ರೈತರ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ…!

ಮೊಳಕಾಲ್ಮುರ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗೂ ಜನವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟ ಬೆಂಬಲಿಸಿ ಮೊಳಕಾಲ್ಮೂರಿನಲ್ಲಿ ಸಿಐಟಿಯು ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.ಮೊಳಕಾಲ್ಮೂರು ತಾಲ್ಲೂಕಿನ ಕೆಇಬಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ್ರು.ಇನ್ನೂ 3 ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಮೊಳಕಾಲ್ಮುರು ತಹಶೀಲ್ದಾರ್ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಸಿಐಟಿಯುನ ತಾಲೂಕು ಅಧ್ಯಕ್ಷರಾದ ಡಿ.ಎಂ ಮಲಿಯಪ್ಪ ಮಾತನಾಡಿ, ಪ್ರಧಾನಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ 48 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.ಈಗಾಗಲೇ ಕೆಲವು ರೈತರು ಮೃತಪಟ್ಟಿದ್ದಾರೆ.ಅಲ್ಲದೆ “ಕಾರ್ಮಿಕರ ಹಕ್ಕುಗಳನ್ನು ಉಳಿಸುತ್ತವೆ,ರೈತರ ಬದುಕನ್ನು ರಕ್ಷಿಸುತ್ತೇವೆ, ಕಾರ್ಪೊರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆಯೊಂದಿಗೆ ಅಧಿಕಾರ ಹಿಡಿದ ಕೇಂದ್ರ ಸರ್ಕಾರ ರೈತರ ಜೀವನದಲ್ಲಿ ಆಟವಾಡುತ್ತಿದೆ ಎಂದು…

Read More

ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಎಂಎಲ್ಎ ತಿಪ್ಪೇಸ್ವಾಮಿ..!

ಮೊಳಕಾಲ್ಮುರು: ಮೊಳಕಾಲ್ಮುರು ಪಟ್ಟಣದ ಕೆ.ಇ.ಬಿ ವೃತ್ತದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಎಂಎಲ್ಎ ತಿಪ್ಪೇಸ್ವಾಮಿ ಸಚಿವರ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇರುವುದು ಸತ್ಯಕ್ಕೆ ದೂರವಾದ ಮಾತು .ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 80 ರಷ್ಟು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಗೆದ್ದು ಬೀಗಿದ್ದಾರೆ. ಮೊಳಕಾಲ್ಮುರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಇದನ್ನು ಮುಂದಿನ ದಿನಗಳಲ್ಲಿ ,ಜಿಲ್ಲಾ ಪಂಚಾಯತ್ ,ತಾಲ್ಲೂಕು ಪಂಚಾಯಿತಿ,ಚುನಾವಣೆಯಲ್ಲಿ ಮತ್ತೆ ನಾವು ಸಾಬೀತು ಮಾಡುತ್ತೇವೆ. ಇಲ್ಲಿ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ .ಇಲ್ಲಿ ನೀವು ಸಚಿವರಾಗಿದ್ದೀರಿ ನಿಮ್ಮದೇ ಸರ್ಕಾರ,ಮತ್ತೆ ಏಕೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಅವರಿಗೆ ಜನಪರ ಕಾಳಜಿ ಇಲ್ಲ ಅನ್ಯರೊಡನೆ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಜತೆ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಾಗಿ ಯುವ ಜನತೆ ವಿಜೇತರಾಗಿರುವುದು ಉತ್ತಮ ಬೆಳವಣಿಗೆ ಎಂದರು ಬಡ ಹಾಗೂ ಕೆಳವರ್ಗದ…

Read More

ಕೊರೋನಾ ನಿಯಮ ಪಾಲನೆಯೊಂದಿಗೆ ಜ್ಯೂನಿಯರ್ ಕಾಲೇಜು ಪ್ರಾರಂಭ ..!

ಮೊಳಕಾಲ್ಮುರು: ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಕಾಲೇಜುಗಳು ಪ್ರಾರಂಭವಾಗಿದ್ದು ಮೊಳಕಾಲ್ಮೂರು ಪಟ್ಟಣದ ಜೂನಿಯರ್ ಕಾಲೇಜು ಎಲ್ಲಾ ಕೊರೋನಾ ನಿಯಮದ ಪಾಲನೆಯೊಂದಿಗೆ ಎಲ್ಲಾ ಸಕಲ ಸಿದ್ಧತೆಯೊಂದಿಗೆ ಕಾಲೇಜು ಓಪನ್ ಆಗಿದೆ. ಕಾಲೇಜಿನ ಪ್ರತಿಯೊಂದು ಕೊಠಡಿಗೆ ಸ್ಯಾನಿಟೈಸರ್ ಮಾಡಿಸಿ ಸ್ವಚ್ಛತೆಯನ್ನು ಕೈಗೊಂಡರು.ಇನ್ನೂ ಕಾಲೇಜಿಗೆ ಹಾಗೂ ಆಗಮಿಸುವ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಥರ್ಮಾಮೀಟರ್ ನಿಂದ ಟೆಂಪ್ರೆಚರ್ ಚೆಕ್ ಮಾಡಿ ವಿದ್ಯಾರ್ಥಿಗಳಲ್ಲಿ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು. ಇನ್ನೂ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಖುಷಿಯಿಂದ ಮಾಸ್ಕ್ ಧರಿಸಿ ಆಗಮಿಸುತ್ತಿರುವುದು ವಿಶೇಷವಾಗಿತ್ತು. ಕೆಲ ವಿದ್ಯಾರ್ಥಿಗಳು ಮಾತನಾಡಿ ಆನ್ ಲೈನ್ ಕ್ಲಾಸ್ ನಿಂದ ತುಂಬಾ ತೊಂದರೆಯಾಗುತ್ತಿತ್ತು.ಇದೀಗ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಒಟ್ಟಾಗಿ ಕಲಿಯಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಹನುಮಂತಪ್ಪನವರು, ಉಪನ್ಯಾಸಕರಾದ ತಿಪ್ಪೇಸ್ವಾಮಿ, ಕರೂರ್ ಪ್ರಕಾಶ್, ಭಾಗ್ಯಮ್ಮಮಂಜುನಾಥ್, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ವರದಿ- ಪಿ.ಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Read More

ಗ್ರಾಮಪಂಚಾಯತ್ ಚುನಾವಣೆ ಮತ ಪ್ರಕ್ರಿಯೆ ಆರಂಭ..!

ಮೊಳಕಾಲ್ಮೂರು ತಾಲೂಕಿನ ಚಿತ್ರದುರ್ಗದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೊಳಕಾಲ್ಮೂರು ನಗರದ ಪದವಿಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 7ಗಂಟೆಯಿಂದಲೇ ಪ್ರಾರಂಭಿಸಲಾಗಿದೆ. ಇನ್ನೂ ಈ ವೇಳೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಮತ ಎಣಿಕೆ ಕಚೇರಿಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು,ಇನ್ನೂ ಕೇಂದ್ರದ ಒಳಹೋಗುವ ಎಲ್ಲಾರನ್ನೂ ಪೊಲೀಸರು ತಪಾಸಣೆ ಮಾಡಿ ನಂತರ ಕೇಂದ್ರದ ಒಳಬೀಡುತ್ತಿದ್ದಾರೆ. ಇನ್ನೂ ಈ ವೇಳೆ ಕೋವಿಡ್-19 ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪೋಲಿಸರು ಹಾಗೂ ಜನರು ನಿಭಾಯಿಸುತ್ತ ಇರುವುದು ಮೊಳಕಾಲ್ಮುರಿನಲ್ಲಿ ಕಂಡು ಬಂತು. ವರದಿ – ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Read More

ಗ್ರಾಮಪಂಚಾಯತ್ ಚುನಾವಣೆ ಮತ ಪ್ರಕ್ರಿಯೆ ಆರಂಭ..!

ಮೊಳಕಾಲ್ಮೂರು ತಾಲೂಕಿನ ಚಿತ್ರದುರ್ಗದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೊಳಕಾಲ್ಮೂರು ನಗರದ ಪದವಿಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 7ಗಂಟೆಯಿಂದಲೇ ಪ್ರಾರಂಭಿಸಲಾಗಿದೆ. ಇನ್ನೂ ಈ ವೇಳೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು , ಮತ ಎಣಿಕೆ ಕಚೇರಿಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು , ಇನ್ನೂ ಕೇಂದ್ರದ ಒಳಹೋಗುವ ಎಲ್ಲಾರನ್ನೂ ಪೊಲೀಸರು ತಪಾಸಣೆ ಮಾಡಿ ನಂತರ ಕೇಂದ್ರದ ಒಳಬೀಡುತ್ತಿದ್ದಾರೆ. ಇನ್ನೂ ಈ ವೇಳೆ ಕೋವಿಡ್-19 ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪೋಲಿಸರು ಹಾಗೂ ಜನರು ನಿಭಾಯಿಸುತ್ತ ಇರುವುದು ಮೊಳಕಾಲ್ಮುರಿನಲ್ಲಿ ಕಂಡು ಬಂತು. ವರದಿ – ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Read More

ಮೊಳಕಾಲ್ಮುರಿನಲ್ಲಿ ಶಾಂತಿಯುತವಾಗಿ ನಡೆದ ಮತದಾನ..!

ಮೊಳಕಾಲ್ಮುರ: ಮೊಳಕಾಲ್ಮುರು ತಾಲ್ಲೂಕಿನ ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ,ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ 311 ಸದಸ್ಯ ಸ್ಥಾನಗಳಿಗೆ ಶಾಂತಿಯುತ ಮತದಾನ ನಡೆಯಿತು. ಎಲ್ಲ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ಬಳಸುತ್ತಾ ಕೋಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರು. ಈ ಬಾರಿ ತಾಲ್ಲೂಕಿನಲ್ಲಿ ಒಟ್ಟಾರೆ 85.68% ನಷ್ಟು ಮತದಾನವಾಗಿದ್ದು, ತಾಲ್ಲೂಕಿನಾದ್ಯಂತ ಒಟ್ಟು 93ಸಾವಿರದ 124 ಮತದಾರರಿದ್ದು 80 ಸಾವಿರದ 945 ಜನ ಭಾನವಾರ ಮತದಾನ ಮಾಡಿದ್ದಾರೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿಸಿದ್ದಾರು. ರಾಂಪುರದಲ್ಲಿ ಕೂಡ್ಲೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಸಿದ್ದಯ್ಯನ ಕೋಟೆಯಲ್ಲಿ ಶ್ರೀ ಮಠದ ಬಸವಲಿಂಗ ಸ್ವಾಮೀಜಿ, ಬಿಜಿ ಕೆರೆಯಲ್ಲಿ ಜಿಲ್ಲಾಪಂ ಸದಸ್ಯ ಡಾ.ಯೋಗೇಶ್ ಬಾಬು ಇನ್ನು ಮುಂತಾದವರು ಮತ ಚಲಾಯಿಸಿದರು. ವರದಿ-ಸಿಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು .

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ -ಬದುಕು ಕಟ್ಟಿಕೊಳ್ಳಲು ಹೋಗಿ ಮಸಣ ಸೇರಿದ ಕೂಲಿ ಕಾರ್ಮಿಕರು..!

ಮೊಳಕಾಲ್ಮುರು ತಾಲ್ಲೂಕಿನ ಬಿಜಿಕೆರೆ ಹೊಸೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ,ಭೀಕರ ಅಪಘಾತ ಸಂಭವಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿಸಿ ಕೆಲಸ ಆರಿಸಿ ಬೆಂಗಳೂರಿನತ್ತ ಹೊರಟಿದ್ದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಐವರು ಕೂಲಿ ಕಾರ್ಮಿಕರು ಭಾನುವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕ್ರೂಸರ್ ಹಾಗೂ ಸಿಂಧನೂರು ಕಡೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ 17 ಜನರಿಗೆ ಗಂಭೀರ ಗಾಯಗಳಾಗಿದೆ. ದೇವದುರ್ಗ ತಾಲ್ಲೂಕಿನ ಹೊಸೂರು ಸಿದ್ಧಾಪುರದ 40 ವರ್ಷದ ಶಿವಣ್ಣ, ಹಾಗೂ ಅವರ ಪತ್ನಿ 38 ವರ್ಷದ ರತ್ನಮ್ಮ, ಹಾಗೂ ಕ್ರೂಸರ್ ಚಾಲಕ ಕಣಿಗಲೆ ಗ್ರಾಮದ 19 ವರ್ಷದ ಮಹೇಶ್, 15 ವರ್ಷದ ಸೋಮನಮರಡಿ ದುರುಗಪ್ಪ, ಗಾಣದಾಳು ಗ್ರಾಮದ 55 ವರ್ಷದ ಅಮರೇಶ ಮೃತ ದುರ್ದೈವಿಗಳಾಗಿದ್ದಾರೆ. ಇನ್ನುಳಿದ 17 ಜನರಿಗೆ ಗಾಯಗಳಾಗಿದ್ದು, ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.…

Read More

ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆಗೆ ಪೂರ್ವ ಸಿದ್ಧತೆ..!

ಮೊಳಕಾಲ್ಮುರು: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಒಟ್ಟು162 ಮತಗಟ್ಟೆಗಳಿದ್ದು,ಇದರಲ್ಲಿ 12 ಮತಗಟ್ಟೆಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂಳಿದ 150 ಮತಗಟ್ಟೆಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಇನ್ನೂ ಈ ಬಗ್ಗೆ ಚುನಾವಣೆ ಅಧಿಕಾರಿಗಳಾದ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿದದ್ದಾರೆ.ಇನ್ನೂ ಈ ವೇಳೆ ಇ.ಒ ಪ್ರಕಾಶ್ ಮಾತನಾಡಿ ಎಲ್ಲಾ ಮತಗಟ್ಟೆಗಳಲ್ಲಿ ಯಾವುದೇ ರೀತಿಯಾ ತೊಂದರೆ ಉಂಟಾಗಬಾರದು, ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. PRO178, APRO178, PO356, ಇದರಂತೆ ಎಲ್ಲಾ ಕೊಠಡಿಗಳಿಗೆ ಹೋಗಿ ತಮ್ಮ ತಮ್ಮ ಮಾಹಿತಿಯನ್ನು ತೆಗೆದುಕೊಂಡು ಮಧ್ಯಾಹ್ನದ ಮೇಲೆ ಅವರವರ ಹಳ್ಳಿಗಳಿಗೆ ಹೋಗಬೇಕೆಂದು ತಿಳಿಸಿದರು. ವರದಿ- ಪಿ.ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Read More

ಅಜಾತಶತ್ರು ದಿವಂಗತ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ.!

ಮೊಳಕಾಲ್ಮೂರು: ಭಾರತೀಯ ಜನತಾ ಪಾರ್ಟಿ ಮಂಡಳದ ವತಿಯಿಂದ ಭಾರತದ ಮಾಜಿ ಪ್ರಧಾನಿಗಳಾದ ,ಅಜಾತಶತ್ರು ,ಭಾರತರತ್ನ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಇಂದು ಬೆಳಿಗ್ಗೆ 11 ಕ್ಕೆ ಮೊಳಕಾಲ್ಮೂರು ಪಕ್ಷದ ಕಚೇರಿಯಲ್ಲಿ ನೆರೆವೇರಿಸಲಾಯಿತು. ಇನ್ನೂ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಂಡಳಿ ಅಧ್ಯಕ್ಷರಾದ ಡಾ.ಮಂಜುನಾಥ ಪಿಎಂ ರವರು, ತೇಜಸ್ವಿ ಮುಖಚರ್ಯ ಹಚ್ಚಲು ಸಿದ್ಧಾಂತ ಪ್ರತಿಪಾದನೆ ಅಭಿವೃದ್ಧಿಪರ ಚಿಂತನೆಗಳಿಂದ ಭಾರತದ ಜನರ ಹೃದಯ ಗೆದ್ದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವಶಿಕ್ಷಣ ಅಭಿಯಾನ, ಚತುಷ್ಪಥ ರಸ್ತೆ, ಗ್ರಾಮ ಸಡಕ್ ಯೋಜನೆಯನ್ನು, ರಾಷ್ಟ್ರಕ್ಕೆ ಸಮರ್ಪಿಸಿದ ಮೇರು ವ್ಯಕ್ತಿತ್ವ ಅಟಲ್ ಅವರದು.ಈ ದಿನವನ್ನು ಕೇಂದ್ರ ಸರ್ಕಾರ “ಸುಶಾಸನ “ಜನ ಹೊನ್ನಾಗಿ ಆಚರಿಸಲಾಗುತ್ತಿದೆ.ಈ ದಿನದ ಅಂಗವಾಗಿ ಕೇಂದ್ರದ ನಮೋ ಸರಕಾರ ಕಿಸನ್ ಸನ್ಮಾನ ಯೋಜನೆಯಡಿ 9ಕೋಟಿ ರೈತರಿಗೆ ತಲಾ 2ಸಾವಿರೂ ಗಳಂತೆ 18000ಕೋಟಿ ರೂ ಗಳನ್ನು ಮಧ್ಯವರ್ತಿಗಳು ಹಾವಳಿಯಿಲ್ಲದಂತೆ…

Read More