ಬಳ್ಳಾರಿ, ಡಿ:22, ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ವಾರ್ಷಿಕೋತ್ಸವ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ಕಾರ್ಯಕ್ರಮ ದೀಪ ಬೆಳೆಗಿಸುವ ಮೂಲಕ ಫಾದರ್ ಪೋಲ್ ರಾಜ್ ಚಾಲನೆ ನೀಡಿದರು
ಸಿಸ್ಟರ್ ತೇರಿಸ ಪೀಟರ್ ಪ್ರಭು ಸ್ವಾಮಿಗಳು, ಮುಪ್ತಿ ಶೇಕ್ ಮಹಮ್ಮದ್ ಅಲಿ, ಮುಖ್ಯ ಗುರುಗಳಾದ, ಹೆಲೆನ್ ಉಪಸ್ಥಿತರಿದ್ದರು,
ಈ ಕಾರ್ಯಕ್ರಮ ದಲ್ಲಿ ಮಾತನಾಡಿದ ಫಾಲ್ ರಾಜ್ ಹಿಂದಿನ ಮಕ್ಕಳೆ ಮುಂದಿನ ಪ್ರಜೆಗಳು, ಹಾಗೂ ಶಿಸ್ತು ಸಂಯಮ ನೀತಿ ನಿಯಮಗಳನ್ನು ಪಾಲಿಸಿ ಹಿರಿಯರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಲು
ಮುಂದಾಗಬೇಕು,ಅಷ್ಟೇ ಅಲ್ಲದೆ ನೀವು ಡಾಕ್ಟರ್ ಇಂಜಿನಿಯರ್ ಸತ್ಪ್ರಜೆ ಯಾಗಬೇಕು ತಿಳಿಸಿದರು,
ಪ್ರಭು ಸ್ವಾಮಿಗಳು ಮಾತಾನಾಡಿ ಕಲಿಕೆಯ ಮೇಲೆ ಪ್ರಭಾವ ಬೀರುವ ಮೂಲಕ ಆಸಕ್ತಿ ಹೊಂದಿ ಪೋಷಕರಿಗೆ ಕಿರ್ತಿ ಬರುವಂತೆ ಕೆಲಸ ಮಾಡಬೇಕು ಅದು ಅಲ್ಲದೆ ಗುರುಗಳಿಗೆ ಗೌರವ ನೀಡಿ ಉತ್ತಮ ಶಿಕ್ಷಣ ಪಡೆದು ಶಾಲೆಗೆ ಘನತೆ ಗೌರವಗಳನ್ನು ತಂದು
ಕೊಡುವ ಮೂಲಕ ಕಿರ್ತಿ ಪಾತಕೆ ಹಾರಿಸಬೇಕು,ಎಂದು ನುಡಿದರು, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಿದರು, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂತು, ತದನಂತರ ಮಕ್ಕಳ ಪೋಷಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಭಾಗವಹಿಸಿ ಸಂತೋಷ ಪಟ್ಟರು ಈ ಸಂದರ್ಭದಲ್ಲಿ ವಿವಿಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇತರರು ಭಾಗವಹಿಸಿ ಬಹುಮಾನ ವಿತರಣೆ ಮಾಡಿದರು
ಸಂತ ಜೋಸೆಫ್ ಬಾಲಕಿಯರ ಶಾಲೆಯಲ್ಲಿ ವಾರ್ಷಿಕೋತ್ಸವ

Please follow and like us: