ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್ ಕಮಿಟಿಗಾಗಿ ಚುನಾವಣೆ..!

ಸಿರಗುಪ್ಪ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್ ಗಳಿಗೆ ನೂತನ ಕಮಿಟಿ ರಚಿಸಲು ಪಾರದರ್ಶಕತೆಗಾಗಿ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ಚುನಾವಣಾ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಕಮಿಟಿಯಲ್ಲಿ ಒಟ್ಟು 611 ಮತದಾರಿದ್ದು,ಈ ಪೈಕಿ 44 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. 586 ಜನ ತಮ್ಮ ಹಕ್ಕಿನ ಮತ ಮತ ಚಲಾಯಿಸಿದ್ದಾರೆ. ನಗರದ ತಾಲ್ಲೂಕು ಕ್ರೀಡಾಂಗಣದ ಬಳಿ ಇರುವ ಉರ್ದು ಪ್ರೌಢ ಶಾಲೆಯಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆ ನಡೆಸಲಾಯಿತು. ಕೊರೋನಾ ಹಿನ್ನಲೆಯಲ್ಲಿ ಮತದಾರರು ಮಾಸ್ಕ್ ,ಸಾಮಾಜಿಕ ಅಂತರ, ಸಾನಿಟೈಸರ್ ಉಪಯೋಗಿಸಿಕೊಂಡು ಮತ ಚಲಾಯಿಸಿದ್ದಾರೆ.ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದ್ದು, ಮತದಾರರು ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದಾರೆ. ಕಮಿಟಿಯ ಅಡಳಿತಾಧಿಕಾರಿಯಾದ ಮಹಮದ್ ಸಾಧಿಕ್ ಬಾಷಾ ಇವರು ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನು ಮತಗಟ್ಟೆಗೆ ಸಿರುಗುಪ್ಪ ಪೊಲೀಸ್ ಠಾಣಾ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದು, ಶಾಂತಹಿಯುತವಾಗಿ ಮತದಾನ ಪ್ರಕ್ರಿಯೆಯನ್ನು ನೇರೆವೆರಿಸಲಾಯಿತು.

ವರದಿ- ಡಿ. ಅಲಂ ಬಾಷಾ ಎಕ್ಸ್ ಪ್ರೆಸ್ ಟಿವಿ ಸಿರುಗುಪ್ಪ.

Please follow and like us:

Related posts

Leave a Comment