ಕ್ವಾರಂಟೈನ್‌ನಲ್ಲಿ ಲಿಂಗಸೂಗೂರಿನ ಯುವಕ-ಯುವತಿ..

ಲಿಂಗಸೂಗೂರು: ಬಾಗಲಕೋಟೆಯಲ್ಲಿ ಕೊರನಾದಿಂದ ಸಾವಿಗೀಡಾಗಿದ್ದ ವೃದ್ಧನ ಮಗನ ಜೊತೆ ಟ್ರಾವೆಲ್ ಮಾಡಿದ್ದ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಅಂದ ಹಾಗೇ ಬೆಂಗಳೂರಿನಿAದ ಬಾಗಲಕೋಟೆ ಮಾರ್ಗವಾಗಿ ಓರ್ವ ಯುವತಿ ಹಾಗೂ ಇನ್ನೊಬ್ಬ ಯುವಕ ಲಿಂಗಸೂಗೂರು ಪಟ್ಟಣಕ್ಕೆ ಆಗಮಿಸಿದ್ರು..
ಇದ್ರ ಹಿನ್ನೆಲೆಯಲ್ಲಿ ತಕ್ಷಣ ಇದರ ಮಾಹಿತಿ ಪಡೆದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಮಕೃಷ್ಣ,
ಹಟ್ಟಿಯ ಈ ಯುವಕ ಹಾಗೂ ಲಿಂಗಸೂಗೂರಿನ ಯುವತಿಯನ್ನು ಕ್ವಾರಂಟೈನ್‌ನಲ್ಲಿಟ್ಟಿದ್ದಾರೆ.
ಇದೇ ವೇಳೆ ಎಕ್ಸ್ ಪ್ರೆಸ್ ಟಿವಿಯೊಂದಿಗೆ ಮಾತನಾಡಿರುವ ಅಧಿಕಾರಿ ಡಾ.ರಾಮಕೃಷ್ಣ, ಲಿಂಗಸೂಗೂರು ತಾಲೂಕಿನ ಜನರು ಆತಂಕ ಪಡಬೇಕಾಗಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

Please follow and like us:

Related posts

Leave a Comment