ಕೊಳಚೆ ಪ್ರದೇಶವಾಗಿ ಮಾರ್ಪಟ್ಟ ವಡೇರಹಟ್ಟಿ ಗ್ರಾಮ.!

ಬೆಳಗಾವಿ: ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಏನೂ ಸಂಬಂಧವಿಲ್ಲವೆನೋ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಈರಗಾರ ಓಣಿ ಬೀದಿ ಬೀದಿಗಳಲ್ಲಿ ಹಾಗೂ ಮನೆ ಹಿಂದುಗಡೆ ಹಾಗೂ ಮನೆ ಒಳಗಡೆ ಗಬ್ಬೆದ್ದು ನಾರುವ ಚರಂಡಿ ನೀರು ತುಂಬಿದ್ದು, ಅಂತರದಲ್ಲಿರುವ ಈ ಗ್ರಾಮ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸ್ವಚ್ಛತೆಯ ವಿಷಯದ ಬಗ್ಗೆ ಕನಿಷ್ಟ ಜ್ಞಾನ ಇಲ್ಲಂದತಾಗಿದೆ. ಇದರಿಂದಾ ಗ್ರಾಮದಲ್ಲಿರುವ ವಯೋವೃದ್ದರು, ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಗ್ರಾಮದ ತುಂಬೆಲ್ಲಾ ಗಬೆದ್ದು ಚರಂಡಿ ನೀರು ಹರಿಯುವದನ್ನು ನೋಡಿ ಗ್ರಾಮಸ್ಥರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುಧ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಗಮನ ಹರಿಸಿ ಸ್ವಚ್ಚ ಗ್ರಾಮವನ್ನಾಗಿ ಮಾಡುತ್ತಾರಾ…

Read More

ಶಿವನ ಮೂರ್ತಿಯ ಲೋಕಾರ್ಪಣೆಗೆ ಆಗಮಿಸಿದ-ಶಿವಾಚಾರ್ಯ ಮಹಾಸ್ವಾಮಿ..!

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮಕ್ಕೆ ಶ್ರೀಶೈಲದ ಜಗದ್ಗುರುಗಳಾದ ಡಾ/ ಚನ್ನಸಿದ್ಧರಾಮ ಪಂಡಿತಾರಾಧ್ಯ, ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಮಲ್ಲಿಕಾರ್ಜುನ್ ದೇವಸ್ಥಾನದ, ನೂತನ ಮಹಾದ್ವಾರ ಹಾಗೂ ನೂತನವಾಗಿ ನಿರ್ಮಿಸಲಾದ ಶಿವನ ಮೂರ್ತಿಯ ಲೋಕಾರ್ಪಣೆ ಗಾಗಿ ಆಗಮಿಸಿದ್ದರು ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡ ಹಣಮಂತ ತೇರದಾಳ ಅವರ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಗೌರವ ಪೂರ್ವಕವಾಗಿ ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ವಾಸಂತಿ ಹಣಮಂತ ತೇರದಾಳ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರು ಇದ್ದರು. ವರದಿ- ಶಂಕರ ಭಜಂತ್ರಿ ಎಕ್ಸ್ ಪ್ರೆಸ್ ಟಿವಿ ಮೂಡಲಗಿ

Read More

ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯ..!

ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ, ಕೊನೆಗೂ ಸುಖಾಂತ್ಯ ಕಂಡಿದೆ.ಕೆ.ಕಲ್ಯಾಣ್ ಪತ್ನಿ ಬೆಳಗಾವಿಯ ಕೌಟುಂಬಿಕ ಕೋರ್ಟ್ ನಲ್ಲಿ ಸಲ್ಲಿಸಿದ್ದಂತೆ ಡೈವೋರ್ಸ್ ಅರ್ಜಿಯನ್ನು ವಾಪಾಸ್ ಪಡೆಯುವಂತೆ ಮಾಡಿದಂತ ಕೆ ಕಲ್ಯಾಣ್ ಮನವಿಗೆ ಪತ್ನಿ ಅಶ್ವಿನಿ ಒಪ್ಪಿಗೆ ಸೂಚಿಸಿದ್ದಾರೆ.ಹೀಗಾಗಿ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಕೊನೆಗೂ ಸುಖಾಂತ್ಯ ಕಂಡಿದೆ. ಮಾಟ,ಮಂತ್ರದಿಂದಾಗಿ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು.ಇದೇ ಕಾರಣದಿಂದಾಗಿ ಕೆ.ಕಲ್ಯಾಣ್ ಮಾಟ-ಮಂತ್ರ ಮಾಡಿಸಿದ್ದಾರೆ. ನನ್ನ ಪತ್ನಿಯ ಖಾತೆಯಿಂದ ಹಣ ತೆಗೆದಿದ್ದಾರೆ ಎಂಬುದಾಗಿ ಬೆಳಗಾವಿಯ ಮಾಳಮಾರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದಂತ ಪೊಲೀಸರು,ಶಿವಾನಂದ ಸಾಲಿ ಎಂಬುವರನ್ನು ಬಂಧಿಸಿದ್ದರು.ಈ ಬಳಿಕ ಕೆ.ಕಲ್ಯಾಣ್ ಪತ್ನಿ ಡೈವೋರ್ಸ್ ಕೋರಿ, ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ಜೂನ್.16ರಂದು ಅರ್ಜಿ ಸಲ್ಲಿಸಿದ್ದರು.ಇಂದು ಇಂತಹ ಅರ್ಜಿಯ ವಿಚಾರಣೆ ವೇಳೆ ಪತಿ-ಪತ್ನಿಯರನ್ನು ಕೌನ್ಸಿಲಿಂಗ್ ಒಳಪಡಿಸಿದ ವೇಳೆ, ಪ್ರೇಮಕವಿ ಕೆ.ಕಲ್ಯಾಣ್ ಅವರು ತಮ್ಮ ಪತ್ನಿ ಅಶ್ವಿನಿಯವರನ್ನು ಅರ್ಜಿ…

Read More

ಸವದತ್ತಿ ಬಳಿ ಭೀಕರ ಅಪಘಾತ : 6 ಮಂದಿ ಸ್ಥಳದಲ್ಲೇ ಸಾವು..!

ಬೆಳಗಾವಿ : ಬೊಲೆರೋ ಹಾಗು ಟಾಟಾ ಏಸ್ ನಡುವೆ ಡಿಕ್ಕಿ ಸಂಭವಿಸಿ, ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿಯ ಸವದತ್ತಿ ಬಳಿ ಘಟನೆ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ರೆ 10 ಕ್ಕೂ ಹೆಚ್ಚು ಜನ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಮೃತಪಟ್ಟವರೆಲ್ಲರೂ ರಾಮದುರ್ಗ ತಾಲೂಕಿನ ಚಿಂಚನೂರು ಗ್ರಾಮದವರು ಎನ್ನಲಾಗಿದೆ. ಧಾರವಾಡದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಬರುವ ವೇಳೆ ಘಟನೆ ಸಂಭವಿಸಿದೆ. ಇದರಲ್ಲಿ ಐವರು ಮಹಿಳೆಯರು ಹಾಗು ಓರ್ವ ಪುರುಷ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗುತ್ತಿದೆ. ಸವದತ್ತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ರಕ್ತದಾನ ಮಹಾದಾನ- ಏಡ್ಸ್ ಪ್ರವೈಷನ್ ಸೊಸೈಟಿ ವತಿಯಿಂದ ರಕ್ತದಾನ ಶಿಬಿರ..!

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಬೆಳಗಾವಿ, ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ ಷನ್ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಿಮಿತ್ತ ರಕ್ತ ದಾನ ಶಿಬಿರ ನಡೆಯಿತು.ಜಗತ್ತಿನ ಅತಿ ದೊಡ್ಡ ಸಂಶೋಧನೆಯಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದು ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ.ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳು, ಸಂಭವಿಸುತ್ತಲೇ ಇರುತ್ತವೆ. ಜೊತೆಯಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು, ಥ್ಯಾಲಸೀಮಿಯಾ, ಹಿಮೊಫಿಲಿಯಾ, ಸಿಕಲ್ ಸೆಲ್ ಅನಿಮಿಯಾ ಮುಂತಾದ ರೋಗಿಗಳು ರಕ್ತ ದಾನಿಗಳನ್ನೇ ಅವಲಂಭಿಸಿರುತ್ತಾರೆ. ದೇಶದಲ್ಲಿ ಕೋರೋನಾ ತಾಂಡವವಾಡುತ್ತಿದೆ.ಇದರಿಂದ ಜನರ ಜೀವ ಹೊಗುತ್ತಿದ್ದರು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ…

Read More

ಅಧ್ಯಯನ ವರದಿ ಆಧರಿಸಿ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ..!

ಬೆಳಗಾವಿ: ಕೇಂದ್ರದ ಅಧ್ಯಯನ ತಂಡ ರಾಜ್ಯದ ನೆರೆ ಸಮೀಕ್ಷೆ ನಡೆಸಿದ್ದು ಕೇಂದ್ರದ ವರದಿಯಾನುಸಾರ ಬೆಳೆನಷ್ಟ ಪರಿಹಾರ ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ಬಿ.ಸಿ ಪಾಟೀಲ್ ಇಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಛೇರಿ ಗೆ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮೊರ್ಚಾ ಮುಖಂಡರ ಜೊತೆ ಕೃಷಿ ಇಲಾಖೆ ಕಾರ್ಯಗಳು ರೈತ ಬೆಳೆ ಸಮೀಕ್ಷೆ ಸೇರಿದಂತೆ ಪಕ್ಷ ಸಂಘಟನೆ ಕುರಿತು ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪರಿಹಾರ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಅಧ್ಯಯನ ವರದಿ ನೋಡಿ ಪರಿಹಾರ ಬಿಡುಗಡೆಯಾಗಲಿದೆ.ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ನಡೆಸಲಾಗುತ್ತಿದ್ದು,ರೈತರೇ ತಮ್ಮ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣಪತ್ರ ನೀಡುವಂತಹ ಈ ಹೊಸ ಪ್ರಯೋಗ ದೇಶಾದ್ಯಂತ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೇಲ್ಮನೆಯ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ನೀಡಿರುವ ಬಿಜೆಪಿಯ…

Read More

ಬೆಳಗಾವಿಯಲ್ಲಿ ರಾಯಣ್ಣನ ಪುತ್ಹಳಿಕೆ ಪ್ರತಿಷ್ಠಾಪನೆ ವಿವಾದಕ್ಕೆ ತೆರೆ..!

ಬೆಳಗಾವಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ಕನ್ನಡಿಗ- ಮರಾಠಿಗ ಭಾಷಿಕ ಮುಖಂಡರ ಜೊತೆ ಸಂಧಾನ ಸಭೆ ನಡೆಸಿದ್ದು,ಸಭೆಯು ಸಫಲವಾಗಿದೆ. ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ ತೆರೆಬಿದ್ದಿದೆ. ರಾಯಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸಿದ ಸ್ಥಳದಲ್ಲೇ ರಾಯಣ್ಣ ಪ್ರತಿಮೆ ಇರಲು ಮರಾಠಿ ಭಾಷಿಕರು ಒಪ್ಪಿಗೆ ಕೊಟ್ಟಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ ‘ಶಿವಾಜಿ ವೃತ್ತ’ ಎಂದು ನಾಮಕರಣ ಮಾಡಲು ಕನ್ನಡಪರ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ… ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Read More

ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು.

ಬೆಳಗಾವಿ: ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಇದರ ಹಿನ್ನೆಲೆ ಆಕ್ರೋಶಗೊಂಡ ರೋಗಿಯ ಸಂಬಂಧಿಕರು ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಗಾವಿಯ ಬಿಮ್ಸ ಆಸ್ಪತ್ರೆಯಲ್ಲಿ ನಡೆದಿದೆ. ರಾತ್ರಿ ಸುಮಾರು 9ಗಂಟೆ 15 ನಿಮಿಷಕ್ಕೆ ರೋಗಿಯ 10ಕ್ಕೂ ಹೆಚ್ಚು ಸಂಬಂಧಿಕರಿಂದ ಈ ದುಷೃತ್ಯ ಸಂಭವಿಸಿದ್ದು ಬೆಳಗಾವಿಯ ಜನರಲ್ಲಿ ಆತಂಕ ಸೃಷ್ಟಿಮಾಡಿದೆ. ನೋಡನೋಡುತ್ತಿದ್ದಂತೆ ಆಸ್ಪತ್ರೆಯ ಮುಂದೆ ನಿಂತಿದ್ದ ಅಂಬ್ಯುಲೆನ್ಸ್ ಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು,ಪೋಲಿಸರು ಬರುವಷ್ಟರಲ್ಲಿ ಅಂಬ್ಯುಲೆನ್ಸ್ ಸುಟ್ಟು ಕರಕಲಾಗಿದೆ. ಇಷ್ಟಕ್ಕೆ ನಿಲ್ಲದ ರೋಗಿ ಸಂಬಂಧಿಗಳ ಆಕ್ರಂಧನ ಆಸ್ಪತ್ರೆಯ ಒಳಗೆ ಇದ್ದಾಂತಹ ನರ್ಸ್ ಸೇರಿದಂತೆ ,ಡಾಕ್ಟರ್ಸ್ ಗಳ ಮೇಲು ಹಲ್ಲೆ ಮಾಡಲು ಮುಂದಾಗಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿಎಂ ಜಿ.ಹಿರೇಮಠ,…

Read More