ಚಂದಾದಾರರಿಗೆ ಟಿವಿ ಚಾನಲ್‌ಗಳ ಆಯ್ಕೆಗೆ ಜ.31ರ ತನಕ ಕಾಲಾವಕಾಶ ನೀಡಿದ ಟ್ರಾಯ್

ಹೊಸದಿಲ್ಲಿ, ಜ.1: ಡಿಟಿಎಚ್ ಹಾಗೂ ಕೇಬಲ್ ಸೇವಾದಾರರಿಗೆ ಟ್ರಾಯ್ ನೀಡಿರುವ ಹೊಸ ಮಾರ್ಗಸೂಚಿಯನ್ವಯ ಗ್ರಾಹಕರು ತಮ್ಮ ಆಯ್ಕೆಯ ಟಿವಿ ಚಾನಲ್‌ಗಳನ್ನು ಆಯ್ಕೆ ಮಾಡಲು ಜ.31,2019ರ ತನಕ ಕಾಲಾವಕಾಶವಿದೆ.

ಈ ಹಿಂದೆ ಡಿ.28,2018 ಒಳಗೆ ಚಾನಲ್‌ಗಳನ್ನು ಆಯ್ಕೆ ಮಾಡುವಂತೆ ಟ್ರಾಯ್ ಗಡುವು ವಿಧಿಸಿತ್ತು. ಪಿಟಿಐ ವರದಿ ಪ್ರಕಾರ ಚಂದಾದಾರರ ಎಲ್ಲ ಚಾನಲ್‌ಗಳ ಪ್ಯಾಕ್‌ಗಳು ಜನವರಿ ಅಂತ್ಯದ ತನಕ ಮುಂದುವರಿಯಲಿದೆ.

ಟ್ರಾಯ್ ಹೊಸ ಮಾರ್ಗಸೂಚಿಯನ್ವಯ ಎಲ್ಲ ಬಳಕೆದಾರರು ಸ್ವತಃ ಚಾನಲ್‌ಗಳನ್ನು ಆಯ್ಕೆ ಮಾಡಿ, ತಾವು ವೀಕ್ಷಿಸಲು ಬಯಸುವ ಚಾನಲ್‌ಗಳಿಗೆ ಮಾತ್ರ ಪ್ರತಿ ತಿಂಗಳು ಹಣ ನೀಡಬೇಕು. 100 ಉಚಿತ ಚಾನಲ್‌ಗಳನ್ನು ವೀಕ್ಷಿಸಲು ಎಲ್ಲ ಡಿಟಿಎಚ್ ಹಾಗೂ ಕೇಬಲ್ ಚಾನಲ್ ಚಂದಾದಾರರು 130 ರೂ. ಹಾಗೂ ತೆರಿಗೆಯನ್ನು ಪಾವತಿಸಬೇಕು. ಬಳಕೆದಾರರು ಸುಮಾರು 500 ಚಾನಲ್‌ಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಬಹುದು.

Please follow and like us:

Related posts

Leave a Comment