ಬೆಂಗಳೂರ ನಗರದ ಲಾಲ್‌ಬಾಗ್ ಉದ್ಯಾನದಲ್ಲಿ ಫಲಪುಷ್ಪ ಪ್ರರ್ದಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಓಡಾಟಕ್ಕೆ ನಮ್ಮ ಮೆಟ್ರೋ ನಿಗಮವು ವಿಶೇಷ ವ್ಯವಸ್ಥೆ ಮಾಡಿದೆ.
ಜ.25ರಿಂದ 26 ಮತ್ತು 27 ಭಾನುವಾರದಂದು ಪ್ರಯಾಣಿಕರ ಅನುಕೂಲಕ್ಕಾಗಿ ಪೇಪರ್ ಟಿಕೇಟ್ ಗಳನ್ನು ನೀಡಲು ವ್ಯವಸ್ಥೆ ಮಾಡಿದೆ.

ಪೇಪರ್ ಟಿಕೆಟ್ ಬಳಕೆ ಹಾಗೂ ಉಪಯೋಗ ಇಂತಿದೆ:
ನಿಗದಿತ 3 ದಿನಗಳಲ್ಲಿ ಬೆಳ್ಳಗೆ 10.00 ಗಂಟೆಯಿಂದ ರಾತ್ರಿ 8.00
ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ
ನಿಲ್ದಾಣಕ್ಕೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಈ ಟಿಕೆಟ್ ದರ 30
ರೂಪಾಯಿ ಮಾತ್ರ.
ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಬೆಳ್ಳಗೆ 8.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಎಲ್ಲಾ ಮೆಟ್ರೋ
ನಿಲ್ದಾಣಗಳಲ್ಲಿ ಪೇಪರ್ ಟಿಕೆಟ್ ಲಭ್ಯವಿರುತ್ತದೆ.
ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8.00 ಗಂಟೆಯವರೆಗೆ ಪೇಪರ್
ಟೆಕೆಟ್ ಖರೀದಿಸಲು ಲಭ್ಯವಿರುತ್ತದೆ.
ಮೆಟ್ರೋ ರೈಲು ಪ್ರಯಾಣಿಕರು ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ
ಪ್ರವೇಶಿಸಲು ಪೇಪರ್ ಟಿಕೆಟ್ ತೋರಿಸಿ ನಂತರ ತಾವು ತಲುಪುವ
ನಿಲ್ದಾಣದಲ್ಲಿ ಟಿಕೆಟ್ ಹಿಂದಿರುಗಿಸಬೇಕಾಗುತ್ತದೆ.
ಇತರೆ ಮೆಟ್ರೋ ನಿಲ್ದಾಣಗಳಿಂದ ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ
ಪ್ರಯಾಣಿಸಲು ಟೋಕನ್ ಮತ್ತು ಸ್ಮಾರ್ಟ್ ಕಾರ್ಡ್‌ಗಳ ದರವು ನಿತ್ಯ
ಬಳಿಕೆಯಲ್ಲಿರುವ ದರವಾಗಿರುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.