ಸಂಕ್ರಾಂತಿ ಹಬ್ಬಕ್ಕೆ ಹೆಂಗಳಿಯರ ಬೆರಳುಗಳ ಮೇಲೆ ಸಂಕ್ರಮಣ ಚಿತ್ತಾರ..!

ಇನ್ನೇನು 2020 ವರ್ಷ ಮುಗಿದು 2021 ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಜನ್ರು ಕಾತುರರಾಗಿದ್ದಾರೆ.ವರ್ಷ ಪ್ರಾರಂಭದ ಮೊದಲನೇ ಹಬ್ಬ ಮಕರ ಸಂಕ್ರಾತಿ. ಹಬ್ಬ ಅಂದ್ಮೇಲೆ ಮನೆಯಲ್ಲಿ ಸಂಭ್ರಮ ಸಡಗರ ಮಾಮೂಲಿ ಅದರಲ್ಲೂ ವರ್ಷದ ಮೊದಲನೇ ಹಬ್ಬ ಅಂದ್ರೆ ಕೇಳ್ಬೇಕ ಮನೆಯ ಹೆಣ್ಣು ಮಕ್ಕಳಿಗೆ ಉಡುಗೆ ತೊಡುಗೆಯದ್ದೆ ಚಿಂತೆಯಾಗಿರುತ್ತೆ. ಇದರ ಜೊತೆಗೆ ಉಗುರುಗಳಿಗೆ ಯಾವ ರೀತಿಯ ಬಣ್ಣವನ್ನು ಹಾಕುವುದು ಡಿಸೈನ್ ಮಾಡೊದು ಅಂತಾ ಚಿಂತೆ ಮಾಡ್ತಾ ಇರುತ್ತಾರೆ. ಇತ್ತೀಚೆಗೆ ಎಲ್ಲಿ ನೋಡುದ್ರು ನೈಲ್ ಆರ್ಟ್ ನದ್ದೆ ಟ್ರೇಂಡ್. ಈ ಬಾರಿಯ ಮಕರ ಸಂಕ್ರಾತಿ ಹಬ್ಬಕ್ಕೆ ಡಿಫರೆಂಟ್ ಆಗಿರೊ ನೈಲ್ ಆರ್ಟ್ ಗಳು ಎಲ್ಲಾ ಹೆಂಗಳಿಯರ ಕೈ ಉಗುರುಗಳ ಮೇಲೆ ಚಿತ್ತಾರವಾಗಿ ರಾರಾಜಿಸುತ್ತಿದೆ.ನೂತನ ವರ್ಷದ ಮೊದಲ ಈ ಹಬ್ಬಕ್ಕೆ ನೈಲ್ ಆರ್ಟ್ ರಂಗೋಲಿ ಸಂಕ್ರಾಂತಿ ಸ್ಪೇಷಲ್ ಅನ್ನಿಸಿಕೊಂಡಿದೆ. ಇನ್ನು ನಾವು ಇಷ್ಟು ಡಿಫರೆಂಟ್ ಆಗಿರುವ ನೈಲ್ ಆರ್ಟ್ ಗಳನ್ನು ಡಿಸೈನ್ ಮಾಡಿಸಲು ಪಾರ್ಲರ್ ಗೆ ಹೊಗ ಬೇಕೆಂದೇನಿಲ್ಲಾ.ಬಣ್ಣಗಳ ಮಿಕ್ಸ್ ಮ್ಯಾಚ್ ಟೆಕ್ನಿಕ್ ಹಾಗೂ ಕ್ರಿಯೇಟಿವ್ ಡ್ರಾಯಿಂಗ್ ನಿಂದ ನಾವೇ ಸ್ವತಹ ಉಗುರುಗಳ ಮೇಲೆ ನೈಲ್ ಆರ್ಟ್ ರಂಗೋಲಿ ಬಿಡಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ದುಪ್ಪಟ್ಟು ಮಾಡಬಹುದು. ಕೈ ಉಗುರುಗಳ ಮೇಲೆ ಮೂಡಿರುವ ಪೊಂಗಲ್ ಹಬ್ಬ ಸಾರುವ ಸಾಂಕೇತಿಕ ಚಿತ್ರ ಹಾಗೂ ಪೊಂಗಲ್ ಪಾಟ್, ಕಬ್ಬು, ಹಸು,ಹ್ಯಾಪಿ ಪೊಂಗಲ್ ಶುಭಾಶಯವನ್ನು ತಿಳಿಸುವ ನೈಲ್ ಡಿಸೈನ್ ಸಂಕ್ರಾಂತಿ ಹಬ್ಬಕ್ಕೆ ಸಿಕ್ಕಾಪಟ್ಟೆ ಟ್ರೇಂಡ್ ಆಗಿದೆ. ಇದರ ಜೊತೆಗೆ ಗಾಳಿ ಪಟ ನೈಲ್ ಆರ್ಟ್ ಕೂಡ ಸಂಕ್ರಾಂತಿ ಹಬ್ಬದ ಸಂಕೇತವಾಗಿದೆ. ಐದು ಬೆರಳಿಗೆ ನೀಲಿ ಆಗಸದ ಬಣ್ಣ ತುಂಬಿ ನಡುವಿನ ಎರೆಡು ಬೆರಳುಗಳ ಮೇಲೆ ಗಾಳಿಪಟದ ಚಿತ್ರ ಬಿಡಿಸುವ ಡಿಸೈನ್ ಕೂಡ ಸೋಷಿಯಾಲ್ ಮೀಡಿಯಾದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಸಂಕ್ರಮಣ ಕಾಲವನ್ನು ಬಿಂಬಿಸುವ ಕೇಸರಿ-ಕೆಂಪು, ಹಳದಿ-ಕಪ್ಪು ಕಾಂಬಿನೇಷನ್ ನ ಸೂರ್ಯೋದಯದ ನೈಲ್ ಆರ್ಟ್ ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿರೊದೆಂತು ಸುಳ್ಳಲ್ಲ.ಸಂಕ್ರಾಂತಿಯ ಹಬ್ಬಕ್ಕೂ ರಂಗೋಲಿಗೂ ಇರುವ ಅವಿನಾಭಾವ ಸಂಬಂಧ ಕಲರ್ ಫುಲ್ ರಂಗೋಲಿ ನೈಲ್ ಆರ್ಟ್ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment