ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದ ಹಿನ್ನಲೆ: ಕೇಂದ್ರದ ವಿರುದ್ಧ ಗರಂ ಆದ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಕೇಂದ್ರ ಸರ್ಕಾರ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದೇವು. ಈ ಹಿಂದೆ ಕೂಡ ಕರ್ನಾಟಕ ಸರ್ಕಾರದಿಂದ, ಸಂಸದರಿಂದ ಮನವಿ ಮಾಡಿದ್ದೇವು. ಆದರೆ ಬಿಜೆಪಿ ಸರ್ಕಾರ ಯಾವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ. ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಪುರಸ್ಕಾರ ದೊರೆತಿದೆ ಇದು ನನಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಇನ್ನೂ ಪ್ರಿಯಾಂಕಾ ಗಾಂಧಿ ಅವರು ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ
ಅವರು ರಾಜಕೀಯ ಪ್ರವೇಶ ಮಾಡಿದ್ದು, ಬಿಜೆಪಿಗೆ ಭಯ ಶುರುವಾಗಿದೆ. ಜನ ಬಿಜೆಪಿಯಿಂದ ಹಿಂದೆ
ಸರಿಯುತ್ತಿದ್ದಾರೆ. ಮಾರ್ಕೆಟಿಂಗ್ ಮಾಡಿ ಮೋದಿಯನ್ನು ಗದ್ದುಗೆ ಮೇಲೆ ಕೂರಿಸಿದ್ದರು. ಇದೀಗ ಅವರ
ವರ್ಚಸ್ಸು ಕಡಿಮೆಯಾಗಿದೆ. ಪ್ರಿಯಾಂಕಾ ರಾಜಕೀಯಕ್ಕೆ ಬಂದಿದ್ದರಿಂದ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ತಿಳಿಸಿದ್ರು..

Please follow and like us:

Related posts

Leave a Comment