ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್ ಆರಿಸಿ, ಮೊಬೈಲ್ ಟಾರ್ಚ್ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು ಎಂದು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ದೇಶದಲ್ಲಿ ಯಾರೂ ಕೂಡ ಒಂಟಿ ಅಲ್ಲ, ದೇಶದ 130 ಕೋಟಿ ಜನರು ಒಂದೇ ಸಂಕಲ್ಪ ತೊಟ್ಟಿದ್ದಾರೆ, ಕೊರೊನಾವನ್ನು ಮಟ್ಟ ಹಾಕಲು ಸಾಮಾಜಿಕ ಅಂತರವೇ ರಾಮಬಾಣ. ಮೊಂಬತ್ತಿ, ದೀಪ ಬೆಳಗುವುದರಿಂದ ಮನಸ್ಸು ಜಾಗೃತವಾಗುತ್ತದೆ. ಹೋರಾಡಲು ಶಕ್ತಿ ಬರುತ್ತದೆ,ದೇಶದಲ್ಲಿ ಎಲ್ಲರೂ ಒಂದುಗೂಡಿದರೆ ಕೊರೊನಾ ವಿರುದ್ಧ ಹೋರಾಟ ಸಾಧ್ಯ, ಜನತಾ ರೂಪದಲ್ಲಿ ಮಹಾ ಶಕ್ತಿಯ ವಿರಾಟ ರೂಪದ ಸಾಕ್ಷಾತ್ಕಾರವಾಗಬೇಕಿದೆ, ಕೊರೊನಾ ಎಂಬ ಅಂಧಕಾರದಿಂದ ಪ್ರಕಾಶದೆಡೆಗೆ ಹೋಗಬೇಕು, ನಾಲ್ಕೂ ದಿಕ್ಕಿನಲ್ಲೂ ನಮ್ಮ ಶಕ್ತಿಯನ್ನು ತೋರಿಸಬೇಕಿದೆ. ನೀವು ಮನೆಯಲ್ಲಿ ಲೈಟ್ ಆಫ್ ಮಾಡಿ, ಮನೆಯ ಹೊರಗಡೆ ಬಾಲ್ಕನಿಯಲ್ಲಿ, ಮನೆಯ ಬಾಗಿಲಿನಲ್ಲಿ ಎಲ್ಲೇ ನಿಂತು, ಮೊಂಬತ್ತಿ, ಮೊಬೈಲ್, ಲೈಟ್, ದೀಪವನ್ನು ಹಚ್ಚಬಹುದು. ಆದರೆ ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಎನ್ನುವ ಲಕ್ಷ್ಮಣ ರೇಖೆಯನ್ನು ಮಾತ್ರ ದಾಟಬೇಡಿ. ಎಲ್ಲರೂ ಒಂದೇ ಕಡೆ ನಿಲ್ಲುವುದು ಬೇಡ
ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ

Please follow and like us: