Connect with us

ತಿಪಟೂರು

ಕಲ್ಪತರು ವಿದ್ಯಾಸಂಸ್ಥೆಯ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಸಂಗತಿ- ಪಿ.ಕೆ.ತಿಪ್ಪೇರುದ್ರಪ್ಪ..!

Published

on

ತಿಪಟೂರು: ಕಲ್ಪತರು ವಿದ್ಯಾಸಂಸ್ಥೆಯ ವಿರುದ್ಧ ಆರೋಪಗಳನ್ನು ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಸಹಕಾರ ಇಲಾಖೆಯು ನೀಡಿರುವಂತಹ ನೋಟಿಸ್ ಉತ್ತರವನ್ನು ನೀಡಲಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ತಿಳಿಸಿದರು. ನಗರದ ಕಲ್ಪತರು ತಾಂತ್ರಿಕ ವಿದ್ಯಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಪತರು ವಿದ್ಯಾಸಂಸ್ಥೆಯೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಕೆಲಸದ್ಯರುಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಹಿಂದೆ ಅವರು ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಇಲ್ಲದ ಸಮಸ್ಯೆಗಳನ್ನು ಸೃಷ್ಠಿಸಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಹಕಾರ ಸಂಘದ ಚುನಾವಣೆ ತಡವಾಗಿದೆ. ಅಲ್ಲದೇ ಅವರ ನಿರ್ದೇಶನದಂತೆಯೇ ಸರ್ವಸದಸ್ಯರ ಸಭೆ, ಚುನಾವಣೆಯನ್ನು ನಿಗಧಿಪಡಿಸಲಾಗಿದೆ. ಅಲ್ಲದೇ ಸಹಕಾರ ಸಂಘದ ಜಂಟಿ ನಿರ್ದೇಶಕರು ಅಪರಾದ ಸಾಬೀತಾಗಿರುವ ಹಿನ್ನೆಲೆಯೆಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದು ಇಲ್ಲಿಯವರೆವಿಗೂ ಯಾವುದೇ ರೀತಿಯ ಪರಿಶೀಲನೆ ನಡೆಯದೆ ಈ ರೀತಿ ತಿಳಿಸಿದ್ದಾರೆ. ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಇಲ್ಲಿಯವರೆವಿಗೂ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಫಷ್ಟೀಕರಣ ನೀಡಿದರು.ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಅಧಿಕಾರಸಿಗದ ಹಿನ್ನೆಲೆಯಲ್ಲಿ ಕೆಲಸದಸ್ಯರು ಈ ರೀತಿಯ ಕ್ಷುಲ್ಲಕ ಅಪಾದನೆ ಮಾಡಿ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡಲು ಮುಂದಾಗಿದ್ದಾರೆ. ಸಂಸ್ಥೆಯಲ್ಲಿ ಆಗಿರುವಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಖರ್ಚು, ವೆಚ್ಚದ ಬಗ್ಗೆ ಸಂಪೂರ್ಣ ದಾಖಲೆಗಳಿದ್ದು ಸರ್ವ ಸದಸ್ಯರ ಸಭೆಯಲ್ಲಿ ಎಲ್ಲರಿಗೂ ಪ್ರತಿ ಬಾರಿಯೂ ತಿಳಿಸಲಾಗುತ್ತದೆ. ಪದವಿ ಕಾಲೇಜಿಗೆ ಬರುತ್ತಿದ್ದ ಯುಜಿಸಿ ಅನುದಾನ ತಡೆಹಿಡಿಯಲು ಹಿಂದೆ ಖಜಾಂಚಿಯಾಗಿದ್ದ ಬಿ.ಆರ್.ವಿಶ್ವನಾಥ್ ರಾಜ್ಯಪಾಲರಿಗೆ ಸಂಸ್ಥೆಯ ವಿರುದ್ಧ ಸುಳ್ಳು ಆರೋಪ ಮಾಡಿ ಪತ್ರ ಬರೆದಿದ್ದರು. ಅವರು ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಸೆಂಟ್ರಲ್ ಶಾಲೆಯ ಸಿಬ್ಬಂದಿಗಳ ಪಿ.ಎಫ್ ಹಣವನ್ನು ವರ್ಷಾನುಗಟ್ಟಲೆ ಪಾವತಿಸದೇ 60 ಲಕ್ಷಕ್ಕೂ ಅಧಿಕ ದಂಡವನ್ನು ಸಂಸ್ಥೆಯಿಂದ ಕಟ್ಟಲಾಗಿದೆ ಎಂದು ಆರೋಪಿಸಿದರು. ಅಲ್ಲದೇ ಸಂಸ್ಥೆಯ ಪ್ರಚಾರಕ್ಕಾಗಿ ವಿಡಿಯೋ ಮಾಡಿಸಿರುವುದಾಗಿ 1 ಲಕ್ಷ 95 ಸಾವಿರ ಬಳಸಿಕೊಂಡಿದ್ದಾರೆ.ಆದರೆ ಯಾವುದೇ ವಿಡಿಯೋಮಾಡಿಸಿರುವ ಬಗ್ಗೆ ದಾಖಲೆಗಳಿಲ್ಲ.ಇಂದು (ಡಿ.29) ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥೆಯ ವ್ಯವಹಾರದ ಪೂರ್ತಿ ದಾಖಲೆ ನೀಡಲಿದ್ದು ಸಭೆಗೆ ಹಾಜರಾಗಿ ಪರಿಶೀಲನೆ ಮಾಡಲಿ ಎಂದರು.

ವರದಿ-ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Continue Reading
Click to comment

Leave a Reply

Your email address will not be published. Required fields are marked *

ತಿಪಟೂರು

ನಾಗರಿಕ ಬಂದೂಕು ತರಭೇತಿ ಶಿಬಿರ ಮುಕ್ತಾಯ- IPS ಡಾ.ಕೆ ವಂಶಿಕೃಷ್ಣ ಅವರಿಂದ ಪ್ರಮಾಣ ಪತ್ರ ವಿತರಣೆ..!

Published

on

By

ತಿಪಟೂರು: ತಿಪಟೂರು ನಗರದ ಕಲ್ಪತರು ಆಡಿಟೋರಿಯಂನಲ್ಲಿ ಪೊಲೀಸ್ ಇಲಾಖೆ ವತಿಯಿಂದ 65ನೇ ನಾಗರೀಕ ಬಂದೂಕು ತರಭೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರಿಗೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿಗೆ ಒಂದು ವಾರಗಳ ಕಾಲ ಬಂದೂಕು ಗುರಿ, ಹಾಗೂ ಬಂದೂಕು ಉಪಯೋಗಿಸುವ ವಿಧಿ ವಿಧಾನಗಳನ್ನು ತಿಳಿಸಿ ಜೊಡಲಾಗಿತ್ತು. ಮುಕ್ತಾಯದ ದಿನವಾದ ಇಂದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ಮಾನ್ಯ ಪೊಲೀಸ್ ಅಧ್ಯಕ್ಷರಾದ ಡಾ, ಕೆ.ವಂಶಿಕೃಷ್ಣ IPS ರವರು ಪ್ರದಾನ ಮಾಡಿದರು. ತಿಪಟೂರಿನ ಯುವರಾಜ ಪ್ರಥಮ ಗುರಿಕಾರರಾಗಿ ಮೊದಲನೇ ಪ್ರಶಸ್ತಿ ಪಡೆದರು. ಇನ್ನೂ ಈ ಸಂದರ್ಭದಲ್ಲಿ ತಿಪಟೂರಿನ ನಾಲ್ಕನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶಿವಕುಮಾರ್ ರವರು ಹಾಗೂ ಶಾಸಕರಾದ ಶ್ರೀ ನಾಗೇಶ್ ರವರು ಉಪಸ್ಥಿತಿರಿದ್ದರು. ಇನ್ನೂ ಕಾರ್ಯಕ್ರಮದ ನಿರೂಪಣೆಯನ್ನು, ಹಾಗೂ ನೇತ್ರತ್ವವವನ್ನು ತಿಪಟೂರಿನ ಡಿವೈ ಎಸ್ ಪಿ. ಶ್ರೀ ಚಂದನ್ ಕುಮಾರ್ ರವರು ವಹಿಸಿಕೊಂಡಿದ್ದರು.

ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Continue Reading

ತಿಪಟೂರು

ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ- ಬಿ.ಸಿ ನಾಗೇಶ್..!

Published

on

By

ತಿಪಟೂರು: ನಗರದ ಎಪಿಎಂಸಿ ಯಾರ್ಡ್ ನಲ್ಲಿ ಆರಂಭವಾದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕರಾದ ಬಿ.ಸಿ ನಾಗೇಶ್ ಚಾಲನೆ ನೀಡಿದರು.2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್ ಗೆ 3295.ರಂತೆ ಖರೀದಿಸಲಾಗುವುದು. ರಾಗಿ ಖರೀದಿ ಕೇಂದ್ರದಲ್ಲಿ ಪೂರ್ಣ ಒಣಗಿದ ಹಾಗೂ ಸ್ವಚ್ಚಗೊಳಿಸಿ ಉತ್ತಮ ಗುಣಮಟ್ಟದ ಮತ್ತು ಗ್ರೇಂಡರ್ ಗಳಿಂದ ದೃಢೀಕರಿಸಿದ ಗುಣಮಟ್ಟದ ರಾಗಿ ಮಾತ್ರ ಖರೀದಿಸಲಾಗುವುದು ಕಳಪೆ ಗುಣಮಟ್ಟದ ರಾಗಿಯನ್ನು ತಿರಸ್ಕರಿಸಲಾಗುವುದು ಮತ್ತು ರೈತರು 2020-21ನೇ ಸಾಲಿಗೆ ನೋಂದಣಿಯನ್ನು ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯನ್ನು ತರುವುದು ಕಡ್ಡಾಯವಾಗಿದೆ. ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳ ತಕ್ಕದ್ದು ರೈತರು ಫ್ರೂಟ್ಸ್ ಗುರುತು ಸಂಖ್ಯೆಯನ್ನು ನಮೂದಿಸಿದ ನಂತರ ತಾವು ಬೆಳೆದ ರಾಗಿ ದಾಸ್ತಾನನ್ನು ಮಾದರಿಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ಕೃಷಿ ಇಲಾಖೆ ನೇಮಿಸಿರುವ ಗ್ರೇಡರ್ ಗಳಿಂದ ಗುಣಮಟ್ಟ ಉತ್ತಮವಾಗಿದೆ ಎಂದು ದೃಢೀಕರಿಸಿದ ನಂತರ ರಾಗಿಯನ್ನು ನಿಗದಿತ ದಿನಾಂಕ ತಂದು ಮಾರಾಟ ಮಾಡಬಹುದು ಮಾರಾಟವಾದ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ- ಸಿದ್ಧೇಶ್ವರ ಸಿ ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Continue Reading

ತಿಪಟೂರು

ಸೇತುವೆ ನಿರ್ಮಾಣಕ್ಕಾಗಿ ಬೈಪಾಸ್ ರಸ್ತೆ ತಡೆ- ಗ್ರಾಮಸ್ಥರ ಆಕ್ರೋಶ..!

Published

on

By

ತಿಪಟೂರು: ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರೈತ ವಿರೋಧಿ ಧೋರಣೆ ನಡೆಸುತ್ತಿದ್ದಾರೆ ಎಂದು ತಿಪಟೂರು ತಾಲ್ಲೂಕು, ಕಸಬಾ ಹೋಬಳಿ, ಮಾದಿಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದಾರೆ.ಮಾದಿಹಳ್ಳಿ ಸರ್ವೆ ನಂಬರ್ 8,9,10,11,12,13 ಮತ್ತು 304ರ ಸರ್ಕಾರಿ ಖರಾಬು ಜಮೀನುಗಳಲ್ಲಿ,ಸರಿ ಸುಮಾರು 10 ರಿಂದ 20 ಅಡಿ ಎತ್ತರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದುಹೋಗಿದ್ದು, ಈ ರಸ್ತೆಗೆ ಲಗತ್ತಾಗಿರುವ ಅಕ್ಕಪಕ್ಕದ ಗ್ರಾಮದ ರೈತರು, ಮಾದಿಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿದಿನ ಸುಮಾರು 50 ರಿಂದ 100ರೈತರು ಹಾಲನ್ನು ಹಾಕುತ್ತಿದ್ದಾರೆ, ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಾದಿ ಹಳ್ಳಿಯಿಂದ ಕೊಬ್ಬರಿ ದೊಡ್ಡಯ್ಯನ ಪಾಳ್ಯ ಮತ್ತು ವಾಸುದೇವರಹಳ್ಳಿಗೆ ಪ್ರತಿದಿನ ರೈತರು, ಕೃಷಿ ಕಾರ್ಮಿಕರು, ದನ ಕರುಗಳು, ಟ್ರ್ಯಾಕ್ಟರ್ ಜೆಸಿಬಿ ಇನ್ನೀತರ ಯಂತ್ರಗಳು ಹಾಗೂ ಇದೆ ಮಾದಿಹಳ್ಳಿ ಸರ್ಕಾರಿ ಜಮೀನಿನಲ್ಲಿ ಶ್ರೀ ಸಿದ್ಧಪ್ಪ ದೇವಸ್ಥಾನ ಮತ್ತು ಶ್ರೀ ಗಂಗಮ್ಮ ನವರ ಕ್ಷೇತ್ರಕ್ಕೆ ಪ್ರತಿದಿನ ಭಕ್ತಾದಿಗಳು ಕಾಲು ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಸಂಚರಿಸುತ್ತಿದ್ದು 3 ಸೇತುವೆಗಳ ಅವಶ್ಯಕತೆಯಿದೆ. ಆದ್ದರಿಂದ ಸರ್ಕಾರ ಸೇತುವೆಗಳನ್ನು ನಿರ್ಮಿಸದೆ ಹೋದರೆ ಪ್ರತಿದಿನ ರೈತರು 8 ರಿಂದ 10 ಕಿ ಮೀ ಬಳಸಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗುತ್ತದೆ.ಸರ್ಕಾರ ಹಾಗೂ ಜನಪ್ರತಿನಿಧಿಗಳು ಸೇತುವೆಯನ್ನು ನಿರ್ಮಿಸಿ ಕೊಡಬೇಕೆಂದು ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡಬೇಕೆಂದು ಎಂ ದಯಾನಂದ ಸ್ವಾಮಿ ಗ್ರಾಮಸ್ಥರ ಪರವಾಗಿ ಕೇಳಿಕೊಂಡರು.ಇದೇ ಸಂದರ್ಭದಲ್ಲಿ ಎಂ.ದಯಾನಂದ ಸ್ವಾಮಿ ಪ್ರಕಾಶ್ ಕೆಎಂಎಫ್ ನಿರ್ದೇಶಕರು, ಗಂಗಾಧರಯ್ಯ ಮಾಜಿ ಎಪಿಎಂಸಿ ನಿರ್ದೇಶಕರು,ಮಾಧುಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರು, ಯೋಗಾನಂದ್ ವಕೀಲರು, ಪ್ರಭುಸ್ವಾಮಿ ಎಂ ಎಸ್, ಪ್ರಭುಸ್ವಾಮಿ ನವಿಲೆ, ಯಡಿಯೂರಪ್ಪ, ಕುಮಾರಸ್ವಾಮಿ, ಷಡಾಕ್ಷರಿ,ಸಿದ್ದಮಲ್ಲಯ್ಯ, ಬಸವರಾಜು ಇನ್ನೂ ಮುಂತಾದ ಮಾದಿಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ-ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Continue Reading

Trending

Copyright © 2023 EXPRESS TV KANNADA

canlı maç izle selcuksports deneme bonusu deneme bonusu veren siteler bahis siteleri jojobet Hack forumPHP Shell indiryaş sınırı olmayan bahis sitelerikareasbetsiyah bayrak ayna amirkareasbet girişbetingo güncel girişdizimatgobahis girişasper casino girişbakırköy escortdeneme bonusu veren sitelerbahis forumkareasbetBitcoin Kabul Eden Bahis Sitelerigüvenilir casino siteleriGüvenilir poker siteleriSüper Ligyabancı dizitürbanlı escortFındıkzade Escortesbet girişbullbahis girişbullbahisbullbahisbenimbahis girişbenimbahisCasibom güncel girişcasino siteleriizmir escortBakırköy EscortAnkara Travestiizmir travestiesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortmariobet girişbetkom giriştipobet girişbetkomtarafbettarafbettarafbetbetkombetturkey girişbetturkey girişbetturkey twittersahabetmariobet güncel girişmariobet30 TL Bonus Veren Bahis Siteleri betmatikmariobetonwinbetistsüpertotobetgrandpashabet telegramBetist Girişen iyi slot sitelerixslot giriş adresitipobet365ilk yatırım bonusu veren sitelerDeneme Bonusu Veren Siteler