ಮಿಸ್ ಯು ಅಣ್ಣಾ ಎಂದು ಅಂಬಿಯನ್ನು ನೆನೆದ ಯಶ್

ಬೆಂಗಳೂರು, ಡಿ.21: ಅಂಬಿಯ ಮಗನಾಗಿ ಯಶ್ ಇದ್ದರೂ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಶ್ ಮನೆಯ ಎಲಾ ಸಮಾರಂಭಕ್ಕೂ ಅಂಬಿ ಇದ್ದೇ ಇರುತ್ತಿದ್ದರು. ಅಷ್ಟೆ ಅಲ್ಲ ಅಂಬಿ ಇಹಲೋಕ ತ್ಯಜಿಸಿದಾಗಲೂ ಕೂಡ ಅಂಬಿಯ ಮಗನಾಗಿ ಅವರ ಎಲ್ಲ ಕಾರ್ಯಗಳನ್ನು ಅಭಿ ಜೊತೆಗಿದ್ದು ನಡೆಸಿಕೊಟ್ಟರು ನಟ ಯಶ್. ಇದೀಗ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ‘ಕೆಜಿಎಫ್’ ಬಿಡುಗಡೆಯಾಗಿದೆ. ಈ ವೇಳೆ ಅಂಬರೀಶ್ ಅವರನ್ನು ನೆನೆಸಿಕೊಂಡಿದ್ದಾರೆ ಯಶ್.

ಮಿಸ್ ಯು ಅಣ್ಣಾ ಎಂದ ಯಶ್

ಹೌದು, ಇಂದು ಅಂಬಿಯ ತಿಂಗಳ ತಿಥಿ ಕಾರ್ಯ ನೆರವೇರಿದೆ. ಇಂದು ಈ ನೋವು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಕೆಜಿಎಫ್ ಸಿನಿಮಾ ರಿಲೀಸ್ ಕೂಡ ಆಗಿದೆ‌. ಇದೆಲ್ಲದರ ನಡುವೆ ಇದೀಗ ಅಂಬಿ ಇಲ್ಲದ ನೋವು ಕಾಡುತ್ತಿದೆ. ಈ ಹಿಂದೆ ಅಂಬರೀಶ್ ಅಣ್ಣ ಸಿನಿಮಾ ನೋಡಬೇಕಿತ್ತು ಅಂತಾ ಯಶ್ ಹೇಳಿದ್ದರು. ಇದೀಗ ಅಂಬಿ ಮನೆಗೆ ತೆರಳಿದ್ದ ಯಶ್, ಅವರ ಫೋಟೋಗೆ ಪುಷ್ಪಾರ್ಚನೆ ಮಾಡಿ ಭಾವುಕರಾಗಿದ್ದರು. ಇನ್ನು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಮಿಸ್ ಯು ಅಣ್ಣ ಎಂದು ಯಶ್ ಹಂಚಿಕೊಂಡಿದ್ದಾರೆ.

Please follow and like us:

Related posts

Leave a Comment