ಕ್ಲಾಸ್ ರೂಂನಲ್ಲೇ ವಿವಾಹವಾದ ಅಪ್ರಾಪ್ತರು…

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನ ಕ್ಲಾಸ್ ರೂಮ್ ನಲ್ಲೇ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿತ್ತು.ಅಪ್ರಾಪ್ತ ವಿದ್ಯಾರ್ಥಿಗಳು ವಿವಾಹವಾಗಿರುವ ದೃಶ್ಯ ಸಾಮಾಜಿಕ ತಾಣಾದಲ್ಲಿ ವೈರಲ್ ಆಗಿದೆ.ಕಾಲೇಜು ಪ್ರಾಂಶುಪಾಲರಿಗೆ ಈ ವಿಷಯ ತಿಳಿದಾಗ ಇಬ್ಬರಿಗೂ ಟಿಸಿ ನೀಡಿ ಮನೆಗೆ ಕಳಿಸಿದ್ದಾರೆ.ಇತ್ತ ಈ ವಿವಾಹವಾಗಿರುವ ವಿಷಯ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರಿಗೆ ಸಹ ಆಘಾತವಾಗಿದೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ವಿಶಾಖಪಟ್ಟಣದ ಶಿಫ್ ಯಾರ್ಡ್ ನಲ್ಲಿ ಕ್ರೇನ್ ಕುಸಿದು 10 ಮಂದಿ ದುರ್ಮರಣ..!

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಒಂದಲ್ಲಾ ಒಂದು ದುರಂತ ಸಂಭವಿಸುತ್ತಲ್ಲೇ ಇದೆ. ಕಳೆದ 2 ತಿಂಗಳಲ್ಲಿ ಗ್ಯಾಸ್ ಲೀಕ್ ಆಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕ್ರೇನ್ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ನೋಡ ನೋಡುತ್ತಿದ್ದಂತೆ ಹಿಂದೂಸ್ತಾನ್ ಶಿಫ್ಯಾರ್ಡ್ನಲ್ಲಿದ್ದ ಕ್ರೇನ್ ಕುಸಿದಿದೆ. ಕ್ರೇನ್ ಅಡಿ ಸಿಲುಕಿ 10 ಜನ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕ್ರೇನ್ ಬೀಳಲು ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Read More