ಆಧುನಿಕ ರೈತನಿಗೆ ಬಿಗ್ ಬಾಸ್ ಸೀಸನ್-6ರ ಕಿರೀಟ

ಬೆಂಗಳೂರು: ಭಾನುವಾರದಂದು ಬಿಗ್ ಬಾಸ್ ಸೀಸನ್-6 ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಕುಮಾರನನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ ವಿನ್ನರ್ ಶಶಿಕುಮಾರ್ 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿಯನ್ನ ತಮ್ಮದಾಗಿಸಿಕೊಂಡರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಬಳಿಕ ಮಾತನಾಡಿದ, ಶಶಿ ಇದು ನನ್ನೊಬ್ಬನ ಗೆಲುವಲ್ಲ, ಇದು ಎಲ್ಲರ ಗೆಲುವು ಎಂದರು. ನನಗೆ ಬಂದ ಬಹುಮಾನದ ಹಣವನ್ನು ರೈತಾಪಿ ವರ್ಗದ ಕಲ್ಯಾಣಕ್ಕೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮತ್ತು ಬೇಸಾಯದತ್ತ ಯುವಕರನ್ನು ಸೆಳೆಯುವುದಕ್ಕೆ ಬಳಸವುದಾಗಿ
ಬಿಗ್‍ಬಾಸ್ ವಿನ್ನರ್ ಘೋಷಿಸಿದರು. ರನ್ನರ್ ಅಪ್ ನವೀನ್ ಸಜ್ಜು ಅವರ ಕನಸನ್ನು ನನಸು ಮಾಡೋದಾಗಿ ಕಿಚ್ಚ ಸುದೀಪ್ ಘೋಷಿಸಿದರು. ನನ್ನ ಕಡೆಯಿಂದ ರನ್ನರ್ ಅಪ್‍ಗೆ ಸ್ಪೆಷಲ್ ಗಿಫ್ಟ್ ಇರೋದಾಗಿ ನಟ ಕಿಚ್ಚ ಸುದೀಪ್ ಭರವಸೆ ನೀಡಿದ್ರು.

Please follow and like us:

Related posts

Leave a Comment