ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಆರ್.ಅಶೋಕ್ ತೀರುಗೇಟು

ಕೆ.ಆರ್.ಪುರ(ಬೆಂಗಳೂರು):ಪ್ರಧಾನಿ ನರೇಂದ್ರ ಮೋದಿ ಅವರ ದೀಪ ಬೆಳಗಿಸುವ ವಿಚಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ
ಟೀಕೆ ಮಾಡುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತೀರುಗೇಟು ನೀಡಿದ್ದಾರೆ.
ಬೆಂಗಳೂರಿನ ಭಟ್ಟರಹಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವ ಸೋಮಣ್ಣ, ಸಚಿವ ಬೈರತಿ ಬಸವರಾಜ ಜೊತೊಗೂಡಿ ಕೆ.ಆರ್.ಪುರ ಕ್ಷೇತ್ರದ ೪೦ ಸಾವಿರ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿ ಮಾತನಾಡಿದ ಅವರು, ಕೊರೊನಾ ಹೋಗಲಾಡಿಸುವ ಸಲುವಾಗಿ ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು.ಆದರೆ ಅದಕ್ಕೆ ಟೀಕೆ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸಂಸ್ಥಾಪಕ ದಿನದ ಅಂಗವಾಗಿ ದೀಪ ಬೆಳಗಲು ಪರೋಕ್ಷವಾಗಿ ಮೋದಿ ಪ್ಲಾನ್ ಎಂದಿರುವುದು ಸರಿಯಲ್ಲ ಎಂದು ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು ಕುಮಾರಸ್ವಾಮಿ ಲಕ್ಷಾಂತ ಕಾರ್ಯಕ್ರಮಗಳಲ್ಲಿ ದೀಪ ಹಚ್ಚಿದ್ದಾರೆ.ಹಾಗಾದರೇ ಅದಕ್ಕೆ ಏನು ಹೇಳಬೇಕು ಅಂತ ಕುಮಾರಸ್ವಾಮಿಗೆ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.
ಇದೇ ವೇಳೆ ಸರ್ಕಾರದ ಬಡವರಿಗೆ, ನಿರ್ಗತಿಕರಿಗೆ ವಿತರಿಸುತ್ತಿರುವ ಆಹಾರ ಸಾಮಗ್ರಿಗಳಲ್ಲಿ ಕಳಪೆ ಅಥವಾ ವಂಚನೆ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಅಲ್ದೆ..ರಾಜ್ಯದಲ್ಲಿ ಮೊದಲು ಮುಂಜಾಗ್ರತ ಕ್ರಮ ಕೈಗೊಂಡ ಹಿನ್ನೆಲೆ ಸಾವು-ನೋವಿನ ಪ್ರಮಾಣ ಕಡಿಮೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮಾತನಾಡಿ, ಈ ಭಾರಿ ಭಾರತ ಲಾಕ್ ಡೌನ್‌ನಿಂದ ಜನರಿಗೆ ೧೫ ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿ ನೀಡಲಾಗಿದೆ.ಕಾರ್ಮಿಕ ಇಲಾಖೆ ವತಿಯಿಂದ ಒಂದು ಲಕ್ಷ ಕಿಟ್ ಬ್ಯಾಗ್‌ಗಳನ್ನು ತಯಾರಿಸಿದ್ದೇವೆ. ಪ್ರತಿ ದಿನ ಅರ್ಧ ಲೀಟರ್ ಹಾಲು ಕೂಡ ಕೊಡಲಾಗುತ್ತಿದೆ ಎಂದು ವಿವರಿಸಿದರು.

ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರ(ಬೆಂಗಳೂರು)

Please follow and like us:

Related posts

Leave a Comment