ಬೆಳ್ಳಂಬೆಳಿಗ್ಗೆ ಬೋನಿಗೆ ಬಿದ್ದ ಚಿರತೆ

ಬಳ್ಳಾರಿ:ಡಿಸೆಂಬರ್:೨೧: ಬಳ್ಳಾರಿ ಜಿಲ್ಲೆಯ ದರೋಜಿ ಸೋಮಲಾಪುರ ಗ್ರಾಮದ ಸಮೀಪದಲ್ಲಿ ಚಿರತೆ ಬೋನಿಗೆ ಬಿದ್ದಿದೆ, ಹಲವಾರು ದಿನಗಳ ಹಿಂದೆ ಚಿರತೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ೧೦ ವರ್ಷದ ಹುಡುಗನನ್ನು ಕೂಡ ಈ ಚಿರತೆ ಬಲಿತೆಗೆದುಕೊಂಡಿತ್ತು. ಇದರಿಂದ ಸುತ್ತಮುತ್ತಲ ಗ್ರಾಮಸ್ಥರುಗಳು ಸಾಕಷ್ಟು ಭಯದಿಂದ ಕಾಲ ಕಳೆಯುವಂತಾಗಿತ್ತು, ಆದರೆ ಇಂದು ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟಂತಾಗಿದೆ.
ಅರಣ್ಯ ಅಧಿಕಾರಿಗಳ ಸತತವಾದ ಪ್ರಯತ್ನದಿಂದ ೧೦ ದಿನಗಳ ಬಳಿಕ ಚಿರತೆ ಬೋನಿಗೆ ಬಿದ್ದಿದ್ದು, ಚಿರತೆಯನ್ನು ಹಿಡಿಯುವ ಕೆಲಸದಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

Please follow and like us:

Related posts

Leave a Comment