ಸರಳ ಜೀವನ ಉದಾತ್ತ ಚಿಂತಕ ಶಿವಾಜಿ ಛೆತ್ರಪ್ಪ ಕಾಗಣೀಕರ

ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಯಕರು, ಬಿಳಿ ಕಾಲರ್ ಅಧಿಕಾರಿಗಳಂತಹ ಹೈಫೈ ಮಂದಿಯೇ ಕುಳಿತುಕೊಂಡು ಸಭೆ ನಡೆಸುವ ವಿಧಾನಸೌಧದ ಮೂರನೇ ಮಹಡಿಯ ವೈಭವೋಪೇತ ಸಮ್ಮೇಳನ ಸಭಾಂಗಣ (ಕಾನ್ಫರೆನ್ಸ್ ಹಾಲ್ ಕೊಠಡಿ 334) ಡಿಸೆಂಬರ್ 5ರ ಬುಧವಾರ ಇಡೀ ತನ್ನ ಇತಿಹಾಸದಲ್ಲೇ ಅಪರೂಪದ ಅತಿಥಿಯೊಬ್ಬರಿಗೆ ಸಾಕ್ಷಿ ಯಾಗಿತ್ತು.

ಚಡ್ಡಿ ಅಂಗಿ ಧರಿಸಿದ್ದ ಆ ವ್ಯಕ್ತಿ ತಲೆ ಮೇಲೊಂದು ಸಣ್ಣ ಟೋಪಿ ಧರಿಸಿ ಹೆಗಲಿಗೊಂದು ಕೈಚೀಲ ಹಾಕಿದ್ದರು. ಅವರ ಪಕ್ಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು, ಹಿರಿಯ ಅಧಿಕಾರಿಗಳು ಇದ್ದರೂ ಆ ವ್ಯಕ್ತಿಯಷ್ಟು ಯಾರೂ ದೊಡ್ಡವರಾಗಿ ಕಾಣಲಿಲ್ಲ. ಆ ವ್ಯಕ್ತಿಯಲ್ಲಿದ್ದಷ್ಟು ತೇಜಸ್ಸು, ಜೀವನೋತ್ಸಾಹ, ಅದಮ್ಯ ನಿಸ್ವಾರ್ಥ ಸೇವಾ ಮನೋಭಾವ ಅಲ್ಲಿದ್ದ ಯಾರ ಮುಖದಲ್ಲೂ ಕಾಣಲಿಲ್ಲ. ಆ ಅಪರೂಪದ ವ್ಯಕ್ತಿ ಮತ್ತಾರು ಅಲ್ಲ, ಬೆಳಗಾವಿ ಜಿಲ್ಲೆಯ ಶಿವಾಜಿ ಛೆತ್ರಪ್ಪ ಕಾಗಣೀಕರ ಅವರು. ಅವರಿಗೆ ಈ ವರ್ಷದ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಅವರ ಮುಡಿಗೇರಿತ್ತು. ಈ ಪ್ರಶಸ್ತಿ ಅವರಿಗೆ ಲಭಿಸಿದ್ದರಿಂದ ಅವರಿಗಿಂತ ಆ ಪ್ರಶಸ್ತಿಯ ಮೌಲ್ಯವೇ ನೂರ್ಮಡಿ ಹೆಚ್ಚಾಗಿತ್ತು. ಆ ಮೂಲಕ ಸರ್ಕಾರ ಅಪರೂಪದ ಹಾಗೂ ಯಾರಿಗೂ ಗೊತ್ತಿಲ್ಲದ ಅಂದರೆ ಎಲೆಮರೆ ಕಾಯಿಯಂತಹ, ಸರಳ, ಸಜ್ಜನ ವ್ಯಕ್ತಿಯೊಬ್ಬನನ್ನು ಗೌರವಿಸಿ ಸರ್ಕಾರವೇ ತನ್ನನ್ನು ತಾನು ಗೌರವಿಸಿಕೊಂಡಿತು.

Please follow and like us:

Related posts

Leave a Comment