ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚಂಗಮ್ಮನ ಜಾತ್ರೆಗೆ ಬಂದ ಕೋಲಾರದ ಸುಮಾರು ೩೦ಕ್ಕಿಂತ ಹೆಚ್ಚು ಜನರು ಊಟ ವಸತಿ ಇಲ್ಲದೆ ನಡೆಸಿದ ಪರದಾಟಕ್ಕೆ ಕೊನೆಗೆ ತೆರೆ ಬಿದ್ದಿದೆ.
ಸದ್ಯ ಕೋಲಾರದಿಂದ ಬಂದ ಈ ೩೦ ಮಂದಿ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿ ಬಳ್ಳಾರಿ ಸಂಸದ ದೇವೇಂದ್ರಪ್ಪ ಇವರೆಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಇನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ,ಸರ್ವ ಸದಸ್ಯರು, ಹರಪನಹಳ್ಳಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೀಮಾ ನಾಯಕ್,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಉಚ್ಚಂಗಿದುರ್ಗ ಗ್ರಾಮಸ್ಥರ ನೇತೃತ್ವದಲ್ಲಿ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು.
ಅದರಲ್ಲೂ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಉಚ್ಚಂಗಿದುರ್ಗದಲ್ಲಿ ಬೀಡುಬಿಟ್ಟಿದ್ದ ಈ ಜನರಿಗೆ ಅಕ್ಕಿ ವಿತರಿಸಿ ಎಲ್ಲರ ಗಮನ ಸೆಳೆದರು.
ಇನ್ನು ಈ ಜನರ ಸಂಕಷ್ಟವನ್ನು ಆರ್‌ಎಸ್‌ಎಸ್ ಕಾರ್ಯಕರ್ತ ಪರಶುರಾಮ್ ವಿಡಿಯೋ ಮೂಲಕ ಗ್ರಾಮ ಪಂಚಾಯಿತಿ ಸೇರಿದಂತೆ ಇತರೆ ಅಧಿಕಾರಿಗಳಿಗೆ ತಲುಪಿಸಿದ್ದರು.
ಉಚ್ಚಂಗಿದುರ್ಗದಲ್ಲಿ ಊಟವಿಲ್ಲದೇ ಪರದಾಡಿದ ಕೋಲಾರದ 30 ಮಂದಿ

Please follow and like us: