ತೊಗರಿ ಮಷಿನ್ ಗೆ ಸಿಲುಕಿ ಮಹಿಳೆ ಸಾವು..!

ಇಂಡಿ: ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ತೊಗರಿ ಮಷೀನ್ ನಲ್ಲಿ ಸಿಲುಕಿಕೊಂಡು 36 ವರ್ಷದ ಸುಜಾತ ಅಮಸಿದ್ಧ ಬಗಲಿ ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಕ್ಕಬೇವನೂರ ಗ್ರಾಮದಲ್ಲಿ ನಡೆದಿದೆ. ಇನ್ನೂ ಸುಜಾತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Read More

ಕೆಎಸ್ ಆರ್ ಟಿಸಿ ಡ್ರೈವರ್ ಆತ್ಮಹತ್ಯೆಗೆ ಯತ್ನ- ಮೇಲಾಧಿಕಾರಿಗಳಿಂದ ಕಿರುಕುಳದ ಆರೋಪ…!

ಇಂಡಿ: KSRTC ಡಿಪೋ ಎದುರೇ ಪೆಟ್ರೋಲ್ ಸುರಿದುಕೊಂಡು ಚಾಲಕ ಸರ್ಪರಾಜ ಪಟೇಲ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.ಇನ್ನು ಸರ್ಪರಾಜ್ ಇಂಡಿ ಘಟಕದಲ್ಲಿ ಡ್ರೈವರ್ ಕಮ್ ಕಮ್ ಕಂಡೆಕ್ಟರ್ ಯಾಗಿ ಕೆಲಸ ನಿರ್ವಹಿಸುತ್ತಿದ್ದು, ಹಲವು ದಿನಗಳಿಂದ ಮೇಲಾಧಿಕಾರಿಗಳಾದ ದಾನಮ್ಮ ಜೋಡಮುಟ್ಟಿ, ಯಲಗೂರಪ್ಪ ತಾಳೆವಾಡ, ಎಂ.ಬಿ. ಬಿಸನಾಳ್ ಕಿರುಕುಳ ನೀಡುತ್ತಿದ್ದಾರೆ, ಘಟಕದಲ್ಲಿ ಸರಿಯಾಗಿ ಕಾರ್ಯನಿರ್ವಾಹಣೆ ಮಾಡಿದ್ರೂ ಇಲ್ಲ ಸಲ್ಲದ ಆರೋಪ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸರ್ಪರಾಜ್ ಹೇಳಿದ್ದಾರೆ. ಇನ್ನೂ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಹೊಟ್ಟೆಯಲ್ಲಿ ಪೆಟ್ರೋಲ್ ಹೋಗಿರುವ ಹಿನ್ನೆಲೆ ಸರ್ಪರಾಜ್ ನನ್ನು ಇಂಡಿ ತಾಲೂಕಾಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಇನ್ನೂ ಸರ್ಪರಾಜ ಪಟೇಲ್ ರ ಆರೋಗ್ಯ ಸ್ಥಿತಿ ಗಂಬೀರವಾಗಿದ್ದು, ಸ್ಥಳಕ್ಕೆ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್, KSRTC ಜಿಲ್ಲಾಧಿಕಾರಿ ಹಿರೇಕುರಬರ ಹಾಗೂ ಇಂಡಿ ಸಿ.ಪಿ.ಐ.ರಾಜಶೇಖರ ಭೇಟಿ…

Read More

ಭೀಮಾತೀರದ ಹಂತಕ ತಲ್ವಾರ್ ನಿಂದ ಕುಂಬಳಕಾಯಿ ಕತ್ತರಿಸಿರುವ ವಿಡಿಯೋ ಎಲ್ಲೇಡೆ ವೈರಲ್ ..!

ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕನೋರ್ವ ತಮ್ಮ ಮನೆ ದೇವರ ಪೂಜಾ ಕಾರ್ಯಕ್ರಮದಲ್ಲಿ ತಲ್ವಾರನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡು ಕತ್ತರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭೀಮಾತೀರದ ಹಂತಕ ಬಾಗಪ್ಪ ಹರಿಜನ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ್ ತಾಲೂಕಿನ ಬಬಲಾದ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮ ಬಳಿಕ ತಲ್ವಾರ್ ನಿಂದ ಕುಂಬಳಕಾಯಿ ಹಾಗೂ ಬಾಳೆ ದಿಂಡನ್ನು ಕೊಚ್ಚಿದ್ದಾರೆ. ಇನ್ನು ಬಾಗಪ್ಪ ಮಕ್ಮಲ್ ಟೋಪಿ, ಬಿಳಿ ಧೋತಿ, ಬಿಳಿ ಶಲ್ಯದಲ್ಲಿ ವಿಶೇಷ ವಸ್ತ್ರದಲ್ಲಿ ವಿಭಿನ್ನವಾಗಿ ಕಂಡುಬಂದಿದ್ದಾರೆ. ಅಲ್ಲದೇ, ಇತ್ತೀಚೆಗೆ ಅಷ್ಟೇ ವಿಜಯಪುರದ ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಜೈಲಿನಿಂದ ಜಾಮೀನು ಪಡೆದು ಭೀಮಾತೀರದ ಹಂತಕ ಬಾಗಪ್ಪ ಹೊರ ಬಂದಿದ್ದಾರೆ… ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Read More

ಇಂಡಿ ಪಟ್ಟಣದ ಆದರ್ಶ ಶಾಲೆಯಲ್ಲಿ ಮತ ಎಣಿಕೆ-ತಹಶಿಲ್ದಾರ ಸಿ.ಎಸ್.ಕುಲಕರ್ಣಿ..!

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿನಿ ವಿಧಾನ ಸೌಧದ ತಹಶಿಲ್ದಾರ ಕಾರ್ಯಾಲಯದಲ್ಲಿ ಮಾದ್ಯಮ ಗೋಷ್ಟಿಯನ್ನು ಉದ್ದೇಶಿಸಿ ತಾಲೂಕು ದಂಢಾಧಿಕಾರಿ ಸಿ.ಎಸ್ ಕುಲಕರ್ಣಿ ಮಾತಾನಾಡಿದರು. ತಾಲ್ಲೂಕಿನ 38 ಗ್ರಾಮ ಪಂಚಾಯತ್ ಗಳಲ್ಲಿ ಸೂಸತ್ರವಾಗಿ ಮತದಾನವಾಗಿದೆ. ಅದರಂತೆ ಡಿಸೆಂಬರ್ 30 ರಂದು ಬೆಳಿಗ್ಗೆ 7 ಘಂಟೆಯಿಂದಲೇ ಮತ ಎಣಿಕೆ ಇಂಡಿ ಪಟ್ಟಣದ ಆದರ್ಶ ಮಹಾ ವಿದ್ಯಾಲಯದಲ್ಲಿ ನಡೆಯಿಲಿದೆ. ಮತ ಎಣಿಕೆ ಎರಡು ಸುತ್ತಿನಲ್ಲಿ ನಡೆಯುತ್ತಿದೆ. ಮೊದಲನೆಯ ಸುತ್ತಿನಲ್ಲಿ ಸಾಲೋಟಗಿ, ತಾಂಬಾ, ರೂಗಿ, ಅಥರ್ಗಾ, ತಡವಲಗಾ, ನಿಂಬಾಳ ಮಸಳಿ ಬಿಕೆ ಹಾಗೂ ಇನ್ನಿತರ ಗ್ರಾಮಗಳ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗೆ ನಿಯೋಜಿತ ಗೊಂಡಿರುವ ಸಿಬ್ಬಂದಿಗಳು ಮತ ಎಣಿಕೆ ಸ್ಥಳದಲ್ಲಿ 6 ಘಂಟೆಗೆ ಹಾಜರರಿಬೇಕು. ಒಂದನೇ ಸುತ್ತಿಗೆ ಆಯ್ಕೆಯಾದ ಪಂಚಾಯತಿಯ ಆಯಾ ಅಭ್ಯರ್ಥಿಗಳು ಅಥವಾ ಎಜೆಂಟ್ ಒಬ್ಬರು ಮಾತ್ರ ಮುಂಜಾನೆ 6 ಘಂಟೆಗೆ ಭದ್ರತಾ ಕೊಠಡಿಯಲ್ಲಿ ಹಾಜರಿರಬೇಕು ಎಂದು ತಿಳಿಸಿದರು. ವರದಿ-ಶಂಕರ್…

Read More