ಲಿ0ಗಸೂಗೂರು: ರಾಜ್ಯದಲ್ಲಿ ಕೊರೊನಾ ಎಫೆಕ್ಟ್ನಿಂದ ಕಲ್ಲಂಗಡಿ ಬೆಳೆದ ರೈತನಿಗೆ ಸಂಕಷ್ಟ ಎದುರಾಗಿದ್ದು,ಅನೇಕ ಕೂಲಿ ಕಾರ್ಮಿಕರು ಕೂಡ ಬೀದಿಪಾಲಾಗುತ್ತಿದ್ದಾರೆ..
ಅಂದ ಹಾಗೇ ಸಾವಿರಾರು ರೂಪಾಯಿ ಖರ್ಚು ಮಾಡಿ ವರ್ಷಪೂರ್ತಿ ದುಡಿದು ಬೆಳೆದ ಬೆಳಗೆ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ.
ಅದರಲ್ಲೂ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟದ ರೈತ ಲಕ್ಷ್ಮೀನಾರಾಯಣ ಕಿಲ್ಲೆದಾರ ತನ್ನ ೭ ಎಕರೆ ಜಮೀನಿನಲ್ಲಿ ೨ ಎಕರೆಯಷ್ಟು ಕಲ್ಲಂಗಡಿ ಬೆಳೆದಿದ್ದಾನೆ..
ಆದರೆ ಉತ್ತಮವಾಗಿ ಬೆಳೆದ ಕಲ್ಲಂಗಡಿಯನ್ನು ಈಗ ಕೊಳ್ಳುವವರು ಇಲ್ಲದೇ ಕೊಳೆತು ಹೋಗುತ್ತಿದೆಯಲ್ಲದೆ, ಪಟ್ಟಣಕ್ಕೆ ಹೋಗಿ ವಿತರಣೆ ಮಾಡುವುದಕ್ಕೂ ಆಗದೆ ರೈತ ಲಕ್ಷ್ಮೀನಾರಾಯಣ ನೊಂದು ಹೋಗಿದ್ದಾರೆ..
ಒಟ್ಟಾರೆ ಕರೊನಾ ಎಫೆಕ್ಟ್ ರೈತರನ್ನು ಬಿಡದೇ ಕಾಡುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಮಾರಾಟವಾಗದೇ ರೈತರು ಕಂಗಲಾಗುವAತಾಗಿದೆ.