ಸಂಚಾರ ಪೊಲೀಸರ ಸ್ವಚ್ಛತಾ ಕಾರ್ಯ

ಬೆಂಗಳೂರು: ಇಷ್ಟು ದಿನ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದ ನಗರದ ಸಂಚಾರ ಪೊಲೀಸರು ಭಾನುವಾರ ಪೊರಕೆ, ಗುದ್ದಲಿ, ಹಳೇ ಬಟ್ಟೆಗಳನ್ನು ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. “ಜನಸ್ನೇಹಿ’ ಪೊಲೀಸ್‌ ಆಗುವ ನಿಟ್ಟಿನಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಸೂಚನೆ ಮೇರೆಗೆ ನಗರದ 44 ಸಂಚಾರ ಪೊಲೀಸ್‌ ಠಾಣೆ ಸಿಬ್ಬಂದಿ ಭಾನುವಾರ ತಮ್ಮ ಠಾಣೆ ಒಳ ಮತ್ತು ಹೊರ ಆವರಣಗಳನ್ನು ಸ್ವಚ್ಛಗೊಳಿಸಿದರು. ಅಲ್ಲದೆ, ರಸ್ತೆಗಳಲ್ಲಿರುವ ಸೂಚನಾ ಫ‌ಲಕಗಳ ಸ್ವಚ್ಛತೆ, ಗುಂಡಿ ಮುಚ್ಚುವುದು, ಡಿವೈಡರ್‌ನಲ್ಲಿ ಬೆಳೇದ ಗಿಡ ತೆರವು,  ಸೂಚನಾ ಫ‌ಲಕಗಳ ದುರಸ್ತಿ, ಸಿಗ್ನಲ್‌ ಲೈಟ್‌ಗಳ ಪರಿಶೀಲನೆ ಮಾಡಿದರಲ್ಲದೆ, ಠಾಣೆಗಳ ಆವರಣ ಹಾಗೂ ಮೇಲ್ಚಾವಣಿ ಮೇಲೆ ಬಹಳ ವರ್ಷಗಳಿಂದ ಬಿದ್ದಿದ್ದ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಿದರು. ಠಾಣೆಗಳಲ್ಲಿರುವ ಶೌಚಾಲಯಗಳನ್ನು ತಾವೇ ಶುಚಿಗೊಳಿಸಿದರು. ವಾಹನಗಳ ವಿಲೇವಾರಿಗೆ ಕ್ರಮ: ನಗರದ ಎಲ್ಲ 44 ಸಂಚಾರ ಠಾಣೆಗಳ ಆವರಣದಲ್ಲಿರುವ ಅಪರಾಧ ಪ್ರಕರಣಗಳಲ್ಲಿ ಪತ್ತೆಯಾದ ನೂರಾರು…

Read More

31 ವರ್ಷಗಳ ಬಳಿಕ ತವರು ನೆಲದಲ್ಲಿ ಫಾಲೋಆನ್ ಎದುರಿಸಿದ ಆಸೀಸ್ – ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ಟೀಂ ಇಂಡಿಯಾ

ಟೀಂ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಗಿರುವ ಆಸೀಸ್ ತಂಡ ಫಾಲೋಆನ್‍ಗೆ ಒಳಗಾಗಿದ್ದು, 31 ವರ್ಷಗಳ ಬಳಿಕ ತವರು ನೆಲದಲ್ಲಿ ಆಸೀಸ್ ಫಾಲೋಆನ್ ಎದುರಿಸಿದೆ. ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಯ್ತು, ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 322 ರನ್ ಗಳ ಮುನ್ನಡೆಯನ್ನು ಪಡೆದಿತ್ತು. ಈ ಮೊತ್ತ ಆಸೀಸ್ ನೆಲದಲ್ಲಿ ಇದುವರೆಗೂ ಪಡೆದ ತಂಡ ಪಡೆದಿರುವ ಬಹೃತ್ ಮುನ್ನಡೆಯಾಗಿದೆ. ಸದ್ಯ ಅಂತಿಮ ದಿನದಾಟದಲ್ಲಿ ಆಸೀಸ್ ಇನ್ನಿಂಗ್ಸ್ ಮುನ್ನಡೆಗೆ 10 ವಿಕೆಟ್ ಗಳಲ್ಲಿ 316 ರನ್ ಗಳ ಅಗತ್ಯವಿದೆ.

Read More

ಪುತ್ರನ ಪ್ರಗತಿಯತ್ತ ಲಕ್ಷ್ಯ

ಆಂಧ್ರಪ್ರದೇಶ ಮುಖ್ಯಮಂತ್ರಿ ನರಾ ಚಂದ್ರಬಾಬು ನಾಯ್ಡು ಅವರು ಪುತ್ರ ನರಾ ಲೋಕೇಶ್‌ರ ರಾಜಕೀಯ ಭವಿಷ್ಯ ವೃದ್ಧಿಗೊಳಿಸುವುದರತ್ತ ಮಾತ್ರ ಆಸಕ್ತಿ ವಹಿಸಿದ್ದಾರೆ. ಇದರಿಂದಾಗಿ ರಾಜ್ಯ ಮುಳುಗಿ ಹೋಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.  ಆಂಧ್ರಪ್ರದೇಶದಲ್ಲಿ ಬೂತ್‌ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ರವಿವಾರ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ. ಆಂಧ್ರಪ್ರದೇಶದ ಗೌರವಕ್ಕಾಗಿ ಮತ್ತು ಕಾಂಗ್ರೆಸ್‌ ವಿರುದ್ಧದ ಹೋರಾಟಕ್ಕಾಗಿ  ಎನ್‌.ಟಿ.ರಾಮ ರಾವ್‌ ತೆಲುಗು ದೇಶಂ ಸ್ಥಾಪಿಸಿದರು. ಆದರೆ ನಾಯ್ಡು ಈಗ ಅದೇ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಕ್ಷದ ಸ್ಥಾಪಕನಿಗೇ ಅವಮಾನ ಮಾಡಿದ್ದಾರೆ. ಜತೆಗೆ ಮೋಸವನ್ನೂ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಜತೆಗೆ ಎನ್‌ಟಿಆರ್‌ ತೆಲುಗು ಭಾಷಿಕರ ಅಭಿಮಾನದ ಪ್ರತೀಕವಾಗಿದ್ದರು ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಚಂದ್ರಬಾಬು ನಾಯ್ಡು ಆಡಳಿತದ ವಿರುದ್ಧ ಕಟುವಾಗಿ ಟೀಕಿಸಿದ ಪ್ರಧಾನಿ ಮೋದಿ, ಅಧಿಕಾರಕ್ಕಾಗಿ ತೆಲುಗು ಭಾಷಿಕರ ಅಭಿಮಾನವನ್ನೇ ಪಣಕ್ಕೆ…

Read More

ಐದನೇ ದಿನ ಮಳೆಗೆ ಆಹುತಿ: ಭಾರತಕ್ಕೆ ಸರಣಿ ಜಯದ ಕೀರ್ತಿ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ ಅಂತಿಮ ದಿನ ಮಳೆಗೆ ಬಲಿಯಾಗುವುದರೊಂದಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿದ್ದಿದೆ. ಇದರೊಂದಿಗೆ ಸರಣಿಯಲ್ಲಿ 2-1  ಮುನ್ನಡೆ ಸಾಧಿಸಿದ ಭಾರತ ಐತಿಹಾಸಿಕ ಸರಣಿ ಗೆದ್ದು ಬೀಗಿದೆ. ಕೊಹ್ಲಿ ಹುಡುಗರು  ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿದ್ದಾರೆ.  ನಾಲ್ಕನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ  6  ರನ್ ಗಳಿಸಿದ್ದ  ಆಸ್ಟ್ರೇಲಿಯಾ ಅಂತಿಮ ದಿನ ಸೋಲು ತಪ್ಪಿಸಾಲು ಹೋರಾಡಬೇಕಿತ್ತು. ಆದರೆ ವರುಣನ ಕೃಪೆ ಪೈನ್ ಬಳಗದ ಮೇಲೆ ಇದ್ದರಿಂದ ಮತ್ತೊಂದು ಸೋಲು ಡ್ರಾಗೆ ಪರಿವರ್ತನೆಯಾಯಿತು.   ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ622 ರನ್ ಗಳಿಸಿ ಡಿಕ್ಲರ್ ಮಾಡಿಕೊಂಡಿತ್ತು. ಭಾರತದ ಪರ ಚೇತೇಶ್ವರ ಪೂಜಾರ 193 ರನ್, ರರಿಷಭ್ ಪಂತ್ ಅಜೇಯ159 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ತಂಡ ಕೇವಲ 300 ರನ್ ಗಳಿಗೆ ಅಲ್ ಔಟ್  ಆಗುವುದರೊಂದಿಗೆ…

Read More