ಕಲಬುರಗಿ : ಕೇಂದ್ರ ಸರ್ಕಾರ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದೇವು. ಈ ಹಿಂದೆ ಕೂಡ ಕರ್ನಾಟಕ ಸರ್ಕಾರದಿಂದ, ಸಂಸದರಿಂದ ಮನವಿ ಮಾಡಿದ್ದೇವು. ಆದರೆ ಬಿಜೆಪಿ ಸರ್ಕಾರ ಯಾವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ. ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಪುರಸ್ಕಾರ ದೊರೆತಿದೆ ಇದು ನನಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ. ಇನ್ನೂ ಪ್ರಿಯಾಂಕಾ ಗಾಂಧಿ ಅವರು ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ರಾಜಕೀಯ ಪ್ರವೇಶ ಮಾಡಿದ್ದು, ಬಿಜೆಪಿಗೆ ಭಯ ಶುರುವಾಗಿದೆ. ಜನ ಬಿಜೆಪಿಯಿಂದ ಹಿಂದೆ ಸರಿಯುತ್ತಿದ್ದಾರೆ. ಮಾರ್ಕೆಟಿಂಗ್ ಮಾಡಿ ಮೋದಿಯನ್ನು ಗದ್ದುಗೆ ಮೇಲೆ ಕೂರಿಸಿದ್ದರು. ಇದೀಗ ಅವರ ವರ್ಚಸ್ಸು ಕಡಿಮೆಯಾಗಿದೆ. ಪ್ರಿಯಾಂಕಾ ರಾಜಕೀಯಕ್ಕೆ ಬಂದಿದ್ದರಿಂದ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ತಿಳಿಸಿದ್ರು..
Read MoreDay: January 26, 2019
ಕಂಪ್ಲಿ ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ : ತಾಳ್ಮೆ ಇರಲಿ – ಸಚಿವೆ ಜಯಮಾಲಾ..!
ಶಾಸಕ ಗಣೇಶ್ ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಹಿಂದೆ ಗಲಾಟೆಯಾದ ಸಂಧರ್ಭದಲ್ಲಿ ಈಗಲ್ಟನ್ ರೆಸಾರ್ಟ್ನಲ್ಲಿ ನಾನು ಇರಲಿಲ್ಲ. ನನ್ನ ಏನೂ ಕೇಳ್ಬೇಡಿ. ನಿಮಗೇ ಆತುರ ಅಷ್ಟೇ ಎಂದು ಮಾದ್ಯಮದವರ ವಿರುದ್ದ ಕಿಡಿ ಕಾರಿದರು. ಉಡುಪಿ: ಕಂಪ್ಲಿ ಶಾಸಕ ಗಣೇಶ್ ಸಿಕ್ಕೆ ಸಿಗುತ್ತಾನೆ ತಾಳ್ಮೆ ಇರಲಿ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರ ಮೇಲೆ ಕೇಸ್ ದಾಖಲಾಗಿತ್ತು, ಈ ಮಧ್ಯೆ, ಶಾಸಕ ಗಣೇಶ್ ನಾಪತ್ತೆಯಾಗಿದ್ದಾರೆ. ಹಿಗಾಗಿ ಕಂಪ್ಲಿ ಗಣೇಶ್ ಎಲ್ಲೂ ಹೋಗಲ್ಲ ಸಿಕ್ಕೆ ಸಿಗುತ್ತಾರೆ ಎಂದರು.
Read Moreಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡದಿದ್ದರೆ ಉಗ್ರ ಹೋರಾಟ ಮಾಡ್ತೀವಿ: ಶಾಸಕ ಯತ್ನಾಳ್
ವಿಜಯಪುರ: ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳು ವಿಶ್ವದಲ್ಲೇ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ಮಾಡಿರುವ ಕಾಯಕಕ್ಕೆ ಭಾರತರತ್ನ ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಎಲ್ಲೆಡೆಯಿಂದ ಜನರು ಆಗ್ರಹಿಸುತ್ತಿದ್ದಾರೆ. ಭಾರತ ರತ್ನ ನೀಡದಿದ್ದರೂ ಶ್ರೇಷ್ಠ ಸಂತರಾಗಿ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅವರ ಹೆಸರನ್ನು ಕೇಂದ್ರ ಸರ್ಕಾರ ಈ ಬಾರಿ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕಾಗಿತ್ತು. ಶ್ರೀಗಳಿಗೆ ಭಾರತ ರತ್ನ ಕೊಡಿಸುವಲ್ಲಿ ಲೋಕಸಭಾ ಹಾಗು ರಾಜ್ಯ ಸಭಾ ಸದಸ್ಯರು ಪ್ರಯತ್ನ ಮಾಡಬೇಕು. ಅನ್ಯಾಯವಾದಾಗ ಪ್ರತಿಭಟನೆ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಹಿಂದೆ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕಾದರೆ ಆಂಧ್ರಪ್ರದೇಶದ ಸರ್ಕಾರ ವಿರೋಧ ಮಾಡಿತ್ತು. ಆಗ ವಾಜಪೇಯಿ ಪ್ರಧಾನಿಯಾಗಿದ್ದಾಗ ನಾನು ಕೇಂದ್ರ ಸಚಿವನಿದ್ದೆ. ಜಲಾಶಯದ…
Read Moreಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕು:ವಾಟಾಳ್ ನಾಗರಾಜ್
ಬೆಂಗಳೂರು: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡುವಂತೆ ಆಗ್ರಹಿಸಿ ನಾಳೆ ಕೇಂದ್ರ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಕನ್ನಡ ಚಳವಳಿ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಸಿದ್ದರಾಮಯ್ಯ ಒಂದು ಜನಾಂಗದ ವ್ಯಕ್ತಿ ಆಗಬಾರದು ಒಂದು ರಾಜ್ಯದ ವ್ಯಕ್ತಿಯಾಗಬೇಕು. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂಬ ನಂಬಿಕೆ ನನಗೆ ಇತ್ತು ಎಂದು ತಿಳಿಸಿದರು ಇನ್ನೂ ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ನಿರ್ಮಾಣ ಮಾಡಿ ಕೇಂದ್ರ ಸರ್ಕಾರ ಅದನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿದರು.
Read Moreಅಪ್ಪು ಅಭಿನಯದ ನಟಸಾರ್ವಭೌಮ ಟ್ರೇಲರ್ ಸಖತ್ ಹಿಟ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ನಟಸಾರ್ವಭೌಮ ಟ್ರೇಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಖತ್ ಹಿಟ್ ಆಗಿದೆ. ಟ್ರೇಲರ್ ಬಿಡುಗಡೆಯಾದ ಕೇವಲ 15 ನಿಮಿಷದಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂ ಕಂಡಿತ್ತು. ಅಲ್ಲದೇ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. 2 ಗಂಟೆಗಳಲ್ಲಿ ಟ್ರೇಲರ್ ಬರೋಬ್ಬರಿ ನಾಲ್ಕೂವರೆ ಲಕ್ಷಗಳಿಗಿಂತ ಹೆಚ್ಚು ವ್ಯೂ ಕಂಡಿದ್ದು, ಟ್ರೇಲರ್ ಸ್ಯಾಂಡಲ್ ವುಡ್‍ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸ ಮೂಡಿಸಿದೆ. ನಂತರ 9 ಗಂಟೆಯಲ್ಲಿ 9.07 ಲಕ್ಷ ವ್ಯೂ ಕಂಡಿದೆ. ಟ್ರೇಲರ್ ನೋಡಿದ ಸಾಕಷ್ಟು ಜನರು ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿನ್ನೆಲೆ ಸಂಗೀತ ಹಾಗೂ ಅಪ್ಪುವಿನ ಲುಕ್ ಸಖತ್ ಭಿನ್ನವಾಗಿ ಕಂಡಿದೆ. ಟ್ರೇಲರ್ ಆರಂಭದಲ್ಲೇ ಚಿತ್ರ ಹಾರರ್ ಥ್ರಿಲ್ಲರ್ ಎನ್ನುವುದನ್ನು ಖಚಿತ ಪಡಿಸುತ್ತದೆ. ಅಲ್ಲದೇ ಪುನೀತ್ ಆಕ್ಷನ್ ದೃಶ್ಯ, ಡಾನ್ಸ್ ನೋಡುಗರಿಗೆ ಕಿಕ್…
Read Moreಶ್ರೀ ಶಿವಕುಮಾರ ಸ್ವಾಮಿ ಕಲ್ಪತರು ಬೆಳಕು
see video https://www.youtube.com/watch?v=wrknektov7I
Read Moreತನ್ನ ಅಭಿಮಾನಿಯನ್ನು ನಿಂದಿಸಿದ್ದಕ್ಕೆ ಸಿಡಿದೆದ್ದ ರಶ್ಮಿಕಾ
There’s a limit for everything-Yes commenting is ur right but do it on me and il take it..but when it comes to my fan's u don't have anything to speak to them that way! This message is not only for this guy but to all out there who speak negatively of my fans! https://t.co/tbN3WSwc53 — Rashmika Mandanna (@iamRashmika) January 25, 2019 ಬೆಂಗಳೂರು: ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕೋಪಗೊಂಡು ವ್ಯಕಿಯೊಬ್ಬನನ್ನ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಅಭಿಮಾನಿಯೊಬ್ಬರು ತಮ್ಮ ಫ್ಯಾನ್ ಪೇಜ್‍ನಲ್ಲಿ, “ರಶ್ಮಿಕಾ ಮಂದಣ್ಣ ಯೂಟ್ಯೂಬ್‍ನ ರಾಣಿ. ಅವರು ನಟಿಸಿದ ಕನ್ನಡ ಚಿತ್ರದ ಎರಡು ಹಾಡು 5…
Read Moreಗಣರಾಜ್ಯೋತ್ಸವಕ್ಕೆ ಟೀಂ ಇಂಡಿಯಾ ಗಿಫ್ಟ್ – ಕಿವೀಸ್ ವಿರುದ್ಧ ಭರ್ಜರಿ ಗೆಲುವು
ಮೌಂಟ್ ಮೌಂಗಾನೆ : ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿ ಜಯ ಪಡೆದಿದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದು 90 ರನ್ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದೆ. ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಮೊತ್ತವನ್ನು ನೀಡಿ ಕೇವಲ 234 ರನ್ ಗಳಿಗೆ ಕಿವೀಸ್ ತಂಡವನ್ನು ಆಲೌಟ್ ಮಾಡುವ ಮೂಲಕ 5 ಪಂದ್ಯಗಳ ಟೂರ್ನಿಯಲ್ಲಿ 2-0 ಮುನ್ನಡೆ ಪಡೆದಿದ್ದಾರೆ. ಇನ್ನೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಂ ಇಂಡಿಯಾ ನಾಯಕ ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಆರಂಭಿಕರು ಬ್ಯಾಟ್ ಬೀಸಿದರು. ಆರಂಭಿಕರಾದ ರೋಹಿತ್ ಶರ್ಮಾ 87 (96 ಎಸೆತ, 9 ಬೌಂಡರಿ, 3 ಸಿಕ್ಸರ್) ರನ್ ಸಿಡಿಸಿ ವೃತ್ತಿ ಜೀವನದ 38ನೇ ಅರ್ಧ ಶತಕ ಪೂರೈಸಿದರೆ,…
Read Moreಗಣರಾಜ್ಯೋತ್ಸವಕ್ಕೆಂದು ತೆರಳುತ್ತಿದ್ದ ಮಕ್ಕಳ ಮೇಲೆ ಹರಿದ ಕಾರ್..!
ಧಾರವಾಡ: ಗಣರಾಜ್ಯೋತ್ಸವಕ್ಕೆಂದು ತೆರಳುತ್ತಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಕಾರ್ ಹರಿದ ಘಟನೆ ಧಾರವಾಡದ ವಾಟರ್ ಬೋರ್ಡ್ ಬಳಿ ನಡೆದಿದೆ. ಶಿಕ್ಷಕರು ಹಾಗೂ ಮಕ್ಕಳು ಗಣರಾಜ್ಯೋತ್ಸವಕ್ಕೆಂದು ಮೈದಾನಕ್ಕೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಕಾರು ಚಾಲಕನೊಬ್ಬ ವೇಗವಾಗಿ ಬಂದು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪ್ರೀನಿಪಾಲ್ ಸುನಿತಾ ಕಡಪಟ್ಟಿ, ವಿದ್ಯಾರ್ಥಿಗಳಾದ ಪೂಜಾ ನಿಡಗುಂದಿ, ಚೈತ್ರಾ ಕೊಪ್ಪದ, ಅನ್ನಪೂರ್ಣ ಚಲವಾದಿ ಗಾಯಗೊಂಡವರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಒಟ್ಟು ಆರು ವಿದ್ಯಾರ್ಥಿಗಳ ಮೇಲೆ ಕಾರ್ ಹರಿದಿದ್ದು, ಇದರಲ್ಲಿ ನಾಲ್ವರಿಗೆ ಗಂಭಿರ ಗಾಯವಾಗಿದ್ದು, ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾಗಿದೆ. ಗಾಯಗೊಂಡ ವಿದ್ಯಾರ್ಥಿಗಳೆಲ್ಲರೂ ಧಾರವಾಡದ ಕೆಇಬೊರ್ಡ್ ಕಾಲೇಜಿನವರು ಎಂದು ಹೇಳಲಾಗಿದೆ.
Read More70ನೇ ಗಣರಾಜ್ಯೋತ್ಸವ- ದೆಹಲಿಯಲ್ಲಿ ಮೊಳಗಿತು ಕನ್ನಡದ ಕಹಳೆ
70 ನೇ ಗಣರಾಜೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕದಿಂದ ಈ ಬಾರಿ ಗಾಂಧೀಜಿ ಹಾಗೂ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೇ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಎಲ್ಲರ ಗಮನಸೆಳೆಯಿತು ಈ ಹಿನ್ನೆಲೆಯಲ್ಲಿ ದೆಹಲಿಯ ರಾಜ್‍ಪಥದಲ್ಲಿ ಕನ್ನಡದ ಕಹಳೆ ಮೊಳಗಿದಂತಾಯಿತು. ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಯಿತು. ಸ್ತಬ್ಧ ಚಿತ್ರಗಳಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಹಾಗೂ ಕರ್ನಾಟಕದಿಂದ ಈ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶನೆ ಮಾಡಲಾಯಿತು.
Read More