ಉತ್ತರಾಖಂಡ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಜೀನಾ ಕೊರೊನಾಗೆ ಬಲಿ..!

ನವದೆಹಲಿ- ಉತ್ತರಾಖಂಡದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಜೀನಾ ಇಂದು ಬೆಳಗ್ಗೆ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಅಲ್ಮೋರ್ ಜಿಲ್ಲೆಯ ಸಾಲ್ಟ್ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಕೊರೊನಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಸಕರು ಮೃತಪಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬಿಜೆಪಿಯ ಬಂಶೀ ಜೀನಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಯಾವಾಗಲೂ ಜನರ ಹಿತವನ್ನು ಬಯಸುತ್ತಿದ್ದರು, ಜನಸೇವೆಯಲ್ಲಿಯೇ ನಿರತರಾಗಿರುತ್ತಿದ್ದರು.ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಅವರ ನಿಧನದ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಖೇಲೋ ಇಂಡಿಯಾ ಕೂಟದಲ್ಲಿ ಆಡಲು ಅವಕಾಶ ನೀಡುತ್ತೇವೆಂದು ಹೇಳಿ ವಂಚನೆ

ನವದೆಹಲಿ: ಮುಂದಿನ ವರ್ಷ ಹರ್ಯಾಣದ ಪಂಚಕುಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಕೂಟದಲ್ಲಿ ಆಡಲು ಅವಕಾಶ ನೀಡುತ್ತೇವೆಂದು ಹೇಳಿ, ದೇಶಾದ್ಯಂತ ಅಥ್ಲೀಟ್ಗಳನ್ನು ವಂಚಿಸಿದ್ದ ಮೂವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಎರಡು ದಿನಗಳ ಹಿಂದೆ ನೀಡಿದ್ದ ದೂರನ್ನು ಆಧರಿಸಿ ಈ ಬಂಧನವಾಗಿದೆ. ವಂಚನೆಯಲ್ಲಿ ಒಬ್ಬ ಮಾಜಿ ಕಬಡ್ಡಿ ಪಟು ಕೂಡಾ ಸೇರಿದ್ದು, ಸಾಮಾಜಿಕ ತಾಣಗಳಲ್ಲಿ ಪುಟವನ್ನು ತೆರೆದಿದ್ದ ವಂಚಕರು, ಅಲ್ಲಿ ಕೂಟದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಿದ್ದರು. ಅದಕ್ಕಾಗಿ ತಲಾ 6,000 ರೂ. ಪಾವತಿಸಬೇಕೆಂದು ತಿಳಿಸಿದ್ದರು.ಆರೋಪಿಗಳನ್ನು ಸಂಜಯ್ ಪ್ರತಾಪ್ ಸಿಂಗ್, ಅನುಜ್ಕುಮಾರ್, ರವಿ ಎಂದು ಗುರುತಿಸಲಾಗಿದೆ. ಇದರಲ್ಲಿ ಸಂಜಯ್ ಆಗ್ರಾದ ಮಾಜಿ ಕಬಡ್ಡಿ ಆಟಗಾರ.ಅವರು ರುದ್ರಪ್ರತಾಪ್ ಸಿಂಗ್ ಎಂಬ ಹೆಸರಿನಲ್ಲಿ ನಕಲಿ ಗುರುತಿನ ಪತ್ರ ತಯಾರಿಸಿಕೊಂಡಿದ್ದರು. ಇದರ ಮೂಲಕವೇ ಜನರನ್ನು ವಂಚಿಸುತ್ತಿದ್ದರು. ಈ ಆಟಗಾರರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್…

Read More

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಿಬಿಐ ನ್ಯಾಯಾಲಯದಿಂದ ಮಹತ್ವದ ತೀರ್ಪು..!

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೊದ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು ಬಿಜೆಪಿ ಭೀಷ್ಮ ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಉಮಾಭಾರತಿ ಸೇರಿದಂತೆಎಲ್ಲಾ 32 ಆರೋಪಿಗಳನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಅಲ್ಲ, ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದೆ ಎಂದು ಸಿಬಿಐ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಸಿಬಿಐ ವಿಶೇಷ ನ್ಯಾಯಾಲಯ ಸುಮಾರು 28 ವರ್ಷಗಳ ಹಳೆಉ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಿಸುವ ಮೂಲಕ ಮಾಜಿ ಉಪಪ್ರಧಾನಿ ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ,ಬಿಜೆಪಿಯ ಹಿರಿಯ ಮುಖಂಡರಾದ ಮುರುಳಿ ಮನೋಹರ್ ಜೋಷಿ, ಉಮಾಭಾರತಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಅ.1 ರಿಂದ ಅನ್ಲಾಕ್ 5.0 : ಯಾವುದೆಲ್ಲಾ ಓಪನ್ ಆಗುತ್ತೆ ಗೊತ್ತಾ?

ದೆಹಲಿ : ಮಹಾಮಾರಿ ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಸಂಕಷ್ಟದಲ್ಲಿ ಸಿಲುಕಿದ್ದ ದೇಶ ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದೆ. ಸದ್ಯ ಅಕ್ಟೋಬರ್ 1 ರಿಂದ ಅನ್ಲಾಕ್ 5.0 ಜಾರಿಯಾಗಲಿದ್ದು, ಹಲವು ನಿಯಮಗಳನ್ನ ಸಡಿಲಗೊಳಿಸಲಾಗಿದೆ. ಈಗಾಗಲೇ ರೈಲ್ವೆ ಸಂಚಾರ, ಚಿತ್ರಮಂದಿರ, ಶಾಲಾ ಕಾಲೇಜುಗಳನ್ನ ಹೊರತುಪಡಿಸಿ,ಎಲ್ಲಾ ನಿಯಮಗಳನ್ನ ತೆರೆಯಲಾಗಿದೆ. ಇದೀಗ ಅಕ್ಟೋಬರ್ 1 ರಿಂದ ಜಾರಿಯಾಗುವ ಅನ್ಲಾಕ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ನೀಡಬಹುದು ಎನ್ನಲಾಗಿದೆ. ಚಿತ್ರಮಂದಿರಕ್ಕೆ ಮಾರ್ಗಸೂಚಿ ಏನಿರಬಹುದು? #ಸಿನಿಮಾ ಥಿಯೇಟರ್‌ಗೆ ಬರುವವರು ಕಡ್ಡಾಯವಾಗಿ ಮಾಸ್ಕ್,ಗ್ಲೌಸ್ ಧರಿಸಿರಬೇಕು #ಸಾಮಾಜಿಕ ಅಂತರ ಕಾಯ್ದುಕೊಂಡು ಸೆಟ್‌ನಲ್ಲಿ ಕೂರಬೇಕು #ಒಂದು ಶೋ ಸಮಯದಲ್ಲಿ ಕೇವಲ 100 ಮಂದಿಗೆ ಮಾತ್ರ ಅವಕಾಶ #ಥಿಯೇಟರ್‌ನಲ್ಲಿ ಎಸಿ ಬಳಸುಚಂತೆ ಇರುವುದಿಲ್ಲ #ಥಿಯೇಟರ್ ಒಳಗೆ ಬರುವವರ ಪ್ರತಿಯೊಬ್ಬರಿಗೆ ಥರ್ಮಲ್ ಚಕಪ್ ಇನ್ನು ಚಿತ್ರಮಂದಿರಗಳಷ್ಟೇ ಅಲ್ಲದೇ ಪ್ರವಾಸೋದ್ಯಮದ ಮೇಲಿರುವ ಕೆಲ ನಿಯಮಗಳನ್ನೂ ತೆಗೆಯಲಾಗುತ್ತದೆ ಎನ್ನಲಾಗಿದೆ.…

Read More

ಕೊರೊನಾ ಸೋಂಕಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವು..!

ನವದೆಹಲಿ : ರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು,ಇದೀಗ ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.ಕಳೆದ ವಾರ ಸುರೇಶ್ ಅಂಗಡಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುರೇಶ್ ಅಂಗಡಿ, ರಾಜ್ಯ ರೈಲ್ವೆ ಖಾತೆ ನಿಭಾಯಿಸುತ್ತಿದ್ದರು.ಅಲ್ಲದೇ ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಭಲ ನಾಯಕರಾಗಿದ್ದಾರೆ. ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಕೋವಿಡ್ ಗುಣಮುಖ ಪ್ರಮಾಣದಲ್ಲಿ ಏರಿಕೆ : ಅಮೇರಿಕಾ ಹಿಂದಿಕ್ಕಿದ ಭಾರತ…!

ನವದೆಹಲಿ : ವಿಶ್ವದಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿದ್ರೆ, ಇತ್ತ ಭಾರತದಲ್ಲಿ ಕೊವಿಡ್ನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಅಮೇರಿಕಾ ಹಿಂದಿಕ್ಕಿ ಭಾರತ ಅಗ್ರಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಈ ವರೆಗೂ ಸೋಂಕಿನಿಂದ 43, 14, 606 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದು,ಒಟ್ಟಾರೆ ಕೋವಿಡ್ ಸೋಂಕಿತರ ಪೈಕಿ ಭಾರತದಲ್ಲಿ ಶೇ.19.00ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ಅಮೆರಿಕದಲ್ಲಿ ಈ ವರೆಗೂ 42, 25, 993 ಮಂದಿ ಸೋಂಕಿತರು ಗುಣಮುಖರಾಗಿದ್ದು, ಜಾಗತಿಕವಾಗಿ ಅಮೆರಿಕದ ಚೇತರಿಕೆ ಪ್ರಮಾಣ ಶೇ.18.70ರಷ್ಟಿದೆ ಎನ್ನಲಾಗಿದ. ನಿನ್ನೆ ಭಾರತದಲ್ಲಿ 92,605 ಪ್ರಕರಣ ಪತ್ತೆಯಾಗಿದ್ದು,94,612 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಗುಣಮುಖರಾದವರ ಸಂಖ್ಯೆ 43,03,044 ಕ್ಕೆ ಏರಿಕೆಯಾಗಿದೆ. ಅಲ್ಲದೇ ನಿನ್ನೆ 1,133 ಮಂದಿ ಸಾವನ್ನಪ್ಪಿದ್ದು,ಆ ಮೂಲಕ ಕೊರೋನಾ ವೈರಸ್ ಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 86,752ಕ್ಕೆ ಏರಿಕೆಯಾಗಿದೆ. ವರದಿ-…

Read More

ಭಾರತೀಯ ಸೇನೆಗೆ ಅಧಿಕೃತ ಸೇರ್ಪಡೆಯಾಗಲಿರುವ ‘ರಫೇಲ್’ ಜೆಟ್ ಫೈಟರ್…!

ನವದೆಹಲಿ : ಫ್ರಾನ್ಸ್ ನಿಂದ ಬಂದ 5 ರಫೇಲ್ ಯುದ್ಧ ವಿಮಾನ ಇಂದಿನಿಂದ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಬೆಳಗ್ಗೆ 10 ಗಂಟೆಗೆ ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಭಾಗಿಯಾಗಲಿದ್ದಾರೆ. ರಫೇಲ್ ವಿಮಾನಕ್ಕೆ ಸಾಂಪ್ರದಾಯಿಕ ಜಲ ಫಿರಂಗಿ ವಂದನೆ ನೀಡಲಾಗುವುದು. ರಫೇಲ್ ವಿಮಾನವನ್ನು 17 ಸ್ಕ್ವಾಡ್ರನ್ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್ ನಿಷೇಧ ಮಾಡಿದ ಭಾರತ..!

ನವದೆಹಲಿ :ದೇಶದ ಸುರಕ್ಷತೆ ಮತ್ತು ರಕ್ಷಣೆಗಾಗಿ ಚೀನಾ ಮೂಲದ 118 ಆ್ಯಪ್ಗಳನ್ನ ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಪಬ್‌ಜಿ, ಲಿವಿಕ್ ಹಾಗು ವಿ ಚ್ಯಾಟ್ ಸೇರಿದಂತೆ 118 ಆ್ಯಪ್‌ಗಳನ್ನ ಭಾರತ ಬ್ಯಾನ್ ಮಾಡಿದೆ.ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಈ ವರ್ಷದ ಜೂನ್ನಲ್ಲಿ ಟಿಕ್ಟಾಕ್, ಯುಸಿ ಬ್ರೌಸರ್, ಸೇರಿದಂತೆ ಚೀನಾದ ಲಿಂಕ್ ಹೊಂದಿರುವ 59 ಅಪ್ಲಿಕೇಷನ್ಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆ್ಯಪ್ಗಳನ್ನ ಬ್ಯಾನ್ ಮಾಡಿತ್ತು. ಈಗಾ ಮತ್ತೇ ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವುದರ ಮುಖಾಂತರ ಚೀನಾಗೆ ಭಾರತ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಕರ್ನಾಟಕದ ಖಡಕ್ ಅಧಿಕಾರಿ ಇಂದು ಬಿಜೆಪಿಗೆ ಸೇರ್ಪಡೆ…!

ನವದೆಹಲಿ: ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಲಿದ್ದು, ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಕರ್ನಾಟಕ ಸಿಂಗಂ ಅಂತಾನೆ ಹೆಸರು ಪಡೆದಿದ್ದಾರೆ. ಉಡುಪಿ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ ಬೆಂಗಳೂರಿಗೆ ಡಿಸಿಪಿಯಾಗಿ ವರ್ಗಾವಣೆಯಾಗಿದ್ದರು. 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಊರು ತಮಿಳುನಾಡಿಗೆ ಹೋಗಿದ್ದರು. ಈಗ ಸ್ವಂತ ಊರಿನಲ್ಲೇ ಇದ್ದು, ಅಲ್ಲೇ ಕೆಲಸ ಮಾಡಿ 2021ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು. ಈ ಮೊದಲು ಅವರು ತಮಿಳುನಾಡಿನ ನಟ ರಜಿನಿಕಾಂತ್ ಅವರ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಪ್ರಕಾರ ಐಪಿಎಸ್ ಎಂದರೆ…

Read More