ಐದನೇ ದಿನ ಮಳೆಗೆ ಆಹುತಿ: ಭಾರತಕ್ಕೆ ಸರಣಿ ಜಯದ ಕೀರ್ತಿ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ ಅಂತಿಮ ದಿನ ಮಳೆಗೆ ಬಲಿಯಾಗುವುದರೊಂದಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿದ್ದಿದೆ. ಇದರೊಂದಿಗೆ ಸರಣಿಯಲ್ಲಿ 2-1  ಮುನ್ನಡೆ ಸಾಧಿಸಿದ ಭಾರತ ಐತಿಹಾಸಿಕ ಸರಣಿ ಗೆದ್ದು ಬೀಗಿದೆ. ಕೊಹ್ಲಿ ಹುಡುಗರು  ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿದ್ದಾರೆ. 

ನಾಲ್ಕನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ  6  ರನ್ ಗಳಿಸಿದ್ದ  ಆಸ್ಟ್ರೇಲಿಯಾ ಅಂತಿಮ ದಿನ ಸೋಲು ತಪ್ಪಿಸಾಲು ಹೋರಾಡಬೇಕಿತ್ತು. ಆದರೆ ವರುಣನ ಕೃಪೆ ಪೈನ್ ಬಳಗದ ಮೇಲೆ ಇದ್ದರಿಂದ ಮತ್ತೊಂದು ಸೋಲು ಡ್ರಾಗೆ ಪರಿವರ್ತನೆಯಾಯಿತು.  

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ622 ರನ್ ಗಳಿಸಿ ಡಿಕ್ಲರ್ ಮಾಡಿಕೊಂಡಿತ್ತು. ಭಾರತದ ಪರ ಚೇತೇಶ್ವರ ಪೂಜಾರ 193 ರನ್, ರರಿಷಭ್ ಪಂತ್ ಅಜೇಯ159 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ತಂಡ ಕೇವಲ 300 ರನ್ ಗಳಿಗೆ ಅಲ್ ಔಟ್  ಆಗುವುದರೊಂದಿಗೆ ಫಾಲೋ ಆನ್ ಗೆ ಸಿಲುಕಿತ್ತು. ಆದರೆ ನಾಲ್ಕನೇ ಮತ್ತು ಐದನೇ ದಿನದ ಮಂದ ಬೆಳಕು ಮತ್ತು ಮಳೆ ಆಸ್ಟ್ರೇಲಿಯಾಗೆ ವರವಾಗಿ ಪರಿಣಮಿಸಿತು. 

Please follow and like us:

Related posts

Leave a Comment