Connect with us

ಅರಸೀಕೆರೆ

ಗೆದ್ದ ಅಭ್ಯರ್ಥಿಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಪಕ್ಷದಿಂದ ಹೊಸ ತಂತ್ರ..!

Published

on

ಅರಸೀಕೆರೆ: ಜೇನುಕಲ್ಲು ಸಿದ್ದೇಶ್ವರ ಪಾದುಕೆ ಆಣೆಗೂ ನಾವು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ನೀವು ಹೇಳಿದಾಗೆ ಕೇಳ್ತೀವಿ ಅಂತ ವಿಭಿನ್ನವಾಗಿ ಪ್ರಮಾಣ ಮಾಡಿಸುವ ಮುಖಾಂತರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾದ ಬೆಂಬಲಿತ ಸದಸ್ಯರುಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ವಿಚಿತ್ರ ಪದ್ಧತಿಯನ್ನು ಶಾಸಕರು ಮಾಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇಂತಹದೊಂದು ಘಟನೆ ಸಾಕ್ಷಿಯಾಗಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಬೆಟ್ಟದ ಮೇಲಿರುವ ಜೇನುಕಲ್ಲು ಸಿದ್ದೇಶ್ವರ ಸನ್ನಿಧಿಯಲ್ಲಿ. ಶೇಕಡ 80ಕ್ಕೂ ಅಧಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಮುಖಂಡರುಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕರೆ ಮಾಡಿ ದೂರವಾಣಿ ಮುಖಾಂತರ ಆಮಿಷವೊಡ್ಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ, ಗೆಲುವು ಸಾಧಿಸಿರುವ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅರಸೀಕೆರೆ ನಗರದ ಹೊರಭಾಗದಲ್ಲಿರುವ ಜೇನುಕಲ್ಲು ಸಿದ್ದೇಶ್ವರ ಬೆಟ್ಟಕ್ಕೆ ಕರೆದೊಯ್ದು ಆಣೆ-ಪ್ರಮಾಣ ಮಾಡಿಸಿಕೊಂಡಿದ್ದಾರೆ. ಸಿದ್ದೇಶ್ವರ ಪಾದುಕೆಯ ಬಳಿ ಹೋಮಕುಂಡಕ್ಕೆ ಕರ್ಪೂರವನ್ನು ಹಾಕುವ ಮೂಲಕ ಶಾಸಕರು ಐದು ವರ್ಷಗಳ ಕಾಲ ನಮಗೆ ಶಾಸಕರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೆ ನಾವು ಕೆಲಸ ಮಾಡಿಕೊಂಡು ಹೊಗ್ತೇವೆ.ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಸಿದ್ದೇಶ್ವರ ಆಣೆ. ಎಂಬ ಮಾತನ್ನು ಅಭ್ಯರ್ಥಿಗಳಿಂದ ಹೇಳಿಸುವ ಮೂಲಕ ಕುಂಡಕ್ಕೆ ಕರ್ಪೂರ ಹಾಕಿ ಪಕ್ಷಕ್ಕೆ ದ್ರೋಹ ಬಗೆದಂತೆ ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದ್ದಾರೆ. ನಿನ್ನೇ ರಾತ್ರಿ ಆಣೆ ಪ್ರಮಾಣ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಡಳಿತ ಪಕ್ಷ ಸೇರಿದಂತೆ ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮ ಪಂಚಾಯಿತಿ ಚುನಾವಣೆ ಎಂದರೇ ಅದೊಂದು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವಂತದ್ದು,ತಮ್ಮ ಗ್ರಾಮವನ್ನು ಅವರುಗಳೇ ಸ್ವತಹ ಅಭಿವೃದ್ಧಿ ಪಡಿಸಬೇಕು ಪಕ್ಷಬೇಧ ಮರೆತು ಕೆಲಸ ಕಾರ್ಯ ಮಾಡಿಕೊಂಡು ಹೋಗಬೇಕಾದ ಅವರನ್ನು ಪಕ್ಷದ ಹೆಸರಲ್ಲಿ ಮತ್ತು ದೇವರ ಹೆಸರಲ್ಲಿ ಆಣೆ-ಪ್ರಮಾಣ ಮಾಡಿಸಿ ಮೂಢನಂಬಿಕೆಯ ಪರಮಾವಧಿಯನ್ನು ಸ್ಥಾಪಿಸುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುವುದು ಕೆಲವರ ಮಾತಾಗಿದೆ. ಇನ್ನೂ ಗ್ರಾಮ ಪಂಚಾಯಿತಿಯ ಅಧಿಕಾರ ಹಿಡಿಯಲು ಚುನಾವಣೆಯಲ್ಲಿ ಗೆದ್ದಂತಹ ನಾಯಕರುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನು ಕೂಡ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ವರದಿ-ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Continue Reading
Click to comment

Leave a Reply

Your email address will not be published. Required fields are marked *

ಅರಸೀಕೆರೆ

`ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ’

Published

on

By

ಹಾಸನ (ಅರಸೀಕೆರೆ):ಅರಸೀಕೆರೆ ತಾಲೂಕಿನಾದ್ಯಂತ ಒಂದು ವರ್ಷಗಳಿಂದ ಪರಿಸರ ಪ್ರೇಮಿ ವಿಜಯ್ ಕುಮಾರ್ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ.

ಸದ್ಯ ಇಂದು ಪರಿಸರ ದಿನಾಚರಣೆ ಅಂಗವಾಗಿ ಮತ್ತೊಂದು ಸಸಿ ನೆಟ್ಟು ಸುಮಾರು ಇಲ್ಲಿಯವರೆಗೂ ೨ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ವಿ.ಟಿ.ಬಸವರಾಜ್ ಮಾತನಾಡಿ, ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ  ಪರಿಸರಕ್ಕೆ ಒಳ್ಳೆಯದು ಎಂದರಲ್ಲದೆ, ಇಂದು ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬAತೆ ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ ಎಂದು ಕರೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಅವಿನಾಶ್ ನಾಯ್ಡು, ಲಾಳನಕೆರೆ ಯೋಗೀಶ್, ಶಶಿ ಯಾದವ್, ಉಮಾ ಕುಮಾರ್, ಸುಧಾ, ಸಿಂಧು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ (ಅರಸೀಕೆರೆ) ಹಾಸನ

Continue Reading

ಅರಸೀಕೆರೆ

ಜೆಡಿಎಸ್ ಬೆಂಬಲಿಗರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ..!

Published

on

By

ಅರಸೀಕೆರೆ: ಅರಸೀಕೆರೆ ತಾಲೂಕಿನ ಪಡುವನಹಳ್ಳಿ ಗೊಲ್ಲರಹಟ್ಟಿ ಯಲ್ಲಿ ತಡರಾತ್ರಿ ಚುನಾವಣೆ ಮತ ಎಣಿಕೆ ಮುಗಿದ ನಂತರ ಊರಿಗೆ ತೆರಳಿದ ಜೆಡಿಎಸ್ ಬೆಂಬಲಿಗರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ, ತೋಟದ ಮನೆಯಿಂದ ಬರುವ ಹಾದಿಯಲ್ಲಿ 5ರಿಂದ 6 ಜನ ಖಾರದಪುಡಿ ಎರಚಿ ಮಚ್ಚು-ಲಾಂಗು ನಿಂದ ಹಲ್ಲೆ ನಡೆಸಿದ್ದಾರೆ. ಪ್ರಾಣ ಭಯದಿಂದ ನಾನು ಊರಿನ ಕಡೆ ಓಡಿ ಬಂದೇ ಎಂದು ಹಲ್ಲೆಗೆ ಒಳಗಾದ ವ್ಯಕ್ತಿ ಶಿವಣ್ಣ ತಿಳಿಸಿದ್ದಾರೆ.

ವರದಿ- ಜೀವನ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Continue Reading

ಅರಸೀಕೆರೆ

ರಾಜರೋಷವಾಗಿ ಲಂಚ ಸ್ವೀಕರಿಸುತ್ತಿರುವ ಪೊಲೀಸ್ ಪೇದೆ..-ವಿಡೀಯೊ ವೈರಲ್..!

Published

on

By

ಅರಸೀಕೆರೆ: ಅರಸೀಕೆರೆಯಲ್ಲಿ ನಗರ ಪೋಲಿಸ್ ಠಾಣೇಯ ಮುಖ್ಯಪೇದೆ ಜೇನುಕಲ್ ಗೌಡ ಎಂಬಾತ ರಾಜರೋಷವಾಗಿ ಲಂಚ ಸ್ವೀಕರಿಸುತ್ತಿರುವ ವಿಡೀಯೊ ಇದೀಗ ಇಲ್ಲೇಡೆ ವೈರಲ್ ಆಗುತ್ತಲಿದೆ.ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕಾಗಿ ಹೋರಾಡ್ತಾಯಿದ್ರೆ ಇತ್ತ ಜನಗಳಿಗೆ ರಕ್ಷಣೆ ನೀಡಬೇಕಾದಂತಹ ಕೆಲ ಅಧಿಕಾರಿಗಳೇ ಲಂಚ ಸ್ವೀಕರಿಸುತ್ತಿದ್ದಾರೆ. ಈ ರೀತಿಯ ಕೆಲವು ಅಧಿಕಾರಿಗಳಿಂದ ನಿಷ್ಠಾವಂತ ಅಧಿಕಾರಿಗಳಿಗೂ ರೋಲ್ ಕಾಲ್ ಪಟ್ಟ ಬರುವಂತಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ.

ವರದಿ- ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortbullbahisbullbahisizmir travestiPHP Shell indirbetkombetturkeybetturkeybetparkxslotstarzbetjojobetbetturkeybetparkbetistmarsbahismarsbahis girişdeneme bonusu veren sitelerdeneme bonusu veren sitelerporn movieBets10 GirişBahis Siteleri