ಬಾಗಲಕೋಟೆ

ಹಾಲಿಗಾಗಿ ಇಂಥಾ ರಿಸ್ಕ್ ತಗೊಳ್ತಾರಾ.. ಪ.ಪಂಗೆ ಬುದ್ಧಿ ಬೇಡವಾ!?

Published

on

ಬಾಗಲಕೋಟೆ:ಜನ ಗುಂಪು ಗುಂಪಾಗಿ ಹಾಲು ತರಲು ಮನೆಯಿಂದ ಹೊರ ಬಂದು ಗುಂಪಾಗಿ ಸೇರಿದ್ರೇ ಕೊರೊನಾ ವೈರಸ್ ಹರಿಡೀತೆಂಬ ಭೀತಿಯಿದೆ. ಅದೇ ಕಾರಣಕ್ಕೆ ಲಾಕ್‌ಡೌನ್ ಮಾಡಲಾಗಿದ್ರೂ ಅದರ ಪರಿವೇ ಇಲ್ಲದೇ ಜನ ನೂರಾರು ಸಂಖ್ಯೆಯಲ್ಲಿ ಉಚಿತ ಹಾಲು ಪಡೆಯೋದಕ್ಕೆ ಗುಂಪು ಗುಂಪಾಗಿ ಮುಗಿ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಕೆರೂರು ಪಟ್ಟಣದ ಪತ್ತಾರಕಟ್ಟಿ ಬಡಾವಣೆಯಲ್ಲಿ ಪಟ್ಟಣ ಪಂಚಾಯತ್ ಉಚಿತವಾಗಿ ಹಾಲು ವಿತರಣೆ ಮಾಡ್ತಿದೆ.ಆದರೆ ಕೆರೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಮಾಡಿದ ಎಡವಟ್ಟಿನಿಂದಾಗಿ ಸಾಮಾಜಿಕ ಅಂತರ ಕಾಪಾಡದ ಜನರು ಹಾಲು ಪ್ಯಾಕೆಟ್‌ಗಾಗಿ ಗುಂಪು ಗುಂಪಾಗಿ ಜಮಾಯಿಸಿ ನೂಕು ನುಗ್ಗಲು ನಡೆಸಿದರು.
ಇನ್ನು ಮನೆ ಮನೆಗೆ ತೆರಳಿ ಹಾಲು ಪಾಕೆಟ್ ವಿತರಣೆ ಮಾಡದೇ ಒಂದೇ ಜಾಗದಲ್ಲಿ ವಿತರಣೆಗೆ ಮುಂದಾದ ಪರಿಣಾಮ ಜನ ನೂರಾರು ಸಂಖ್ಯೆಯಲ್ಲಿ ಮುಗಿಬೀಳುವಂತಾಯಿತು.
ಒಟ್ಟನಲ್ಲಿ ಉಚಿತ ಹಾಲು ವಿತರಣೆ ಸೂಕ್ತ ರೀತಿ ಆಗದೇ ಕೋವಿಡ್-೧೯ ಹರಡುವ ಭೀತಿ ಹೆಚ್ಚಿಸಿದೆ. ಬಡ ಜನರು ಕೇಳೋದಿಲ್ಲ ಅಂತಾ ಪಟ್ಟಣ ಪಂಚಾಯತ್ ಈ ರೀತಿ ಮಾಡ್ತಿದ್ಯಾ? ಅನ್ನೋದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಆಕ್ರೋಶವಾಗಿದೆ.

Click to comment

Trending

Exit mobile version