ಬೆಂಗಳೂರು: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡುವಂತೆ ಆಗ್ರಹಿಸಿ ನಾಳೆ ಕೇಂದ್ರ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಕನ್ನಡ ಚಳವಳಿ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಸಿದ್ದರಾಮಯ್ಯ ಒಂದು
ಜನಾಂಗದ ವ್ಯಕ್ತಿ ಆಗಬಾರದು ಒಂದು ರಾಜ್ಯದ ವ್ಯಕ್ತಿಯಾಗಬೇಕು. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂಬ ನಂಬಿಕೆ ನನಗೆ ಇತ್ತು ಎಂದು ತಿಳಿಸಿದರು ಇನ್ನೂ ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ನಿರ್ಮಾಣ ಮಾಡಿ ಕೇಂದ್ರ ಸರ್ಕಾರ ಅದನ್ನು ರಾಷ್ಟ್ರೀಯ ಸ್ಮಾರಕ
ಮಾಡಬೇಕು ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿದರು.
