ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮೇಲಿದ್ದ ಅಮಾನತ್ತಿನ ಶಿಕ್ಷೆಯನ್ನು ಇದೀಗ ಬಿಸಿಸಿಐ ಹಿಂಪಡೆದಿದೆ. ಬಾಲಿವುಡ್ ನಿರ್ದೇಶಕ, ನಟ ಮತ್ತು ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಇಬ್ಬರೂ ಆಟಗಾರರು ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಂದರ್ಶನದಲ್ಲಿ ಇಬ್ಬರೂ ಆಟಗಾರರು ಆಡಿದ ಮಾತುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಓಪನರ್ ಕೆ.ಎಲ್. ರಾಹುಲ್ ಅವರಿಗೆ ಬಿಸಿಸಿಐ ಕೊಂಚ ರಿಲೀಫ್ ನೀಡಿದೆ. ಬಿಸಿಸಿಐನ ನಿರ್ವಾಹಕ ಸಮಿತಿ ಇಬ್ಬರು ಆಟಗಾರರ ಮೇಲಿದ್ದ ಮಧ್ಯಂತರ ಅಮಾನತ್ತು ಆದೇಶವನ್ನು ತಕ್ಷಣಕ್ಕೆ ಆಚರಣೆಗೆ ಬರುವಂತೆ ಹಿಂಪಡೆದಿದೆ.
Read MoreDay: January 24, 2019
ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ನಾಲ್ವರ ದುರ್ಮರಣ
ನವದೆಹಲಿ(ಜ.24):ನಾಲ್ಕು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಹರ್ಯಾಣದ ಉಲ್ವಾಸ್ ಪ್ರದೇಶದಲ್ಲಿ ನಡೆದಿದೆ. ಇನ್ನು ನಾಲ್ವರು ಕಟ್ಟದ ಅವಶೇಷದಡಿ ಸಿಲುಕಿದ್ದಾರೆ. ಎಂಬ ಮಾಹಿತಿ ಇದೆ. ಇಂದು ಬೆಳಿಗ್ಗೆಯೇ ಕುಸಿದ ಕಟ್ಟಡ ಕುಸಿದಿದೆ. ಈ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣ ದಳದವರ ಮೂರು ತಂಡಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಅಂತಸ್ತು ಗುರುಗ್ರಾಮ ಸಮೀಪದ ಉಲ್ಲಾವಾಸ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟದ ನಿರ್ಮಾಣ ಹಂತದಲ್ಲಿತ್ತು. ಇಂದು ಬೆಳಗ್ಗೆ 5 ಗಂಟೆಗೆ ದಿಢೀರನೇ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ ಎನ್ನಲಾಗಿದೆ. ಇನ್ನೂ ಕಬ್ಬಿಣದ ಗ್ರಿಲ್ಸ್ ಹೆಚ್ಚಿರುವ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ತಿಳಿದು ಬಂದಿದೆ.
Read Moreಲಾಲ್‌ಬಾಗ್ ಫ್ಲವರ್ ಶೋ: ಮೆಟ್ರೋ ಪ್ರಯಾಣಿಕರಿಗೆ ಪೇಪರ್ ಟಿಕೆಟ್
ಬೆಂಗಳೂರ ನಗರದ ಲಾಲ್‌ಬಾಗ್ ಉದ್ಯಾನದಲ್ಲಿ ಫಲಪುಷ್ಪ ಪ್ರರ್ದಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಓಡಾಟಕ್ಕೆ ನಮ್ಮ ಮೆಟ್ರೋ ನಿಗಮವು ವಿಶೇಷ ವ್ಯವಸ್ಥೆ ಮಾಡಿದೆ. ಜ.25ರಿಂದ 26 ಮತ್ತು 27 ಭಾನುವಾರದಂದು ಪ್ರಯಾಣಿಕರ ಅನುಕೂಲಕ್ಕಾಗಿ ಪೇಪರ್ ಟಿಕೇಟ್ ಗಳನ್ನು ನೀಡಲು ವ್ಯವಸ್ಥೆ ಮಾಡಿದೆ. ಪೇಪರ್ ಟಿಕೆಟ್ ಬಳಕೆ ಹಾಗೂ ಉಪಯೋಗ ಇಂತಿದೆ: ನಿಗದಿತ 3 ದಿನಗಳಲ್ಲಿ ಬೆಳ್ಳಗೆ 10.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಈ ಟಿಕೆಟ್ ದರ 30 ರೂಪಾಯಿ ಮಾತ್ರ. ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬೆಳ್ಳಗೆ 8.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪೇಪರ್ ಟಿಕೆಟ್ ಲಭ್ಯವಿರುತ್ತದೆ. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8.00 ಗಂಟೆಯವರೆಗೆ ಪೇಪರ್ ಟೆಕೆಟ್…
Read Moreನಾಳೆ ಸೀತಾರಾಮ ಕಲ್ಯಾಣ ರಾಜ್ಯಾದ್ಯಂತ ರಿಲೀಸ್ : ಅಬ್ಬರಿಸ್ತಾನಾ ಜಾಗ್ವಾರ್..!
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಬರೋಬ್ಬರಿ 400 ಚಿತ್ರಮಂದಿರಗಳಲ್ಲಿ ತೆರೆಗೆಬರ್ತಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿ ನಿಖಿಲ್, ಇದೀಗ ಸೀತಾರಾಮ್ ಕಲ್ಯಾಣ ಚಿತ್ರ ಎರಡನೇಯದಾಗಿದೆ. ಈ ಚಿತ್ರ ಮೂರು ವರ್ಷದ ಹಿಂದೆ ತೆರೆಕಂಡಿದ್ದು, ಈಗ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ನಲ್ಲಿ ‘ಸೀತಾರಾಮ’ ಹೇಗಿರಲಿದ್ದಾನೆ ಎನ್ನುವ ಚಿಕ್ಕ ಝಲಕ್ ನಿರ್ದೇಶಕ ಎ. ಹರ್ಷ ಬಿಟ್ಟುಕೊಟ್ಟಿದ್ದಾರೆ. ಈ ಮೊದಲಿನ ಚಿತ್ರದಲ್ಲಿ ಪಕ್ಕಾ ಆ್ಯಕ್ಷನ್ ಮೆರೆದಿದ್ದ ನಿಖಿಲ್ ಈ ಬಾರಿ, ಮಾಸ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಹಿಡಿದು ಬಂದಿದ್ದಾರೆ. ಇಡೀ ಕುಟುಂಬವೇ ಕುಳಿತು ಸಿನಿಮಾ ನೋಡಬಹುದು, ಎಂದು ನಿಖಿಲ್ ಈ ಮೊದಲೇ ಹೇಳಿದ್ರು. ಚಿತ್ರದಲ್ಲಿ ನಿಖಿಲ್ಗೆ ಜೊತೆಯಾಗಿ…
Read Moreಕೈ ಪಕ್ಷ ಮುಗಿಸಲೆಂದೇ ಸಿದ್ದು ಪಕ್ಷಕ್ಕೆ ಎಂಟ್ರಿ : ಜನಾರ್ದನ ಪೂಜಾರಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸುವ ಉದ್ದೇಶದಿಂದಲೇ ಪಕ್ಷಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ. ಆಪರೇಷನ್ ಕಮಲದ ವಿಚಾರ ಪದೇ ಪದೆ ಸುಳಿದಾಡುತ್ತಿದ್ದರೂ, ಮೈತ್ರಿ ಸರ್ಕಾರಕ್ಕೆ ಯಾವುದೇ ಕುತ್ತು ಬಂದಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಭಾರೀ ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಅವರಿಂದ ಸರ್ಕಾರ ಉಳಿದುಕೊಂಡಿಲ್ಲ ಎಂದು ಜನಾರ್ದನ ಪೂಜಾರಿ ನೇರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ ಎಂಬುದು ಸುಳ್ಳು. ಸರ್ಕಾರ ಸುಗಮವಾಗಿ ಸಾಗುತ್ತಿದೆ ಎಂದರೆ ಅದಕ್ಕೆ ಕಾರಣ, ಜೆಡಿಎಸ್ನ ಹಿರಿಯ ನಾಯಕ ದೇವೇಗೌಡರು. ಅವರ ಪಾತ್ರ ಇಲ್ಲಿ ದೊಡ್ಡದು ಎಂದು ಹೇಳಿದ್ದಾರೆ.
Read Moreಸಿದ್ಧಗಂಗಾ ಶ್ರೀಗಳ ಬಗ್ಗೆ ಮಹಿಳೆಯಿಂದ ಹಗುರ ಮಾತು..!
ಸಿದ್ಧಗಂಗಾ ಶ್ರೀಗಳ ಬಗ್ಗೆ ಬೆಂಗಳೂರಿನ ಮಹಿಳೆಯೂಬ್ಬಳುಅವಹೇಳನಕಾರಿ ಟ್ವೀಟ್ ಮಾಡಿ ಹಗುರವಾದ ಮಾತನಾಡಿದ್ದಾಳೆ.ಆಕೆ ತನ್ನ ಟ್ವಿಟರ್ ಖಾತೆಯಲ್ಲಿ ಶ್ರೀಗಳು ನಿಧನರಾದ ದಿನ ರಜೆಘೋಷಣೆಯಾಗಿದ್ದಕ್ಕೆ, ಸೋ ಇದು ಅಫಿಷಿಯಲ್! ನಾಳೆ ಶಾಲೆ ,ಕಾಲೇಜುಗಳೆಲ್ಲಾ ರಜೆ, ಅದು ನಾನು ಹಿಂದೆಂದೂ ಹೆಸರೇ ಕೇಳಿರದಒಬ್ಬ ವ್ಯಕ್ತಿ ತೀರಿಕೊಂಡಿದ್ದಾರೆ ಎಂದು. ಇದೆಂತಹ ಹತಾಶ ಪರಿಸ್ಥಿತಿ.ನಾಳೆ ಇದ್ದ ಮೀಟಿಂಗ್ ಶೆಡ್ಯೂಲ್ ಎಲ್ಲಾ ಬದಲಾಗುತ್ತೆ ಎಂದು ಟ್ವೀಟ್ಮಾಡಿದ್ದಾರೆ. https://twitter.com/monikamanchanda/status/1087306691824230400 ಇನ್ನು ಆಕೆ ಇರುವುದು ಬೆಂಗಳೂರು ದಕ್ಷಿಣದಲ್ಲಿ. ಶ್ರೀಗಳ ಬಗ್ಗೆ ಆಕೆ ನಾನು ಹೆಸರು ಕೂಡಾ ಕೇಳದವರು ನಿಧನರಾದರೆ ರಜೆ ಕೊಡಬೇಕಾ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ಧಗಂಗಾ ಶ್ರೀಗಳು ಅದೆಷ್ಟೋ ಲಕ್ಷ ಜನರ ಜೀವನ ಕಟ್ಟಿ ಕೊಟ್ಟ ಮಹಾತ್ಮರು ಎಂದೆನಿಸಿಕೊಂಡಿದ್ದಾರೆ. ಈ ಬಗ್ಗೆ ತಿಳಿಯುವ ಸೌಜನ್ಯ ಕೂಡ ಇಲ್ಲದೆ ಆಕೆ ಮಾತನಾಡಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
Read Moreರಾಯರ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್..!
ರಾಯಚೂರು : ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಚಿತ್ರ ‘ನಟಸಾರ್ವಭೌಮ’ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಜೊತೆ ಮಠಕ್ಕೆ ಆಗಮಿಸಿದ್ದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳ ದಿನಗಳಿಂದ ಮಂತ್ರಾಲಯಕ್ಕೆ ಬರಲು ಆಗಿರಲಿಲ್ಲ. ಈಗ ಫೆಬ್ರವರಿ 7ರಂದು ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಯರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ತಿಳಿಸಿದ್ರು. ನಟಸಾರ್ವಭೌಮ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಡಿಂಪಲ್ ಬೆಡಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸಿದ್ದಾರೆ.
Read Moreಅಂಬಿ ಪುತ್ರ ಅಭಿಷೇಕ್ ನಿಂತ್ರೂ, ಅವರ ಪರ ಪ್ರಚಾರ ಮಾಡ್ತಿನಿ : ನಿಖಿಲ್ ಕುಮಾರಸ್ವಾಮಿ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹಿರಿಯ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ರೆ ನಾನು ಅವರ ಪರವಾಗಿ ಪ್ರಚಾರ ಮಾಡ್ತಿನಿ ಅಂತ ನಿಖಿಲ್ ಕುಮಾರ್ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್, ಈಗಾಗಲೇ ನಾನು ರಾಜಕೀಯದಲ್ಲಿ ಸಕ್ರಿಯೆವಾಗಿದ್ದೇನೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೂಡ ಮಾಡಿದ್ದೇನೆ. ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೆ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್‍ನಿಂದ ಅಭಿಷೇಕ್ ಸ್ಪರ್ಧೆ ಮಾಡಿದ್ರೂ ನಾನು ಅಭಿಷೇಕ್ ಪರವಾಗಿಯೇ ಪ್ರಚಾರ ಮಾಡುತ್ತೇನೆ ಅಂತಾ ಹೇಳಿದ್ದಾರೆ. ಇನ್ನೂ ಈ ವಿಷಯವಾಗಿ ಅಭಿ ಮತ್ತು ನಾನು ಫೋನ್ ನಲ್ಲಿ ಮಾತನಾಡಿದ್ದೇವೆ. ಚುನಾವಣೆಗೆ ಸ್ಪರ್ಧೆ ಮಾಡ್ತೀರಾ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರ್, ಪಕ್ಷದ ಮುಖಂಡರು ಮತ್ತು ಹಿರಿಯರು ಯಾವ ನಿರ್ಧಾರ…
Read Moreಮರಿ ಟೈಗರ್ ಇನ್ಮುಂದೆ ಪೈಟರ್ ಆಗಿ ರೆಡಿ..!
ಸ್ಯಾಂಡಲ್ ವುಡ್ ನಲ್ಲಿ ಮರಿ ಟೈಗರ್ ಕೂಡ ಯಂಗ್ ಅಂಡ್ ಎನರ್ಜಿ ಹೀರೋ ಆಗಿ ಮಿಂಚುತ್ತಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಸಿನಿಮಾಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದಾ ಮಾಸ್ ಅಂಡ್ ಕ್ಲಾಸ್ ಪಾತ್ರಗಳಲ್ಲಿ ಮಿಂಚೋ ಇವರು, ಮತ್ತೆ ಫೈಟರ್ ಆಗಿ ತೆರೆ ಮೇಲೆ ಬರೋಕೆ ರೆಡಿಯಾಗ್ತಿದ್ದಾರೆ. ನವಗ್ರಹ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಧಮಾಕ ಸೃಷ್ಟಿಸಿರುವ ವಿನೋದ್ ಪ್ರಭಾಕರ್ ಇದೀಗ ನೂತನ್ ಉಮೇಶ್ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರದ ಫೈಟ್ ಸೀನ್ ಸೇರಿದಂತೆ ಚಿತ್ರದ ಚಿತ್ರೀಕರಣ ಬಹುತೇಕ ಕಂಪ್ಲಿಟ್ ಆಗಿದ್ದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈಗಾಗಲೇ ಪೋಸ್ಟರ್ನಿಂದ ಭರ್ಜರಿಯಾಗಿ ಕಂಡಿದ್ದ ಮರಿಟೈಗರ್ ಫೈಟರ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Read More