೊಂಡಿರುವ ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಮಾಮೂಲಿ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ರಾಯಚೂರಿನಿಂದ ದೇವದುರ್ಗಕ್ಕೆ ಸುಮಾರು 60 ರೂ.ಪ್ರಯಾಣದರವಿದ್ದರೆ, ಈಗ ಖಾಸಗಿ ವಾಹನಗಳು 120 ರಿಂದ 150 ರೂ. ಪ್ರಯಾಣ ದರ ವಸೂಲಿ ಮಾಡುತ್ತಿದ್ದಾರೆ.ರಾಯಚೂರಿನಿಂದ ಲಿಂಗಸೂಗೂರಿಗೆ ಸುಮಾರು 110 ರೂ.ಗಳಿದ್ದು, 200 ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ಪ್ರಯಾಣಿಕರು ಸಹ ತಮ್ಮ ಊರುಗಳಿಗೆ ತೆರಳು ಅನಿವಾರ್ಯವಾಗಿ ಖಾಸಗಿ ವಾಹನಗಳು ಮಾಲೀಕರು ಹೇಳುವಷ್ಟು ಹಣ ನೀಡಿ ತೆರಳುತ್ತಿದ್ದು, ಬಡ ಜನರು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಸಿಟಿ ಬಸ್ಗಳ ಸಂಚಾರ ಬಂದ್ ಮಾಡಿರುವುದರಿಂದ ಆಟೋ ಬಾಡಿಗೆಯೂ ದುಬಾರಿ ಮಾಡುವ ಮೂಲಕ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು.

Please follow and like us:

Related posts

Leave a Comment