ಪರಮೇಶ್ವರ್ ರನ್ನು ಗೃಹ ಇಲಾಖೆಯಿಂದ ತೆಗೆಯಬಾರದಿತ್ತು : ರೇವಣ್ಣ

ಬೆಂಗಳೂರು : ಪರಮೇಶ್ವರ್ ಅವರನ್ನು ಗೃಹ ಇಲಾಖೆಯಿಂದ ತೆಗೆಯಬಾರದಿತ್ತು. ಅವರನ್ನು ಗೃಹ ಸಚಿವರಾಗಿ ಮುಂದುವರೆಸಬೇಕಿತ್ತು ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಪರಮೇಶ್ವರ್ ಅವರನ್ನು ಗೃಹ ಇಲಾಖೆಯಿಂದ ತೆಗೆಯಬಾರದಿತ್ತು. ಅರು ತಿಂಗಳು ಅವರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಅವರು ಹೇಳಿದರು.

ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ನೇಮಕಾತಿ ವಿಚಾರವಾಗಿ ಮಾತನಾಡಿದ ಅವರು ‘ ಸಿಎಂ ಕಾರ್ಯದರ್ಶಿ ವಿಷಯ ನನಗೆ ಗೊತ್ತಿಲ್ಲ, ಅದಕ್ಕೂ ನನಗೆ ಸಂಬಂಧ ಇಲ್ಲ. ಯಾರು ನೇಮಕಾತಿ ಮಾಡಿದ್ದಾರೋ ಅವರನ್ನೇ ಕೇಳಿ. ಸಿಎಂ ಎಷ್ಟು ದಿನ ಇದನ್ನೆಲ್ಲಾ ತಡೆದುಕೊಳ್ತಾರೋ’ ಎಂದು ಕಾಂಗ್ರೆಸ್ ವಿರುದ್ಧ ಗರಂ ಆದರು.

Please follow and like us:

Related posts

Leave a Comment