ಉಪಯೋಗಕ್ಕೆ ಬಾರದ ಶಾಲಾ ಕಟ್ಟಡ- ಅಧಿಕಾರಿಗಳ ನಿರ್ಲಕ್ಷ್ಯ..!

ಶಹಾಪುರ: ಶಾಲಾ ಕಟ್ಟಡವೊಂದು ಉಪಯೋಗಕ್ಕೆ ಬಾರದೆ ಪಾಳು ಬಿದ್ದ ದುಸ್ಥಿತಿಯಲ್ಲಿರುವುದು ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಕಂಡು ಬಂದಿತು. ಗೋಗಿ ಗ್ರಾಮದ ಬಸ್ ನಿಲ್ದಾಣದ ರಸ್ತೆಗೆ ಹೊಂದಿಕೊಂಡಿರುವ ಪ್ರಾಥಮಿಕ ಶಾಲಾ ಕಟ್ಟಡ ಬಳಕೆಯಾಗದೆ ನಿರುಪಯುಕ್ತಗೊಂಡಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತವೆ ಆದರೆ ಈ ಗ್ರಾಮದಲ್ಲಿ ಶಾಲಾ ಸುತ್ತಮುತ್ತಲೂ ತಿಪ್ಪೆಗುಂಡಿಗಳು ಹಾಕಿರುವುದರಿಂದ ಗಬ್ಬೆದ್ದು ನಾರುತ್ತಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಜನ ಪ್ರತಿ ನಿಧಿಗಳಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ಕಿಂಚಿತ್ತಾದರೂ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಬೇಸರ ವ್ಯಕ್ತಪಡಿಸಿ ಇದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕಟ್ಟಡವನ್ನು ಸ್ವಚ್ಛತೆಗೊಳಿಸಿ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪ್ರಗತಿಪರ ಚಿಂತಕರು ಹೋರಾಟಗಾರರು ಕೂಡಿಕೊಂಡು ಬೃಹತ್…

Read More

630 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ- ಶಾಸಕ ಡಾ.ಕೆ ಅನ್ನದಾನಿ ಅವರಿಂದ ಗುದ್ದಲಿ ಪೂಜೆ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಅಲದಹಳ್ಳಿ,ಕಂಸಾಗರ, ಚನ್ನೀಪುರ ಹುಲ್ಲೇಗಾಲ, ಹೂವಿನಕೊಪ್ಪಲು ಗ್ರಾಮಗಳಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರು 630 ಲಕ್ಷ ರೂ ವೆಚ್ಚದ ರಸ್ತೆಯ ಗುದ್ದಲಿ ಪೂಜೆ ನೇರವೇರಿಸಿದರು.ಎನ್ ಹೆಚ್ 209 ನಿಂದಾಗಿ ಅಟುವನಹಳ್ಳಿ, ಕಂಸಾಗರ, ಲಿಂಗಣಾಪುರದ ಮಾರ್ಗವಾಗಿ ಚಂದಹಳ್ಳಿಗೆ ಸೇರುವ ರಸ್ತೆ, 278 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಇದಲ್ಲದೆ ಚನ್ನೀಪುರ ಮಾರ್ಗವಾಗಿ ದಡಮಹಳ್ಳಿಗೆ ಸೇರುವ ರಸ್ತೆ, 332 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ,ಇದಲ್ಲದೆ ಹೂವಿನಕೊಪ್ಪಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೇರಿಸಿದರು. ಇನ್ನೂ ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವಿ, ಚಂದಹಳ್ಳಿ ಶ್ರೀಧರ್ ಸೇರಿದಂತೆ ಮತ್ತಿತ್ತರರು ಇದ್ದರು ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Read More

14 ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ-ಪಿಡಿಒ ವಿರುದ್ಧ ಆಯೋಗಕ್ಕೆ ದೂರು..!

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಪಿಡಿಒ 14ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಬಳಕೆ ಮಾಡದೇ,ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ವಿರುದ್ಧ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಿಗೆ ದೂರ ಸಲ್ಲಿಸಿದ್ದಾರೆ. ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಕೆಲಸ ಆಗದೆ ಬಿಲ್ ಮಾಡಿಕೊಂಡಿದ್ದಾರೆ.ಇದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ವರದಿ ಕೇಳಿದರೆ ಇದುವರೆಗೂ ಪಿಡಿಒ ಉತ್ತರ ಕೊಡದೇ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ, ಎಸ್ಸಿ-ಎಸ್ಟಿ, ಮಕ್ಕಳಿಗೆ ಪ್ರತಿ ವರ್ಷ ಬುಕ್ಕುಗಳ ವಿತರಣೆ, ಶೌಚಾಲಯಗಳು ಆಯ ಸ್ಥಳಗಳಲ್ಲಿ ಇಲ್ಲದೇ ಹೋದರೂ ಬಿಲ್ ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ದನದ ಶೆಡ್ ಸೇರಿದಂತೆ ವಿವಿಧ ಕಾಮಗಾರಿಗಳು ಆಗದೇ ಬಿಲ್ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.ಇಂತಹ ಅಧಿಕಾರಿಗಳ ವಿರುದ್ಧ…

Read More

ಅನುಮಾನಸ್ಪದ ರೀತಿಯಲ್ಲಿ ರೈಲ್ವೆ ಹಳಿ ಬಳಿ ಯುವಕನ ಶವ ಪತ್ತೆ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಎದುರಿನಲ್ಲಿರುವ ರೈಲ್ವೆ ಹಳಿ ಬಳಿ ಅನುಮಾನಸ್ಪದವಾಗಿ ಯುವಕನ ಶವ ಪತ್ತೆಯಾಗಿದೆ. ಮೃತ ದುರ್ದೈವಿ ಶಿಡ್ಲಘಟ್ಟದ ನಿವಾಸಿ ಬರ್ಕತ್ ಎಂದು ತಿಳಿದು ಬಂದಿದೆ. ಇನ್ನೂ ಇದು ಕೊಲೆಯೋ ಆತ್ಮಹತ್ಯೆಯೋ ಎಂಬುವುದು ಸ್ಪಷ್ಟವಾಗಿಲ್ಲ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಳಿಸರು ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದು, ಬೈಯಪ್ಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Read More

ನೆಚ್ಚಿನ ಸ್ಟಾರ್ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು..!

ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ,ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ತೆಲುಗು ಆರಾಧ್ಯ ದೈವ ದಿವಂಗತ ಎನ್.ಟಿ. ರಾಮರಾವ್ ಅವರ ಪುತ್ರ ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕರು ಆದಂತಹ ನಂದಮೂರಿ ಬಾಲಕೃಷ್ಣ ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೂಪುರ ಕ್ಷೇತ್ರಕ್ಕೆ ಹೋಗಲು ಗೌರಿಬಿದನೂರು ಮುಖಾಂತರ ಹಾದು ಹೋಗಿದ್ದಾರೆ.ಇನ್ನೂ ತಮ್ಮ ನೆಚ್ಚಿನ ನಟನ ಆಗಮನದ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ ಗೇಟ್ ಬಳಿ ರಸ್ತೆಯ ಎರಡೂ ಕಡೆ ನಿಂತು ಸ್ವಾಗತ ಕೋರಿ ಅವರ ಕಾರನ್ನು ತಡೆದು ಮಾಲಾರ್ಪಣೆ ಮಾಡಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.ಅಭಿಮಾನಿಗಳನ್ನು ಕಂಡು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಅಭಿಮಾನಿಗಳ ಅಭಿಮಾನ ಹಾಗೂ ಅವರ ಪ್ರೀತಿಯನ್ನು ಕಂಡು ಎಲ್ಲರಿಗೂ ಕೈಮುಗಿದು ಹಿಂದೂಪುರ ಕಡೆ ಹೊರಟಿದ್ದಾರೆ.ತೆಲುಗು ಪ್ರಭಾವವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದರಲ್ಲೂ…

Read More

ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ..!

ಸಿಂಧನೂರು: ಇತ್ತೀಚಿಗೆ ಜರುಗಿದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮೀಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ ಮಾಡಲಾಯಿತು.ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿರುವ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ. ವೆಂಕಟರಾವ್ ನಾಡಗೌಡ ಯಾವುದೇ ಹೋರಾಟವಾಗಲಿ, ಸಂಘಟನೆಯಾಗಲಿ ಮಾಡಿಕೊಂಡು ಶಾಸಕರಾದವರಲ್ಲ ಸಾಂದರ್ಭಿಕವಾಗಿ ಶಾಸಕ, ಸಚಿವನಾದ ಆದರೆ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಶೂನ್ಯ. ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿ ಹಿಡಿಯಬೇಕೆಂಬ ಉದ್ದೇಶದಿಂದ ಆಸೆ ಆಮಿಷಗಳನ್ನು ಒಡ್ಡಬಹುದು. ಆಸೆ ಆಮಿಷಗಳಿಗೆ ಬಲಿಯಾಗ ಬಾರದು ಎಂದು ಹೇಳಿದರು. ಇನ್ನೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಯುವಕರನ್ನು ರಾಜಕೀಯಕ್ಕೆ ಕರೆ ತರಬೇಕು ಹಾಗೂ ಗ್ರಾಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆಗೊಳಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ…

Read More

ಹುಡುಗಿಯರನ್ನು ಚುಡಾಯಿಸಿ ಧರ್ಮದೇಟು ತಿಂದ ಬೀದಿ ಕಾಮಣ್ಣರು..!

ಬಾಗೇಪಲ್ಲಿ: ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗಾ ತಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೊರೊನಾದಿಂದಾಗಿ ಕಾಲೇಜ್ ಗಳು ಕೆಲತಿಂಗಳಿಂದ ಲಾಕ್ ಆಗಿದ್ದವು. ಇದೇ ಜನವರಿ ಒಂದರಿಂದ ಕಾಲೇಜ್ ಗಳು ಪುನಃ ಆರಂಭವಾಗಿದ್ದು,ವಿದ್ಯಾರ್ಥಿನಿಯರು ಕಾಲೇಜ್ ಮುಗಿಸಿ ಸ್ವಗ್ರಾಮಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದು ಬಸ್ ಗಾಗಿ ಕಾಯುತ್ತಿದ್ದರು. ಹೀಗಿರುವಾಗ ಆಂಧ್ರ ಪ್ರದೇಶದ ಕೊಡೂರು ಮೂಲದ ಪುಂಡ ಯುವಕರ ಗುಂಪು ಪ್ರತಿನಿತ್ಯ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿತ್ತು. ಆದ್ರೆ ಇಂದು ಬೀದಿ ಕಾಮಣ್ಣರ ಗ್ರಹಚಾರ ಕೆಟ್ಟಿತ್ತು. ಎಂದಿನಂತೆ ಸ್ವಗ್ರಾಮಗಳಿಗೆ ತೆರಳಲು ವಿದ್ಯಾರ್ಥಿನಿಯರು ಬಸ್ ನಿಲ್ದಾಣಕ್ಕೆ ಬಂದಾಗ ಈ ನಾಲ್ವರು ಕಾಮಣ್ಣರು ವಿದ್ಯಾರ್ಥಿನಿಯರನ್ನು ಚುಡಾಯಿಸಲು ಮುಂದಾಗಿದ್ದಾರೆ. ತಕ್ಷಣ ಅಲ್ಲಿಯೇ ಇದ್ದ ಸಾರ್ವಜನಿಕರು ಬೀದಿ ಕಾಮಣ್ಣರಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾಿರೆ. ಪದೇ ಪದೇ ಪುಂಡರ…

Read More

ಭತ್ತ ವೈವಿದ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆವಿ ವೆಂಕಟೇಶ್ ಭೇಟಿ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಭತ್ತ ವೈವಿದ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆವಿ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿರುಗಾವಲು ಗ್ರಾಮದಲ್ಲಿರುವ ಸೈಯದ್ ಘನಿಖಾನ್ ರವರು 1350 ದೇಶಿ ಹಾಗೂ ವಿದೇಶಿ ಭತ್ತತಳಿ ಬೆಳೆದಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ ವೆಂಕಟೇಶ್ ರವರು ಭೇಟಿ ಸೈಯದ್ ಘನಿ ಖಾನ್ ರವರಿಂದ ಹಾಗೂ ಅವರ ಪುತ್ರ ಸೈಯದ್ ಮಹಮದ್ ಪುಟ್ಟ ಬಾಲಕನಿಂದ ಮಾಹಿತಿ ಪಡೆದುಕೊಂಡರು. ಇದಲ್ಲದೆ ಅವರು ಬೆಳೆದ ಜಮೀನಿಗಳಿಗೆ ಬೇಟಿ ನೀಡಿದರು. ಬಳಿಕ ವಾಹಿನಿಯೊಂದಿಗೆ ಜಿಲ್ಲಾಧಿಕಾರಿ ಡಾ.ಕೆ ವಿ ವೆಂಕಟೇಶ್ ಮಾತನಾಡಿ, ಘನಿ ಖಾನ್ ರವರು ಭತ್ತತಳಿ ಸಂರಕ್ಷಣೆ ಮಾಡುವಲ್ಲಿ ಗಣನೀಯ ಸಾಧನೆ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೂ ಈ ಕುಟುಂಬವೇ ಭತ್ತದ ತಳಿ ಸಂರಕ್ಷಣೆ ಮಾಡಲು ಪಣ ತೊಟ್ಟಿದ್ದಾರೆ, ಇವರ ರೀತಿ ಪ್ರತಿಯೊಬ್ಬ ರೈತರು ಮಾಡುವಂತೆ ಕರೆ ನೀಡಿದರು. ಇನ್ನೂ ಈ ಸಂದರ್ಭದಲ್ಲಿ…

Read More

14 ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ-ಪಿಡಿಒ ವಿರುದ್ಧ ಆಯೋಗಕ್ಕೆ ದೂರು..!

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಪಿಡಿಒ 14ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಬಳಕೆ ಮಾಡದೇ,ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ವಿರುದ್ಧ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಿಗೆ ದೂರ ಸಲ್ಲಿಸಿದ್ದಾರೆ. ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಕೆಲಸ ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ವರದಿ ಕೇಳಿದರೆ ಇದುವರೆಗೂ ಪಿಡಿಒ ಉತ್ತರ ಕೊಡದೇ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ,ಎಸ್ಸಿ-ಎಸ್ಟಿ, ಮಕ್ಕಳಿಗೆ ಪ್ರತಿ ವರ್ಷ ಬುಕ್ಕುಗಳ ವಿತರಣೆ, ಶೌಚಾಲಯಗಳು ಆಯ ಸ್ಥಳಗಳಲ್ಲಿ ಇಲ್ಲದೇ ಹೋದರೂ ಬಿಲ್ ಗಳನ್ನು ಮಾಡಿದ್ದಾರೆ.ಅಷ್ಟೇ ಅಲ್ಲದೇ ದನದ ಶೆಡ್ ಸೇರಿದಂತೆ ವಿವಿಧ ಕಾಮಗಾರಿಗಳು ಆಗದೇ ಬಿಲ್ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ…

Read More

ಅನೈತಿಕ ಸಂಬಂಧದ ಹಿನ್ನಲೆ ಪತಿಯಿಂದಲೇ ಪತ್ನಿ ಹಾಗೂ ಪ್ರಿಯಕರನ ಹತ್ಯೆ..!

ಇಂಡಿ: ಅನೈತಿಕ ಸಂಬಂಧದ ಹಿನ್ನೆಲೆ ಪತ್ನಿಯನ್ನು ಮತ್ತು ಆಕೆಯ ಪ್ರಿಯಕರನನ್ನು ಪತಿ ಲಕ್ಷ್ಮಮ್ ಎಂಬಾತ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಂಥನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತೋಟದ ಮನೆಯಲ್ಲಿ ರುದ್ರಪ್ಪ ಆಲಮೇಲ ಹಾಗೂ 35 ವರ್ಷದ ಈರಮ್ಮ ಆಲಮೇಲ ಮೃತ ದುರ್ದೈವಿಗಳಾಗಿದ್ದಾರೆ.ಇನ್ನೂ ನಿನ್ನೇ ರಾತ್ರಿ ಈ ಘಟನೆ ಸಂಭವಿಸಿದ್ದು,ಆರೋಪಿ ಲಕ್ಷ್ಮಮ್ ಪರಾರಿಯಾಗಿದ್ಧಾನೆ.ಇನ್ನೂ ವಿಷಯತಿಳಿಯುತ್ತಿದ್ದಂತೆ ಸ್ಥಳಕ್ಕೆ ಇಂಡಿ ಸಿಪಿಐ.ರಾಜಶೇಖರ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಇಂಡಿ

Read More