ತಿಥಿ ಸಿನಿಮಾ ನಟ ಗಡ್ಡಪ್ಪ ಇನ್ನಿಲ್ಲಾ ಎಂಬುವುದು ಸುಳ್ಳು ಸುದ್ದಿ

ತಿಥಿ ಸಿನಿಮಾ ನಟ ಗಡ್ಡಪ್ಪ ಅನಾರೋಗ್ಯ ದ ಹಿನ್ನಲೇ ಕೆಲ ಮಾದ್ಯಮಗಳು ಗಡ್ಡಪ್ಪ ಇನ್ನಿಲ್ಲಾ ಎಂದು ಸುಳ್ಳು ಸುದ್ದಿ ಎಬ್ಬಿಸಿದ್ದಾರೆಂದು ಅವರ ಮಗಳು ಶೋಭಾ ಹೇಳಿದಾರೆ…..

ಗಡ್ಡಪ್ಪಗೆ ಈ ಹಿಂದೆಯೇ ಹೃದಯ ಸಂಬಂಧಿ ಖಾಯಿಲೆ ಇತ್ತು

ವಯಸ್ಸಾಗಿದ್ದರಿಂದ ಅವರಿಗೆ ಆಪರೇಷನ್ ಮಾಡಿಸಲು ಸಾಧ್ಯವಾಗಲಿಲ್ಲ

ಆದರೆ ಇದೀಗ ಬಿಪಿ ಹೆಚ್ಚಾಗಿ ಸ್ಟ್ರೋಕ್ ಹೊಡೆದಿದೆ. ಮಾತು ನಿಂತು ಹೋಗಿದೆ

ಮೊದಲು ಚೆನ್ನಾಗಿಯೇ ಇದ್ರು ತಿಥಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಕಾಣಿಸಿತು

ಕೆಲ ನಿರ್ಮಾಪಕರು ಅವ್ರನ್ನ ಚಿತ್ರೀಕರಣಕ್ಕೆ ಕರೆದೋಗಿ ಸೂಕ್ತ ಸಂಭಾವನೆ ಕೊಡದೇ ವಾಪಸ್ ಕಳುಹಿಸಿದ್ದಾರೆ

86 ವರ್ಷದ ಗಡ್ಡಪ್ಪ ತಿಥಿ ಸಿನಿಮಾ ಮೂಲಕ ಖ್ಯಾತಿ ಹೊಂದವ್ರು.‌ ಕೆಲ ನಿರ್ಮಾಪಕರು ಅವರ ಕೈಯಲ್ಲಿ ಕೆಲ ಡಬ್ಬಲ್ ಮೀನಿಂಗ್ ಅಶ್ಲೀಲ ಪದ ಹೇಳಿಸಿ ಅಪಮಾನಿಸಿದ್ದಾರೆ

ಈ ಬಗ್ಗೆ ನಮಗೆ ತುಂಬಾ ಬೇಸರ ಇದೆ. ಅವ್ರು ಗುಣಮುಖರಾಗಲು ತುಂಬಾ ದಿನ ಬೇಕು.

ಮಾತು ಬರಲು ತುಂಬಾ ದಿನ ಬೇಕು ಅಂತ ವೈದ್ಯರು ಹೇಳಿದ್ದಾರೆ

ನಾವು ಇನ್ಮುಂದೆ ಅವ್ರನ್ನ ಯಾವುದೇ ಸಿನಿಮಾ ಶೂಟಿಂಗ್ ಗೆ ಕರೆದೋಗಬಾರದೆಂದು ತೀರ್ಮಾನಿಸಿದ್ದೇವೆ

ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘದವರು ನಮಗೆ ಯಶವ ಸಹಾಯ ಕೂಡ ಮಾಡಿಲ್ಲ

ನಾವು ತುಂಬಾ ಆರ್ಥಿಕ ಸಂಕಷ್ಟದಲ್ಲಿದ್ದೇವೆ

Please follow and like us:

Related posts

Leave a Comment