ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ.ಮೊದಲ ಘಟನೆಯಲ್ಲಿ ಮೃತರನ್ನು ಚೆನ್ನಾಪುರಿ ಮತ್ತು ವೀರಣ್ಣ ಎಂದು ಗುರುತಿಸಲಾಗಿದ್ದು, ಹೊಲಗಳಲ್ಲಿ ದನ ಮೇಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮತ್ತೊಂದು ಘಟನೆಯಲ್ಲಿ, ಹರವಡಹಳ್ಳಿಯ ಜರ್ಮಹಳ್ಳಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜಶೇಖರ್ ತಮ್ಮ ಕೃಷಿ ಜಮೀನಿನಿಂದ ಹಿಂದಿರುಗುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಮೂರನೇ ಘಟನೆಯಲ್ಲಿ, ಅಯ್ಯನಹಳ್ಳಿ ಗ್ರಾಮದ ಪತ್ರೆಪ್ಪ ತನ್ನ ಕಿರಾಣಿ ಅಂಗಡಿ ಬಾಗಿಲು ಮುಚ್ಚುತ್ತಿದ್ದಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ತಹಶೀಲ್ದಾರ್ ಮಹಾಬಲೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Read MoreCategory: E-paper
“ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಇಲ್ಲೇ ಬಳಕೆಯಾಗ್ಬೇಕು”
ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ್ದೇವೆ. ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಹಲವು ಸೂಚನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಘೋಯಲ್ ಜೊತೆ ಮಾತುಕತೆ ಮಾಡಿದ್ದೇನೆ ಎಂದಿದ್ದಾರೆ.
Read Moreಕೇಂದ್ರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
ರಾಜಧಾನಿ ದೆಹಲಿಯಲ್ಲಿ ಆಮ್ಲಜನಕದ ಬಿಕ್ಕಟ್ಟು ಮುಂದುವರೆದಿದೆ. ಕಳೆದ ಹಲವು ದಿನಗಳಿಂದ ದೆಹಲಿ ಹೈಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಪ್ರತಿ ವಿಚಾರಣೆಯಲ್ಲಿ ಆಮ್ಲಜನಕವನ್ನ ನಿಯಮಿತವಾಗಿ ಪೂರೈಸಲು ನಿರ್ದೇಶನ ನೀಡುತ್ತಿತ್ತು. ಆದ್ರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ಇಂದು ಸುಪ್ರೀಂ ಕೋರ್ಟ್ ಸೋಮವಾರದೊಳಗೆ ಆಮ್ಲಜನಕ ಪೂರೈಸುವಂತೆ ತನ್ನ ಆದೇಶದಲ್ಲಿ ಸೂಚಿಸಿದೆ. ದೆಹಲಿಗೆ 700 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿಲ್ಲ ಎಂದು ಕೇಂದ್ರವು ದೆಹಲಿ ಹೈಕೋರ್ಟ್ʼನಲ್ಲಿ ಏಕೆ ಹೇಳಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಆದೇಶವನ್ನ ಪಾಲಿಸುವುದು ಮತ್ತು ವಿಫಲ ಅಧಿಕಾರಿಗಳನ್ನ ಜೈಲಿಗೆ ಹಾಕುವುದು ಕೇಂದ್ರದ ಜವಾಬ್ದಾರಿ ಎಂದು ಹೇಳಿದೆ. ಇದೇ ವೇಳೆ, 10ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದ್ದು, ನಂತರ ರಾಜ್ಯ ಸರ್ಕಾರದ ಸನ್ನದ್ಧತೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
Read Moreತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ
ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ ಆಮ್ಲಜನಕ ಕೊರತೆಯಿಂದ ಇನ್ನು ಮುಂದೆ ಯಾವುದೇ ಸಾವು ರಾಜ್ಯದಲ್ಲಿ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ 28 ಜನ ಚಾಮರಾಜನಗರದಲ್ಲಿ ಸತ್ತಿದ್ದಾರೆ. 3 ಜನ ಸತ್ತಿದ್ದಾರೆ ಎಂಬ ಸುಧಾಕರ್ ಹೇಳಿಕೆ ಶುದ್ಧ ಸುಳ್ಳು. ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಬಗ್ಗೆ ಹೇಳಿದ್ದಾರೆ. ಇಟ್ಸ್ ಗುಡ್. ಒಳ್ಳೇದೇ ಮಾಡಿದ್ದಾರೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.
Read Moreಲಾಕ್ಡೌನ್ ನಡುವೆಯೂ ಲಂಚಾವತಾರ..
ಬೆಂಗಳೂರು: ಅತ್ತಿಬೆಲೆ ಚೆಕ್ಪೋಸ್ಟ್ ನಲ್ಲಿ ಕಳೆದ ರಾತ್ರಿ ಹಣ್ಣು ಮತ್ತು ತರಕಾರಿ ಸಾಗಣೆ ಮಾಡುತ್ತಿದ್ದ ವಾಹನ ಚಾಲಕರಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಇಬ್ಬರು ಬ್ರೇಕ್ ಇನ್ಸ್ಪೆಕ್ಟರ್ಗಳನ್ನು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅಮಾನತು ಮಾಡಿದ್ದಾರೆ,ಬ್ರೇಕ್ ಇನ್ಸ್ ಪೆಕ್ಟರ್ಗಳಾದ ಟಿ.ಕೆ. ಜಯಣ್ಣ ಹಾಗೂ ಕರಿಯಪ್ಪ ಅಮಾನತುಗೊಂಡವರು.ಇವರೊAದಿಗೆ ಶಾಮೀಲಾಗಿದ್ದ ಮಾಜಿ ಹೋಮ್ ಗಾರ್ಡ್ ವಿವೇಕ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಇನ್ನು ಕರಿಯಪ್ಪರಿಂದ ೧೨೫೦ ರೂ., ಜಯಣ್ಣರಿಂದ ೧೧೦೦ ರೂ.,ವಿವೇಕ್ರಿಂದ ೮೦೦ ರೂ. ಹಾಗೂ ಚೆಕ್ಪೋಸ್ಟ್ ಕಚೇರಿಯಲ್ಲಿ ೧೨೩೫೦ ರೂ. ವಶಪಡಿಸಿಕೊಳ್ಳಲಾಗಿದೆ ಅಂತ ಡಿಸಿ ಮಾಹಿತಿ ನೀಡಿದ್ದಾರೆ.
Read Moreಮನೆಯಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಕುಳಿತ್ತಿದ್ದೇಕೆ..?
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚಿಸಿ ಜಿಲ್ಲೆಗಳಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು.ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಿಂದ ನಡೆಸಿದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಮಂಡ್ಯ ಶಾಸಕ ಶ್ರೀನಿವಾಸ್,ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು,ನಾಗಮಂಗಲ ಶಾಸಕ ಸುರೇಶ್ ಗೌಡ,ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್,ಶಿರಾ ಶಾಸಕ ಸತ್ಯನಾರಾಯಣ ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
Read Moreಜಪಾನ್ನಲ್ಲೂ ರಾಕಿಭಾಯ್ ಹವಾ..!
ಟೋಕಿಯೋ: ನ್ಯಾಷನಲ್ ಸ್ಟಾರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಐವತ್ತು ದಿನಗಳತ್ತ ದಾಪುಗಾಲಿಡುತ್ತಿದೆ. ಅಲ್ಲದೇ ಕೆಜಿಎಫ್ ಸಿನಿಮಾ ನೆರೆಯ ಪಾಕಿಸ್ತಾನದಲ್ಲೂ ಅಬ್ಬರಿಸಿದ್ದು ಈಗ ಹಳೆಯ ಸುದ್ದಿಯಾಗಿದೆ. ಇದೀಗ ಲೇಟೆಸ್ಟ್ ನ್ಯೂಸ್ ಏನಪ್ಪ ಅಂದರೆ ಕೆಜಿಎಫ್ ಸಿನಿಮಾ ಜಪಾನ್ನಲ್ಲೂ ಸಖತ್ ಸದ್ದು ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಜಪಾನ್ನ ಚಿತ್ರಮಂದಿರವೊಂದರಲ್ಲಿ ಕೆಜಿಎಫ್ ಚಿತ್ರದ ಪ್ರದರ್ಶನ ಜೋರಾಗಿ ನಡೆಯುತ್ತಿತ್ತು. ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್ ಜೊತೆ ವಿಡಿಯೋ ಕಾಲಿಂಗ್ ಮೂಲಕ ಮಾತನಾಡಿದ್ದಾರೆ. https://twitter.com/YashFC/status/1089510792997695491ಇನ್ನೂ ಇದೇ ವೇಳೆ ಜಪಾನ್ ನಾಗರಿಕರೂ ಕೂಡ ಯಶ್ಗೆ ವಿಶ್ ಮಾಡಿದ್ದು ವಿಶೇಷವಾಗಿತ್ತು. ಇನ್ನೂ ಯಶ್ ಅವರ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲೋ ಅನ್ನೋ ಡೈಲಾಗ್ ಹೊಡಿಬೇಕು ಅಂತಾ ಅಲ್ಲಿದ್ದವರು ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಯಶ್ ಡೈಲಾಗ್ ಹೊಡೆದು ಫ್ಯಾನ್ಸ್ಗೆ ಥ್ಯಾಂಕ್ಸ್ ಹೇಳಿದರು. ಈ ದೃಶ್ಯಗಳನ್ನು ಅಭಿಮಾನಿಯೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದಿದ್ದಾರೆ. ಮೂರು ನಿಮಿಷ…
Read More