ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬೆಂಗಳೂರು ಪೊಲೀಸರ ವಿರುದ್ಧ ಗರಂ ಆದ ಘಟನೆ ಇಂದು ನಡೆದಿದೆ.
ಬೆಳಿಗ್ಗೆ ಬೆಂಗಳೂರಿನ ಸಿಂಗೇನಹಳ್ಳಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರ ಜೊತೆ ಸಚಿವ ಸೋಮಶೇಖರ್ ಚರ್ಚೆ ನಡೆಸಿದರು.
ಈ ವೇಳೆ ಗಾಡಿಗಳನ್ನು ಡೈವರ್ಟ್ ಮಾಡೋ ನೆಪದಲ್ಲಿ ಪೊಲೀಸರು ಸುಖಾಸುಮ್ಮನೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆಂದು ಹಲವು ರೈತರು ಸೋಮಶೇಖರ್ ಬಳಿ ಅಳಲು ತೋಡಿಕೊಂಡರು.
ತಕ್ಷಣ ಸ್ಥಳದಲ್ಲೇ ಡಿಜಿಪಿ & ಐಜಿ ಪ್ರವೀಣ್ ಸೂದ್‌ಗೆ ಕರೆ ಮಾಡಿದ ಸಚಿವ ಸೋಮಶೇಖರ್`ರೈತರಿಗೆ ಪೊಲೀಸರು ತೊಂದರೇ ಕೊಡ್ತಿದ್ದಾರಂತೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗರಂ ಆದರು. ಬಳಿಕ ರೈತರಿಗೆ ಸಮಾಧಾನ ಹೇಳಿ ಮುಂದೆ ಇಂತಹ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.
ಬೆಂಗಳೂರು ಪೊಲೀಸರ ವಿರುದ್ಧ ಸಹಕಾರ ಸಚಿವ ಗರಂ

Please follow and like us: