ಸ್ಪೀಕರ‍್ ರಮೇಶ್ ಕುಮಾರ‍್ ಅಸಹಾಯಕತೆ

ಬೆಳಗಾವಿ: ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ ಅಂದರೆ ಭಾಷಣ ಮಾಡುತ್ತಾರೆ ಎಂದು ಸ್ಪೀಕರ‍್ ರಮೇಶ್ ಕುಮಾರ‍್ ಅಸಹಾಯಕತೆ ತೋಡಿಕೊಂಡ ಘಟನೆ ಶುಕ್ರವಾರ ನಡೆ ಯಿತು.

ನನಗೆ ಸಾಕಾಗುತ್ತಿದೆ ಈ ಕೆಲಸ ಉಸಿರು ಗಟ್ಟುತ್ತಿದೆ. ಶಾಸಕರು ತರಬೇತಿಗೆ ಕರೆದರೆ ಬರಲ್ಲ. ಪಕ್ಷದವರು ತಾವೇ ತರಬೇತಿ ಕೊಡಲ್ಲ. ಮೂರು ಉಪಪ್ರಶ್ನೆ ಕೇಳಬೇಕಾದ ಕಡೆ ಮೂವತ್ತು ಜನ ಎದ್ದು ನಿಲ್ಲುತ್ತಾರೆ. ಹೀಗಾದರೆ, ಸದನ ನಡೆಸುವುದು ಹೇಗೆ ಎಂದು ಅಸಹಾಯಕರಾದರು.

ಇದೇ ವೇಳೆ, ಪ್ರಶ್ನೋತ್ತರ ಅವಧಿಯನ್ನು ಆದಷ್ಟು ಕಡಿಮೆ ಮಾಡಿ ಎಂದು ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದರು. ಇದರಿಂದ ಸದನದ ಸಮಯ ಉಳಿತಾಯವಾಗುತ್ತದೆ. ಸದನದಲ್ಲಿ ಪ್ರಶ್ನೋತ್ತರ ಕಲಾಪ ಅವಧಿ ಒಂದು ಗಂಟೆ ಅವಕಾಶವಿದೆ. ರಾಜಕಾರಣಿಗಳಿಗೆ ಮೈಕ್ ಸಿಕ್ಕಿದ್ರೆ ಭಾಷಣ ಶುರು ಮಾಡುತ್ತಾರೆ.

ಒಂದು ಪ್ರಶ್ನೆಗೆ ಇಷ್ಟು ಸಮಯ ಎಂದು ನಿಗದಿ ಮಾಡಿ. ಆದರೆ ಅದು ಗಂಟೆಗಳು ಆಗುತ್ತಿವೆ, ಅದಕ್ಕೆ ಒಂದು ಶಿಸ್ತು ಬೇಕು ಎಂದು ಹೇಳಿದರು.

Please follow and like us:

Related posts

Leave a Comment