ಕಲಬುರಗಿಯಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ- ಡಿಪೋ ಸೇರಿದಂತೆ ಬಸ್ಸ್ ಗಳು ಬಂದ್ ..!

ಕಲಬುರಗಿ:ನಿನ್ನೆಯಿಂದ ಎಲ್ಲೇಡೆ ಸಾರಿಗೆ ನೌಕರರ ಮುಷ್ಕರ ಜೋರಾಗೆ ಇದ್ದು, ಸರ್ಕಾರದಿಂದ ಮಾತ್ರ ಇದುವರೆಗೂ ಇವರ ಹೋರಾಟಕ್ಕೆ ಯಾವುದೇ ಉತ್ತರ ಬಂದಿಲ್ಲ. ಬೆಂಗಳೂರಿನಲ್ಲಷ್ಟೇ ಅಲ್ಲದೇ ಎಲ್ಲಾ ಉರಿನಲ್ಲೂ ನೌಕರರ ಕೂಗು ಜೊರಾಗೆಯಿದೆ.ಇಂದು ಕಲಬುರುಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸಾರಿಗೆ ನೌಕರರು ಸರಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಳಂದದ ಸಾರಿಗೆ ನೌಕಕರು ರಸ್ತೆಗೆ ಇಳಿಯದೆ ಎಲ್ಲಾ ಬಸ್ಸ್ಗಳನ್ನು ಡಿಪೋದಲ್ಲಿ ಹಾಕಿ ಪ್ರತಿಭಟನೆ ನಡೆಸಿದರು.ಸರಕಾರವು ನಮ್ಮನ್ನು ಸರಕಾರಿ ನೌಕರೆಂದು ಪರಿಗಣಿಸಬೇಕು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ವರದಿ-ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಕಲಬುರಗಿ

Please follow and like us:

Related posts

Leave a Comment