ಶಾಕಿಂಗ್ ನ್ಯೂಸ್ : ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯಲ್ಲಿ ಹೊಸ ವರ್ಷಾಚರಣೆ ಮಾಡಬೇಕೆಂದು ಯೋಜನೆ ರೂಪಿಸುತ್ತಿರುವವರಿಗೆ ಮಂಡ್ಯ ಜಿಲ್ಲಾಡಳಿತ ಶಾಕಿಂಗ್ ನ್ಯೂಸ್ ನೀಡಿದೆ.

ಮಳವಳ್ಳಿ ತಾಲೂಕಿನಲ್ಲಿರುವ ಮುತ್ತತ್ತಿಯಲ್ಲಿ ಕಾವೇರಿ ನದಿ ಅಂಚಿನಲ್ಲಿ ಹೊಸ ವರ್ಷಾಚರಣೆಗಾಗಿ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಡಿ. 31 ರ ಬೆಳಗ್ಗೆ 6 ಗಂಟೆಯಿಂದ ಜ.1ರ ಮಧ್ಯರಾತ್ರಿಯವರೆಗೆ ಮುತ್ತತ್ತಿಗೆ ಸಾರ್ವಜನಿಕರು ಪ್ರವೇಶಿಸದಂತೆ ನಿಷೇಧಿಸಿ ಸೆಕ್ಷನ್​ 144 ಜಾರಿ ಮಾಡಿ ಮಳವಳ್ಳಿ ತಹಸೀಲ್ದಾರ್​ ಕೆ. ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ.

Please follow and like us:

Related posts

Leave a Comment