ಬೆಂಗಳೂರು

ಅರಕಲಗೂಡಿನಲ್ಲಿ ಹಸಿವಿನಿಂದ ಬಳಲಿ..ಬಳಲಿ..ಸತ್ತ

Published

on

ಅರಕಲಗೂಡು: ಇದು ನಿಜಕ್ಕೂ ದುರಂತ..ಯಾಕ0ದ್ರೆ ಲಾಕ್ ಡೌನ್‌ನಿಂದಾಗಿ ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ.
ಇತ್ತೀಚಿಗಷ್ಟೆ ರಾಜ್ಯದ ೪-೫ ಕಡೆ ಆಹಾರವಿಲ್ಲದೆ ಹಸಿವಿನಿಂದ ಬಳಲಿ ಇಬ್ಬರು ಸಾವು ಕಂಡಿದ್ದ ಬಗ್ಗೆ ಮಾಹಿತಿ ಹೊರಬಿದ್ದಿತ್ತು.
ಇದೀಗ ಇವರ ಪಟ್ಟಿಗೆ ಮತ್ತೊಬ್ಬ ವ್ಯಕ್ತಿ ಸಾವು ಕಾಣುವ ಮೂಲಕ ಸೇರ್ಪಡೆಯಾಗಿದ್ದಾನೆ.
ಅಂದ ಹಾಗೇ ಅರಕಲಗೂಡಿನಲ್ಲಿ ಲಾಕ್ ಡೌನ್ ಪರಿಣಾಮ ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ೩೫ ವರ್ಷ ವಯಸ್ಸಿನ ಅಪರಿಚಿತ ಭಿಕ್ಷÄಕ ಸಾವು ಕಂಡಿದ್ದಾನೆ.
ಸದ್ಯ ಅರಕಲಗೂಡು ಎಪಿಎಂಸಿ ಮುಂಭಾಗದಲ್ಲಿ ಸುಮಾರು ತಿಂಗಳುಗಳಿAದ ಈ ನಿರಾಶ್ರಿತ ಆಸರೆ ಪಡೆದಿದ್ದ.ಆದರೆ ಹತ್ತು ದಿನಗಳಿಂದ ಹೋಟೆಲ್‌ಗಳು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದ ಪರಿಣಾಮ ಆತನಿಗೆ ತಿನ್ನಲು ಆಹಾರವಿಲ್ಲದಂತಾಗಿದೆ.ಅಲ್ಲದೆ,ಇದೇ ಪರಿಸ್ಥಿತಿ ಅಂದಿನಿAದ ಇಂದಿನ ತನಕ ಮುಂದುವರೆದ ಪರಿಣಾಮ ಕೊನೆಗೂ ಆತ ಸಾವು ಕಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಆತನ ಶವದ ಮುಂಭಾಗದಲ್ಲಿ ಊಟದ ಪಾತ್ರೆ ಮತ್ತು ತೆಂಗಿನಕಾಯಿಯ ಚೂರುಗಳು ಬಿದ್ದಿರುವುದು ಅವನೊಬ್ಬ ಭಿಕ್ಷÄಕ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.
ಇದೇ ವೇಳೆ ಪೊಲೀಸರ ಸೂಚನೆ ಮೇರೆಗೆ ಪೌರ ಕಾರ್ಮಿಕರು ಈತನ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

Click to comment

Trending

Exit mobile version